ತುರುವೇಕೆರೆ : ಎಲ್ಲೆಡೆ ಮಳೆ : ಕುಸಿಯುತ್ತಿವೆ ಮನೆಗಳು!

ತುರುವೇಕೆರೆ :

      ತಾಲ್ಲೂಕಿನ ಹಲವು ಕಡೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆಲವು ಮನೆಗಳು ಕುಸಿದಿರುವುದಲ್ಲದೆ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಹಾನಿಯುಂಟು ಮಾಡಿದೆ.

ಕಳೆದ ಮೂರು ದಿನಗಳಿಂದಲೂ ರಾತ್ರಿ ಹಗಲೆನ್ನದೆ ಸುರಿಯುತ್ತಿರುವ ಮಳೆಯಿಂದ ಕೆಲವು ಮನೆಗಳು ಕುಸಿದಿವೆ. ದುಂಡ ಮಜರೆ ಲಕ್ಕಸಂದ್ರ ಗ್ರಾಮದಲ್ಲಿ ಮಳೆಯಿಂದ ಮನೆಯೊಂದು ಕುಸಿದಿದೆ. ಪಟ್ಟಣದ ಕೆಇಬಿ ಹಿಂಭಾಗದ ಹೆಂಚಿನ ಮನೆಯೊಂದು ಮಂಗಳವಾರ ಮಧ್ಯಾಹ್ನದ ಸಮಯದಲ್ಲೆ ಕುಸಿದಿದೆ. ಎಲ್ಲಿಯೂ ಯಾವುದೇ ರೀತಿಯ ಆವಘಡ ಸಂಭವಿಸಿಲ್ಲ.

ವರಣನ ಕೃಪೆಯಿಂದ ರೈತರಿಗೆ ಹರ್ಷ ತಂದಿದ್ದು ಕೆಲದಿನಗಳಿಂದ ಮಳೆ ಇಲ್ಲದೆ ಓಣಗುತ್ತಿದ್ದ ರಾಗಿ, ಅವರೆ, ತೊಗರಿ, ಅಲಸಂದೆ, ಉದ್ದು, ಮೇವಿನಜೋಳ ಸೇರಿದಂತೆ ವಾಣಿಜ್ಯ ಬೆಳೆಗಳಿಗೆ ಹೆಚ್ಚು ಅನುಕೂಲವಾಗಿದೆ. ತಾಲ್ಲೂಕಿನ ಸಂಪಿಗೆ 8.6, ದಬ್ಬೆಘಟ್ಟ 20.2, ಮಾಯಸಂದ್ರ 32.6, ದಂಡಿನಶಿವರ 65.2, ತುರುವೇಕೆರೆ 48.2 ಮಿ.ಮಿ ಮಳೆ ಮಾಪನದಲ್ಲಿ ದಾಖಲಾಗಿದೆ. ಪಟ್ಟಣದಲ್ಲಿ ಮಾಯಸಂದ್ರ ರಸ್ತೆಯಲ್ಲಿನ ಆದಿಶಕ್ತಿ ಬಾರ್ ಮುಂಭಾಗದಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ