ದ್ವಿಚಕ್ರ ವಾಹನ ಸವಾರರೇ ಗಮನಿಸಿ : 2 ಕಡೆ ಮಿರರ್, ಇಂಡಿಕೇಟರ್ ಇಲ್ಲದಿದ್ರೆ 500 ರೂ. ದಂಡ ಫಿಕ್ಸ್!

ಬೆಂಗಳೂರು :

ವಾಹನ ಅಪಘಾತಗಳಿಗೆ ಕಡಿವಾಣ ಹಾಕಲು ಸಂಚಾರ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದು, ಇನ್ಮುಂದೆ ದ್ವಿಚಕ್ರ ವಾಹನಗಳಿಗೆ  ಎರಡು ಕಡೆ ಮಿರರ್ ಹಾಗೂ ಇಂಡಿಕೇಟರ್  ಇಲ್ಲದೆ ಹೊದರೆ 500 ರೂ.ದಂಡ ವಿಧಿಸಲು ಮುಂದಾಗಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆ ಅಪಘಾತಗಳಿಗೆ ಬ್ರೇಕ್ ಹಾಕಲು ಮುಂದಾಗಿದ್ದು, ಈಗ ದ್ವಿಚಕ್ರ ವಾಹನಗಳಿಗೆ ಎರಡು ಕಡೆ ಮಿರರ್ ಹಾಗೂ ಇಂಡಿಕೇಟರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಮುಂದಿನ ವಾರದಿಂದಲೇ ಈ ನಿಯಮ ಜಾರಿಗೆ ಬರಲಿದೆ. ನಿಯಮ ಉಲ್ಲಂಘಿಸಿದರೆ 500 ರೂ. ದಂಡ ತೆರಬೇಕಾಗುತ್ತದೆ.

ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಆಪ್‌ ಕಾರ್ಯಕರ್ತರ ಬಂಧನ

 

ಈ ಕುರಿತು ಮಾಹಿತಿ ನೀಡಿರುವ ಜಂಟಿ ಆಯುಕ್ತ (ಸಂಚಾರ) ಡಾ.ಬಿ.ಆರ್. ರವಿಕಾಂತೇಗೌಡ, ನಗರದಲ್ಲಿ ಸಂಭವಿಸುತ್ತಿರುವ ಅಪಘತಗಳಲ್ಲಿ ಹೆಚ್ಚಿನದಾಗಿ ದ್ಚಿಚಕ್ರ ವಾಹನಗಳೇ ತುತ್ತಾಗುತ್ತಿದ್ದು, ಮರಣ ಪ್ರಮಾಣದಲ್ಲಿ ಸಹ ದ್ವಿಚಕ್ರ ಸವಾರರ ಸಾವಿನ ಪ್ರಮಾಣವೇ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳಿಗೆ 2 ಕಡೆ ಮಿರರ್ ಹಾಗೂ ಇಂಡಿಕೇಟರ್ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

15 ಸ್ಥಳಗಳಲ್ಲಿ ಜಲ ಸಂಗ್ರಹ, ಮೇ 8ರಂದು ಸಮಾವೇಶ, ನೀರಾವರಿ ಯೋಜನೆಗಳ ಜಾರಿಗೆ ಜೆಡಿಎಸ್ ಸಂಕಲ್ಪ

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap