ದೆಹಲಿ : ವೈದ್ಯನನ್ನು ಕೊಂದು ಪರಾರಿಯಾದ ಇಬ್ಬರು ಯುವಕರು …!

ನವದೆಹಲಿ: 

    ಕೋಲ್ಕತಾ ಆರ್ ಜಿ ಕರ್ ಆಸ್ಪತ್ರೆ ಪ್ರಕರಣ ಹಸಿರಾಗಿರುವಂತೆಯೇ ಇತ್ತ ದೆಹಲಿ ಆಸ್ಪತ್ರೆಯಲ್ಲಿ ಇಬ್ಬರು ಅಪ್ರಾಪ್ತ ಯುವಕರು ತಮಗೆ ಚಿಕಿತ್ಸೆ ನೀಡಿದ ವೈದ್ಯರನ್ನೇ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

   ದೆಹಲಿಯ ಜೈತ್‌ಪುರದ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಅಪ್ರಾಪ್ತರು 55 ವರ್ಷದ ವೈದ್ಯನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, ಹತ್ಯೆಗೊಳಗಾದ ವೈದ್ಯನನ್ನು ಡಾ.ಜಾವೇದ್ ಅಖ್ತರ್ ಎಂದು ಗುರುತಿಸಲಾಗಿದೆ. ಆಸ್ಪತ್ರೆ ಮೂಲಗಳ ಪ್ರಕಾರ ಇಬ್ಬರು 16-17 ವರ್ಷ ವಯಸ್ಸಿನವರು ತಡರಾತ್ರಿ ಆಸ್ಪತ್ರೆಗೆ ಬಂದಿದ್ದರು. ಅದರಲ್ಲಿ ಒಬ್ಬ ತನ್ನ ಗಾಯಗೊಂಡ ಕಾಲ್ಬೆರಳಿಗೆ ಡ್ರೆಸ್ಸಿಂಗ್ ಮಾಡಲು ಕೇಳಿದ. ಆತನಿಗೆ ಚಿಕಿತ್ಸೆ ನೀಡಿ, ಡ್ರೆಸ್ಸಿಂಗ್ ಮಾಡಲಾಯಿತು. ಬಳಿಕ ತನಗೆ ಪ್ರಿಸ್ಕ್ರಿಪ್ಷನ್ ಬೇಕು ಎಂದು ಕೇಳಿದ.

   ಈ ವೇಳೆ ಡಾ.ಜಾವೇದ್ ಅಖ್ತರ್ ಅವರ ಕ್ಯಾಬಿನ್‌ಗೆ ಹೋದರು. ಅವರು ಕ್ಯಾಬಿನ್ ನತ್ತ ತಿರುಗುತ್ತಲೇ ಯುವಕರು ವೈದ್ಯನ ಮೇಲೆ ಗುಂಡಿನ ದಾಳಿ ನಡೆಸಿದ್ದು, ವೈದ್ಯರ ತಲೆಗೆ ಗುಂಡು ತಗುಲಿ ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.