ಇನ್ನೂ ಎರಡು ಆಡಿಯೋ ಇವೆ, ನಾಳೆ ರಿಲೀಸ್ ಮಾಡ್ತೇನೆ: ಚಲುವರಾಜು

ಬೆಂಗಳೂರು

  ಕಾಂಟ್ರ್ಯಾಕ್ಟರ್ ಹಾಗೂ ಮುನಿರತ್ನ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದೆ. ಮುನಿರತ್ನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಮುನಿರತ್ನ ಅವರ ಕುರಿತ ಇನ್ನೂ ಎರಡು ಆಡಿಯೋ ಇವೆ. ನಾಳೆ ರಿಲೀಸ್ ಮಾಡುತ್ತೇನೆ ಎಂದು ಗುತ್ತಿಗೆದಾರ ಚಲುವರಾಜು ಸ್ಫೋಟಕ ಹೇಳಿಕೆ ನೀಡಿದ್ದಾರೆ.

  ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜರಾಜೇಶ್ವರಿನಗರ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ತಂದೆ ಹನುಮಂತರಾಯಪ್ಪ ಜತೆ ಮಾತಾಡಿದ ಆಡಿಯೋ ಹಾಗೂ 30% ಕಮಿಷನ್​ ವಿಚಾರದ ಆಡಿಯೋ ಬಿಡುಗಡೆ ಮಾಡುತ್ತೇನೆ. ನಾಳೆ 2 ಆಡಿಯೋ ರಿಲೀಸ್​ ಮಾಡುತ್ತೇನೆ ಎಂದಿದ್ದಾರೆ.

  ಅವರು ಗಲಾಟೆ ಸೃಷ್ಟಿಸಿ ವೇಲು ನಾಯಕ್ ಮೇಲೆ ಆರೋಪ ಹೊರಿಸಲು ಹನುಮಂತನರಾಯಪ್ಪ ಮೂಲಕ ವಿಷಯಾಂತರಕ್ಕೆ ಕುತಂತ್ರ ಮಾಡಲಾಗಿದೆ ಎಂದು ಚಲುವರಾಜು ಆರೋಪಿಸಿದ್ದಾರೆ. ಬೆಳಗ್ಗೆ ನನ್ನನ್ನು ಕರೆದು ನ್ಯಾಯ ಕೊಡಿಸುತ್ತೇನೆ ಅಂದರು. ಬಳಿಕ ಹಣಕ್ಕೆ ಬೇಡಿಕೆ ಇಟ್ಟರು. ಇದಕ್ಕೆ ನಾನು ಈಗಾಗಲೇ ಉತ್ತರವನ್ನು ಕೊಟ್ಟಿದ್ದೇನೆ ಎಂದಿದ್ದಾರೆ.

   ಹನುಮಂತರಾಯಪ್ಪರ ಜತೆ ಮಾತಾಡಿರೋದು ಸತ್ಯ. ಶಾಸಕನನ್ನು ಬೈಯುವುದಕ್ಕೆ ಆಗುತ್ತಾ. 3 ವರ್ಷದಿಂದ ಎಷ್ಟು ಕಷ್ಟ ಪಟ್ಟಿದ್ದೇನೆ ನನಗೆ ಗೊತ್ತಿದೆ. ಇದು ಒಂದು ತಿಂಗಳ ಹಿಂದೆ ನಡೆದಿರುವ ಪ್ರಕರಣ. ರೇಣುಕಾಸ್ವಾಮಿ ಹೊಡೆದು ಹಾಕಿದ್ದು ಯಾರು ಗೊತ್ತಾ? ರೇಣುಕಾಸ್ವಾಮಿ ಹೊಡೆದಾಕಿದ್ದು ನನ್ನ ತಂಗಿ ಮಗ ಅಂದಿದ್ದರು. ಅವತ್ತೇ ನಾನು ಲೋಕಾಯುಕ್ತಕ್ಕೆ ಕಂಪ್ಲೆಂಟ್ ಕೊಟ್ಟಿದ್ದೆ ಎಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link
Powered by Social Snap