ತುರುವೇಕೆರೆ:

ತಾಲ್ಲೂಕಿನ ಹಲವು ಕಡೆಗಳಲ್ಲಿ ಕಳೆದೆರಡು ದಿನಗಳಿಂದ ವರುಣನ ಅಬ್ಬರದಿಂದ ಕೆಲವು ತಗ್ಗು ಪ್ರದೇಶ ಸೇರಿ ಕೆಲವು ಮನೆ, ಶಾಲೆಗೆ ಮಳೆ ನೀರು ನುಗ್ಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಕಳೆದೆರಡು ದಿನಗಳಿಂದ ವರಣನ ಕೃಪೆಯಿಂದ ರೈತರಿಗೆ ಹರ್ಷ ತಂದಿದೆ. ಕೆಲ ದಿನಗಳಿಂದ ಮಳೆ ಇಲ್ಲದೆ ಓಣಗುತ್ತಿದ್ದ ರಾಗಿ, ಅವರೆ, ತೊಗರಿ, ಅಲಸಂದೆ, ಉದ್ದು, ಮೇವಿನ ಜೋಳ ಸೇರಿದಂತೆ ಬೆಳೆಗಳಿಗೆ ಹೆಚ್ಚು ಅನುಕೂಲವಾಗಿದೆ. ತಾಲ್ಲೂಕಿನ ಸಂಪಿಗೆ 8.6, ದಬ್ಬೆಘಟ್ಟ 20.2, ಮಾಯಸಂದ್ರ 32.6, ದಂಡಿನಶಿವರ 65.2, ತುರುವೇಕೆರೆ 48.2 ಮಿ.ಮಿ ಮಳೆ ಮಾಪನದಲ್ಲಿ ದಾಖಲಾಗಿದೆ. ಪಟ್ಟಣದಲ್ಲಿ ಮಾಯಸಂದ್ರ ರಸ್ತೆಯಲ್ಲಿನ ಆದಿಶಕ್ತಿ ಬಾರ್ ಮುಂಭಾಗದಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








