ಮಂಗಳೂರು:
ವಿಮಾನದಲ್ಲಿ ಅಕ್ರಮವಾಗಿ ಡೈಮಂಡ್ ಸಾಗಾಟ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರು ಪೊಲೀಸರ ಅತಿಥಿಯಾಗಿದ್ದಾರೆ.
ಮಂಗಳೂರು ಏರ್ಪೋರ್ಟ್ನ DRI ಅಧಿಕಾರಿಗಳ ತಂಡಕ್ಕೆ 2.60 ಕೋಟಿ ರೂಪಾಯಿ ಮೊತ್ತದ ಅಕ್ರಮ ವಜ್ರ ಇರೋದು ಪತ್ತೆಯಾಗಿದೆ. ದುಬೈನಿಂದ ಪ್ರಯಾಣ ಬೆಳೆಸಿದ ಅನಸ್ ಮತ್ತು ಅಮ್ಮರ್ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು.
ತಪಾಸಣೆಯ ವೇಳೆ ಈ ಇಬ್ಬರು ಪ್ರಯಾಣಿಕರಲ್ಲಿ 2.60 ಕೋಟಿ ರೂಪಾಯಿ ಮೊತ್ತದ ವಜ್ರ ಇರುವುದು ಬೆಳಕಿಗೆ ಬಂದಿವೆ. ಕೂಡಲೇ ಕಾರ್ಯಾಚರಣೆ ನಡೆಸಿದ DRI ಅಧಿಕಾರಿಗಳ ತಂಡ ವಜ್ರವನ್ನು ವಶಕ್ಕೆ ಪಡೆದುಕೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/02/Untitled-5-15.jpg)