ತುರುವೇಕೆರೆ :
ಸರ್ಕಾರವು ಕಾರ್ಮಿಕರಿಗೆ ನೀಡಿದ 2 ಸಾವಿರ ಪಡಿತರ ಕಿಟ್‍ಗಳನ್ನು ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಅವರು ಸ್ವಾರ್ಥ ರಾಜಕೀಯ ಉದ್ದೇಶದಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರು ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಎಂ.ಟಿ.ಕೃಷ್ಣಪ್ಪ ಅವರು ಜಿಲ್ಲೆಯ 10 ತಾಲೂಕಿನಲ್ಲಿ ಮತ ಪಡೆದು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಆದರೇ ತುರುವೇಕೆರೆ ಕ್ಷೇತ್ರದಲ್ಲಿನ ಜನರಿಗೆ ಮಾತ್ರ ಸರ್ಕಾರ ನೀಡಿರುವ ಕಿಟ್‍ಗಳನ್ನು ನೀಡುತ್ತಿದ್ದು, ಇತರೆ ತಾಲ್ಲೂಕಿನ ಜನರಿಗೆ ಅನ್ಯಾಯ ಮಾಡುತ್ತಿದ್ದು, ಕಾನೂನು ಬಾಹಿರವಾಗಿದೆ. ಪಡಿತರ ಕಿಟ್‍ಗಳನ್ನು ಶ್ರಮಿಕರಿಗೆ, ಕಾರ್ಮಿಕರಿಗೆ ನೀಡುವ ಸರ್ಕಾರದ ಉದ್ದೇಶವೇ ವಿಫಲವಾಗಿದೆ.
ಸುದ್ದಿಗೋಷ್ಟಿಯಲ್ಲಿ ಬಾಣಸಂದ್ರ ಗ್ರಾ.ಪಂ ಅಧ್ಯಕ್ಷ ಆನಂದ್‍ಮರಿಯಾ, ಬಾಣಸಂದ್ರ ಜಿಪಂ ಕ್ಷೇತ್ರದ ಅಕಾಂಕ್ಷಿ ಬಾಣಸಂದ್ರ ರಮೇಶ್, ಮುಖಂಡರುಗಳಾದ ವೆಂಕಟಾಪುರ ಯೋಗೀಶ್, ರೇಣುಕಪ್ಪ, ಕಾಂತರಾಜು, ಎಸ್‍ಸಿ-ಎಸ್‍ಟಿ ತಾಲ್ಲೂಕು ಅಧ್ಯಕ್ಷ ತಿಮ್ಮೇಶ್, ಹನುಮಂತಯ್ಯ, ಎಸ್‍ಸಿ-ಎಸ್‍ಟಿ ಸಿ.ಎಸ್.ಪುರ ಹೋಬಳಿ ಅಧ್ಯಕ್ಷ ರಮೇಶ್, ಕುಮಾರ್, ಗಿರೀಶ್, ಇತರರು ಇದ್ದರು.
ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಅವರು ತನ್ನ ಸ್ವಾರ್ಥಕ್ಕಾಗಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರಿಗೆ ಪಡಿತರ ಕಿಟ್ ನೀಡುತ್ತಿದ್ದಾರೆ. ಆದ್ದರಿಂದ ಸದ್ಯದಲ್ಲಿಯೇ ಕಾರ್ಮಿಕ ಆಯುಕ್ತರಾದ ಅಕ್ರಂಪಾಷ ಅವರನ್ನು ಖುದ್ದು ಭೇಟಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು, ಜಿಲ್ಲಾಧಿಕಾರಿಗಳು ಸಹ ವಿಧಾನ ಪರಿಷತ್ ಸಭಾಧ್ಯಕ್ಷರಿಗೆ ಪತ್ರ ಬರೆದು ಸೂಕ್ತ ತನಿಖೆ ಕೈಗೊಳ್ಳಬೇಕು.
-ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ