ಮಂಗಳೂರು:
ಜಿಲ್ಲೆಯ ಸುಳ್ಯ ತಾಲೂಕಿನ ಪಯಸ್ವಿನಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ .
ಮೃತರನ್ನು ಪುತ್ತೂರಿನ ಮೂಲದವರು ಎನ್ನಲಾಗಿದೆ. ಆರು ಯುವಕರು ಈಜಲು ಗುಂಪಿನಲ್ಲಿ ಬಂದಿದ್ದರು ಎಂದು ಮೂಲಗಳು ತಿಳಿಸಿವೆ.
ಮೊದಲು ಹೋದವರಲ್ಲಿ ಒಬ್ಬರು ಸುಳಿಗೆ ಸಿಲುಕಿದ್ದಾರೆ ಮತ್ತು ಇತರರು ಆತನನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ನಾಲ್ವರು ದಡ ತಲುಪಲು ಯಶಸ್ವಿಯಾಗಿದ್ದು, ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ.ಸ್ಥಳೀಯ ಯುವಕರು ಇಬ್ಬರು ಯುವಕರ ಮೃತದೇಹಗಳನ್ನು ನದಿಯಿಂದ ಹೊರತೆಗೆದಿದ್ದಾರೆ. ಎಲ್ಲಾ ಆರು ಯುವಕರು ದಿನಗೂಲಿ ಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ