ಎರಡು ವರ್ಷ ನಂತರ ರಾಜ್ಯದ ಜನತೆ ಖುಷಿಪಡುವ ಸಂಗತಿ: 25 ಜಿಲ್ಲೆಗಳಲ್ಲಿ ಶೂನ್ಯ ಕೋವಿಡ್ ಕೇಸ್ ಗಳು ದಾಖಲು

ಬೆಂಗಳೂರು:

 ಕಳೆದ ಎರಡು ವರ್ಷಗಳಿಂದ ಕೋವಿಡ್ ಸೋಂಕಿನಿಂದ ಕಂಗೆಟ್ಟಿದ್ದ ರಾಜ್ಯದ ಜನತೆಗೆ ಇದು ನಿಜಕ್ಕೂ ಖುಷಿಯ ವಿಚಾರ. ನಿನ್ನೆ ಸೋಮವಾರ ರಾಜ್ಯದ 30 ಜಿಲ್ಲೆಗಳ ಪೈಕಿ 25 ಜಿಲ್ಲೆಗಳಲ್ಲಿ ಶೂನ್ಯ ಕೋವಿಡ್ ದಾಖಲಾಗಿದೆ.

ಮಾರ್ಚ್ 8,2020ರಂದು ರಾಜ್ಯಕ್ಕೆ ಕೋವಿಡ್ ಕಾಲಿಟ್ಟ ನಂತರ ಶೂನ್ಯ ಸೋಂಕು ದಾಖಲಾಗಿರುವುದು ರಾಜ್ಯದಲ್ಲಿ ಇದೇ ಮೊದಲು.ಇನ್ನು ಬೆಂಗಳೂರು ನಗರ, ಚಿತ್ರದುರ್ಗ, ಕೋಲಾರ, ಮೈಸೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಇನ್ನೂ ಕಾಣಿಸುತ್ತಿದೆ.

ಲಿಂಗಾಯಿತ, ಬ್ರಾಹ್ಮಣ, ದಲಿತರ ಇತಿಹಾಸ ಕುರಿತು ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ನಿನ್ನೆ ಸೋಮವಾರದಂದು 39,45,359 ರಷ್ಟಿದ್ದ ಒಟ್ಟು ಕೋವಿಡ್ -19 ಪ್ರಕರಣಗಳಿಗೆ 48 ಕೇಸುಗಳು ಈ ಜಿಲ್ಲೆಗಳಲ್ಲಿ ವರದಿಯಾಗಿವೆ. ರಾಜ್ಯದ ಕೋವಿಡ್ 19 ಪಾಸಿಟಿವ್ ದರವು ಕಳೆದ ಮೂರನೇ ಅಲೆಯ ಉತ್ತುಂಗ ಸಮಯದಲ್ಲಿ ಶೇಕಡಾ 6.21ರಷ್ಟಿದ್ದರೆ ಫೆಬ್ರವರಿ 5ರಂದು ಶೇಕಡಾ 6.02 ಕ್ಕೆ ಇಳಿದಿದೆ. ಆದಾಗ್ಯೂ, ಕೊರೋನಾ ಮೊದಲ ಎರಡು ಅಲೆಗಳ ಸಮಯದಲ್ಲಿ ಹೆಚ್ಚಿನ ಪಾಸಿಟಿವ್ ದರಗಳು ದಾಖಲಾಗಿದ್ದವು.

ಸೆಪ್ಟೆಂಬರ್ 27, 2020 ರಂದು ಮೊದಲ ಕೋವಿಡ್ ಅಲೆಯ ಸಂದರ್ಭದಲ್ಲಿ ಅತ್ಯಧಿಕ ಪಾಸಿಟಿವ್ ಪ್ರಮಾಣವು ಶೇಕಡಾ 12.54ರಷ್ಟಾಗಿತ್ತು. ಆದರೆ ಎರಡನೇ ಅಲೆಯ ಸಮಯದಲ್ಲಿ ಜೂನ್ 4, 2021ರಂದು ಶೇಕಡಾ 8.81 ರಷ್ಟಿತ್ತು. ಕರ್ನಾಟಕದ ಕೋವಿಡ್ ಚೇತರಿಕೆ ದರವು ಜುಲೈ 20 ರಂದು ಶೇಕಡಾ 35.29ರಷ್ಟಾಗಿತ್ತು.

ಎಮ್ಮೆ, ನಾಯಿ ವಿಚಾರಕ್ಕೆ ಅತ್ತೆ-ಸೊಸೆ ಜಗಳ. ಇಷ್ಟಕ್ಕೆ ದುಡುಕಿದ್ರಾ ಶಂಕ್ರಣ್ಣ?

ಸಾಂಕ್ರಾಮಿಕ ರೋಗದ ಮೊದಲ ಅಲೆಯು ರಾಜ್ಯದ ಜನಸಂಖ್ಯೆಯ ಮೇಲೆ ಹಾನಿಯನ್ನುಂಟುಮಾಡಿದಾಗ. ಇದು ಜನವರಿ 30, 2021 ರಂದು 98.06 ಪ್ರತಿಶತಕ್ಕೆ ಏರಿತು, ಮೊದಲ ಅಲೆಯು ಕ್ಷೀಣಿಸುತ್ತಿರುವಾಗ, ಮೇ 11, 2021 ರಂದು ಡೆಲ್ಟಾ ರೂಪಾಂತರದ ಮೇಲೆ ತೀವ್ರವಾದ ಎರಡನೇ ಅಲೆಯ ಸವಾರಿ ಉತ್ತುಂಗಕ್ಕೇರಿದಾಗ ಮತ್ತೆ ಕನಿಷ್ಠ ಶೇಕಡಾ 69.83ಕ್ಕೆ ಕುಸಿಯಿತು. ನಿನ್ನೆ ಸೋಮವಾರದ ವೇಳೆಗೆ ಚೇತರಿಕೆ ಪ್ರಮಾಣ ಶೇ.98.94ಕ್ಕೆ ಏರಿಕೆಯಾಗಿದೆ.

ಮೂರನೇ ಅಲೆಯ ವೇಳೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆಯು ಈ ವರ್ಷದ ಜನವರಿ 1 ರಂದು 9,386 ರಿಂದ ಜನವರಿ 24ರಂದು 3,62,487ಕ್ಕೆ ಏರಲು ಪ್ರಾರಂಭವಾಯಿತು. ನಿನ್ನೆ ಸೋಮವಾರ ಈ ಸಂಖ್ಯೆ 1,719 ಪ್ರಕರಣಗಳಿಗೆ ಇಳಿದಿದೆ.

ಹಿಂದು ದೇವಸ್ಥಾನಕ್ಕೆ ದಲಿತರನ್ನು ಪೂಜೆ ಮಾಡಲು ಬಿಡುತ್ತೀರಾ..?? – ಮಾಜಿ ಸಿಎಂ ಹೆಚ್‌ಡಿಕೆ ಪ್ರಶ್ನೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap