ಭಾರತೀಯ ಪತ್ರಕರ್ತನ ಪರಿಕಲ್ಪನೆ ಕದ್ದ ಟ್ವಿಟ್ಟರ್…!

ಮುಂಬೈ:

   ಸಮಾಜಿಕ ಅಭಿವ್ಯಕ್ತಿಯ ವೇದಿಕೆ ಎಂದೇ ಖ್ಯಾತವಾಗಿರುವ ಟ್ವಿಟರ್ ಹಾಗೂ ಅದರ ಮುಖ್ಯಸ್ಥ ಹಾಗು ಟೆಸ್ಲಾ ಮುಂತಾದ ಕಂಪನಿ ಮಾಲಿಕರಾದ ಎಲಾನ್ ಮಸ್ಕ್ ವಿರುದ್ಧ ಮುಂಬೈ ಮೂಲದ ಪತ್ರಕರ್ತರೊಬ್ಬರು ತಮ್ಮ ಪರಿಕಲ್ಪನೆಯನ್ನು ಟ್ವಿಟ್ಟರ್‌ ಕದ್ದಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
 
   ಆಡಳಿತದ ಮುಖ್ಯಸ್ಥರು ಸೇರಿದಂತೆ ಪ್ರಮುಖ ವ್ಯಕ್ತಿಗಳಿಗೆ ಹೊಸ ಲೇಬಲ್ ಅಥವಾ ಹೊಸ ಟಿಕ್ ನೀಡುವುದು ತಮ್ಮ ಪರಿಕಲ್ಪನೆಯಾಗಿತ್ತು ಎಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ನೀಡಿರುವ ದೂರಿನಲ್ಲಿ ಪತ್ರಕರ್ತ ರೂಪೇಶ್ ಸಿಂಗ್ ಆರೋಪಿಸಿದ್ದು, ಭಾರತೀಯ ದಂಡ ಸಂಹಿತೆ ವಿಭಾಗ 420 , 406, 120B ಮತ್ತು ಹಕ್ಕುಸ್ವಾಮ್ಯ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ದೃಢಪಡಿಸಿದ ಸಾಮಾನ್ಯವಾದ ಖಾತೆಗಳಿಗೆ ಟ್ವಿಟರ್ ಬ್ಲೂ ಟಿಕ್ ನ್ನು ನೀಡುತ್ತಿದ್ದು, ಪ್ರಧಾನಿ ಮೋದಿ, ಅಮೇರಿಕ ಅಧ್ಯಕ್ಷರಾದ ಜೋ ಬೈಡನ್ ಅವರಂತಹ ಪ್ರಮುಖ ವ್ಯಕ್ತಿಗಳಿಗೆ ಕಂದು ಬಣ್ಣದ ಟಿಕ್ ನೀಡಲು ಆರಂಭಿಸಿದೆ.

    ಮಾ.01 ರಂದು ಪತ್ರಕರ್ತ ರೂಪೇಶ್ ಸಿಂಗ್ ದೂರು ನೀಡಿದ್ದು, ಎಲಾನ್ ಮಸ್ಕ್ ಜೊತೆಗೆ ಟ್ವಿಟರ್ ನ ಮಾಜಿ ಭಾರತದ ಮುಖ್ಯಸ್ಥ ಮನೀಷ್ ಮಹೇಶ್ವರಿ ವಿರುದ್ಧವೂ ದೂರು ದಾಖಲಿಸಿದ್ದಾರೆ. ಪತ್ರಕರ್ತ, ಲೇಖಕ ಹಾಗೂ ನಿರ್ದೇಶಕರೂ ಆಗಿರುವ ಸಿಂಗ್, ಟ್ವಿಟರ್ ನಲ್ಲಿ ಸಕ್ರಿಯವಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link