ತುಟ್ಟಿಯಾದ ಮೊಬೈಲ್‌ ದರ ….ಇಂಟರ್‌ ನೆಟ್….!

ವದೆಹಲಿ:

    ಭಾರತದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಗಳಾದ ಜಿಯೋ ಮತ್ತ ಏರ್‌ಟೆಲ್‌, ವಿಐ ಸೇರಿ ಬಹುತೇಕ ಕಂಪನಿಗಳು ತಮ್ಮ ಪರಿಷ್ಕೃತ ಮೊಬೈಲ್ ಪ್ಲಾನ್ ದರವನ್ನು ಇಂದಿನಿಂದ (ಜುಲೈ3) ಜಾರಿಗೊಳಿಸುವುದಾಗಿ ಘೋಷಿಸಿದ್ದವು. ರಿಲಯನ್ ಜಿಯೋ ಪೈಪೋಟಿ ಮನೋಭಾವ ಮುಂದುವರಿಸಿದ್ದು, ಭಾರ್ತಿ ಏರ್‌ಟೆಲ್‌ಗಿಂತ ಕಡಿಮೆ ಪ್ಲಾನ್‌ ದರವನ್ನು ನಿಗದಿ ಮಾಡಿದೆ.

    ಏರ್‌ಟೆಲ್‌ನ ಏರಿಕೆಯು ಶೇಕಡಾ 10-21 ರ ವ್ಯಾಪ್ತಿಯಲ್ಲಿದ್ದರೆ, ಜಿಯೋ ಬೆಲೆಗಳನ್ನು ಶೇಕಡಾ 12-25 ರಷ್ಟು ಹೆಚ್ಚಿಸಿದೆ. ಎರಡೂ ಕಂಪನಿಗಳ ಹೊಸ ಪ್ಲಾನ್ ದರಗಳು ಜುಲೈ 3 ರಿಂದ (ಇಂದಿನಿಂದ) ಅನ್ವಯವಾಗುತ್ತವೆ.ಆದಾಗ್ಯೂ, ಜಿಯೋದ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳು ಪ್ರತಿಸ್ಪರ್ಧಿಗಳಿಗಿಂತ ಶೇ. 20 ಪ್ರತಿಶತದಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ ಇವೆ. ಪೋಸ್ಟ್‌ ಪೇಯ್ಡ್‌ ಪ್ಲಾನ್‌ ದರದಲ್ಲೂ ಜಿಯೋ ದರ ಶೇಕಡ 29 ರಷ್ಟು ಕಡಿಮೆ ಇದೆ.

ಜಿಯೋ vs ಏರ್‌ಟೆಲ್ ಪ್ರೀಪೇಯ್ಡ್‌ ಹೊಸ ಪ್ಲಾನ್‌ದರ

ಹೊಸ ಪ್ಲಾನ್‌ ದರಗಳನ್ನು ಹೋಲಿಸಿ ನೋಡಿದರೆ, ರಿಲಯನ್ಸ್‌ ಜಿಯೋ ಟೆಲಿಕಾಂನ ಬಹುತೇಕ ಎಲ್ಲ ರೀಚಾರ್ಜ್‌ ಯೋಜನೆಗಳು ಇನ್ನು ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿರುವುದು ಗಮನಸೆಳೆದಿದೆ.

1) ಅನಿಯಮಿತ ಕರೆಯ ಪ್ಲಾನ್‌

ಏರ್‌ಟೆಲ್:28 ದಿನಗಳ ಅವಧಿಯ 179 ರೂಪಾಯಿ ಇದ್ದ ಪ್ಲಾನ್ ಈಗ 199 ರೂಪಾಯಿ ಪ್ಲಾನ್ ಆಗಿದೆ. 84 ದಿನಗಳ ಅವಧಿಯ ಪ್ಲಾನ್ 455 ರೂಪಾಯಿಯಿಂದ 509 ರೂಪಾಯಿಗೆ ಏರಿದೆ.ವಾರ್ಷಿಕ ಯೋಜನೆ 1,799 ರೂಪಾಯಿ ಇದ್ದದ್ದು 1,999 ರೂಪಾಯಿ ಆಗಿದೆ.

ಜಿಯೋ :28 ದಿನಗಳ 2GB ಪ್ಲಾನ್ ಈಗ 155 ರೂಪಾಯಿಂದ 189 ರೂಪಾಯಿಗೆ ಏರಿದೆ. ಮೂರು ತಿಂಗಳ ಅವಧಿಯ 6GB ಪ್ಲಾನ್ 395 ರೂಪಾಯಿಯಂದ 479 ರೂಪಾಯಿಗೆ ಏರಿಕೆಯಾಗಿದೆ. ವಾರ್ಷಿಕ 24GB ಪ್ಲಾನ್ ಈಗ 1,899 ರೂಪಾಯಿಯಿಂದ 1,559 ರೂಪಾಯಿಗೆ ಏರಿದೆ.

2) ದೈನಂದಿನ ಡೇಟಾ ಪ್ಲಾನ್‌

ಏರ್‌ಟೆಲ್:28 ದಿನಗಳ ಅವಧಿಯ ದಿನಕ್ಕೆ 1GB ಡೇಟಾ ಪ್ಲಾನ್ ಈಗ 265 ರೂಪಾಯಿಯಿಂದ 299 ರೂಪಾಯಿಗೆ ಏರಿದೆ. ದಿನಕ್ಕೆ 3GB ಪ್ಲಾನ್‌ ದರ 399 ರೂಪಾಯಿ ಇದ್ದದ್ದು 449 ರೂಪಾಯಿ ಆಗಿದೆ. ದೀರ್ಘಾವಧಿ ಪ್ಲಾನ್ ಅಂದರೆ 84-ದಿನಗಳ ಅವಧಿಯ ದಿನಕ್ಕೆ 1.5GB ಪ್ಲಾನ್‌ 719 ರೂಪಾಯಿ ಇದ್ದದ್ದು 859 ರೂಪಾಯಿ ಆಗಿದೆ.

ಜಿಯೋ :28-ದಿನಗಳ ಅವಧಿಯ ದಿನಕ್ಕೆ 1GB ಪ್ಲಾನ್ 209 ರೂಪಾಯಿ ಇದ್ದದ್ದು 249 ರೂಪಾಯಿ ಆಗಿದೆ. ಇದೇ ಅವಧಿಯ ದಿನಕ್ಕೆ 3GB ಪ್ಲಾನ್‌ 399 ರೂಪಾಯಿಯಿಂದ 449 ರೂಪಾಯಿಗೆ ಏರಿದೆ. 84 ದಿನಗಳ ಅವಧಿಯ ದಿನಕ್ಕೆ 1.5GB ಪ್ಲಾನ್‌ನ ಬೆಲೆ 666 ರೂಪಾಯಿ ಇದ್ದದ್ದು 799 ರೂಪಾಯಿ ಆಗಿದೆ.

3) ಡೇಟಾ ಆಡ್‌ ಆನ್ ಪ್ಲಾನ್‌ಗಳು

ಏರ್‌ಟೆಲ್ :1GB ಆಡ್‌ ಆನ್ ಪ್ಲಾನ್‌ 19 ರೂಪಾಯಿ ಇದ್ದದ್ದು ಈಗ 22 ರೂಪಾಯಿ ಆಗಿದೆ. ಅದೇ ರೀತಿ 4GB ಆಡ್‌ ಆನ್‌ ಪ್ಲಾನ್‌ ದರ 65 ರೂಪಾಯಿಯಿಂದ 77 ರೂಪಾಯಿಗೆ ಏರಿದೆ.

ಜಿಯೋ :1GB ಆಡ್‌ ಆನ್ ಪ್ಲಾನ್‌ 15 ರೂಪಾಯಿ ಇದ್ದದ್ದು ಈಗ 19 ರೂಪಾಯಿ ಆಗಿದೆ. 6GB ಆಡ್‌ ಆನ್ ಪ್ಲಾನ್ 61 ರೂಪಾಯಿ ಇದ್ದದ್ದು ಈಗ 69 ರೂಪಾಯಿ ಆಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap