ಬೆಂಗಳೂರು:
ದಸರಾ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೆಂಗಳೂರಿನಿಂದ ಕಾರವಾರಕ್ಕೆ ಸೇಲಂ ಮೂಲಕ 2 ವಿಶೇಷ ರೈಲು ಸಂಚರಿಸಲಿವೆ ಎನ್ನಲಾಗಿದೆ.
ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ನಡುವೆ ಶಿರಾಡಿ ಘಾಟ್‌ನಲ್ಲಿ ಆಗಸ್ಟ್‌ನಲ್ಲಿ ಉಂಟಾಗಿದ್ದ ಭೂಕುಸಿತದಿಂದಾಗಿ ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರ ಸಂಪೂರ್ಣ ಸ್ತಬ್ದವಾಗಿತ್ತು. ಕೆಲ ದಿನಗಳ ಕಾಲ ಸೇಲಂ, ಪಾಲಕ್ಕಾಡ್, ಕಣ್ಣೂರು ಮೂಲಕ ಸುತ್ತುಬಳಸಿ ಮಂಗಳೂರು-ಕಾರವಾರ ಎಕ್ಸ್‌ಪ್ರೆಸ್ ರೈಲು ಸಂಚರಿಸುತ್ತಿತ್ತು. ಆದರೆ, ದಕ್ಷಿಣ ರೈಲ್ವೆ ಹೆಚ್ಚು ದಿನ ಈ ಮಾರ್ಗ ಬಳಸಲು ಅವಕಾಶ ನೀಡದೆ ಇರುವ ಕಾರಣ ರೈಲು ಸಂಚಾರವನ್ನು ನೈಋತ್ಯ ರೈಲ್ವೆ ಸಂಪೂರ್ಣ ಸ್ಥಗಿತಗೊಳಿಸಿತ್ತು.
ಈಗ ವಿಶೇಷ ರೈಲುಗಳ ಸಂಚಾರ ಶುರು ಮಾಡುವ ಮೂಲಕ ಅಂದಾಜು ಒಂದು ತಿಂಗಳ ಬಳಿಕ ಬೆಂಗಳೂರಿನಿಂದ ಮಂಗಳೂರಿಗೆ ಮತ್ತೆ ರೈಲು ಕಾರ್ಯಾಚರಣೆ ನಡೆಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
2 ವಿಶೇಷ ರೈಲು:
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಅ.5 ಮತ್ತು 7ರಂದು ಸಂಜೆ 6.50ಕ್ಕೆ ಕೆಎಸ್‌ಆರ್ ಬೆಂಗಳೂರು-ಕಾರವಾರ ಸ್ಪೆಷಲ್ ಎಕ್ಸ್‌ಪ್ರೆಸ್(ರೈಲು ಸಂಖ್ಯೆ 06523/06524)ಹೊರಡಲಿದೆ. ಮರುದಿನ ಸಂಜೆ 5.30ಕ್ಕೆ ಈ ರೈಲು ಕಾರವಾರ ತಲುಪಲಿದೆ. ಅ.6 ಮತ್ತು 8ರಂದು ಸಂಜೆ 6.05ಕ್ಕೆ ಕಾರವಾರದಿಂದ ಹೊರಟು ಮರುದಿನ ಸಂಜೆ 4.05ಕ್ಕೆ ಬೆಂಗಳೂರು ತಲುಪಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ