ತಿಪಟೂರು
ಬಟ್ಟೆ ತೊಳೆಯಲು ತೆರಳಿದ್ದ ಅತ್ತೆ ಸೊಸೆ ಇಬ್ಬರು ಕಟ್ಟೆಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ತಿಪಟೂರಿನಲ್ಲಿ ನಡೆದಿದೆ.ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂಚನಘಟ್ಟ ಬಳಿಯ ಹೊಸಕೆರೆಯಲ್ಲಿ ಘಟನೆ ನಡೆದಿದ್ದು. ನಗರದ ನಿವಾಸಿಗಳಾದ ಅನುಸೂಯಮ್ಮ( 50) ಹಾಗೂ ಚಂದ್ರಿಕಾ(25)ವರ್ಷ ಬಟ್ಟೆ ತೊಳೆಯಲು ಹೋಗಿ ಕಾಲು ಜಾರಿ ಮೃತಪಟ್ಟ ದುರ್ದೈವಿಗಳು.
ಬಹುಪಾಲು ಜನರು ಇದೇ ಕಟ್ಟೆಯನ್ನು ಬಟ್ಟೆ ತೊಳೆಯಲು ಬಳಸುತ್ತಿದ್ದು ಅದರಂತೆ ಬಟ್ಟೆ ತೊಳೆಯಲು ತೆರಳಿದರಂತೆ ಇನ್ನು ಇದೇ ಕೆರೆಯಲ್ಲಿ ಹಲವಾರು ವರ್ಷ ದಿಂದ ಸುಮಾರು 20 ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಇದೇ ಕಟ್ಟೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರು ಇದುವರೆಗೂ ಸಂಬಂಧ ಪಟ್ಟ ಇಲಾಖೆಗಳು ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಸೂಚನಾ ಫಲಕಗಳನ್ನು ಅಳವಡಿಸದೇ ಇರುವುದೆ ಈ ಅವಗಡಕ್ಕೆ ಕಾರಣ ಎಂದು ಗ್ರಾಮಸ್ಥರು ದೂರದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ