ಅಮಿತ್‌ ಷಾಗೆ ಉದ್ದವ್‌ ಠಾಕ್ರೆ ಟಾಂಗ್….!

ಮುಂಬೈ: 

     ಏಕನಾಥ ಶಿಂಧೆ ಬಣ ಪಕ್ಷದ ಚಿಹ್ನೆಯಾಗಿರುವ ಬಿಲ್ಲು ಮತ್ತು ಬಾಣವನ್ನು ಕಿತ್ತುಕೊಂಡಿರುವ ಹಿನ್ನೆಲೆ  ಉದ್ಧವ್ ಠಾಕ್ರೆ ಬಿಜೆಪಿಯ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಟಾಂಗ್‌ ನೀಡಿದ್ದಾರೆ. ಮಿಸ್ಟರ್ ಇಂಡಿಯಾ ಎಂಬ ಬಾಲಿವುಡ್‌ ಚಿತ್ರದ ಜನಪ್ರಿಯ ಸಂಭಾಷಣೆಯಾಗಿರುವ ಮೊಗ್ಯಾಂಬೋ ಖುಷ್ ಹುವಾ ಡೈಲಾಗ್ ಅನ್ನು ಶಾಗೆ ಹೇಳಿ ಕೆಣಕಿದ್ದಾರೆ.

     ಮುಂಬೈನ ಅಂಧೇರಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ ಅವರು, “ಅವರು ಎಂತಹ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದರೆ ಅವರು ನಮ್ಮ ‘ಮಶಾಲ್’  ಅನ್ನು ಸಹ ಕಸಿದುಕೊಳ್ಳಬಹುದು. ಅವರು ‘ಬಿಲ್ಲು ಮತ್ತು ಬಾಣ’ ಕದಿಯಬಹುದು ಆದರೆ ಜನರ ಹೃದಯದಿಂದ ಭಗವಾನ್ ರಾಮನನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದ್ದಾರೆ.

     ನಿನ್ನೆ ಯಾರೋ ಒಬ್ಬರು ಅವರು ಪುಣೆಗೆ ಬಂದಿದ್ದರು. ಮಹಾರಾಷ್ಟ್ರದಲ್ಲಿ ಹೇಗೆ ಕೆಲಸಗಳು ನಡೆಯುತ್ತಿವೆ ಎಂದು ಕೇಳಿದರು. ಮತ್ತೊಬ್ಬರು ಯಾರೋ ಹೇಳಿದರು, ತುಂಬಾ ಚೆನ್ನಾಗಿ ನಡೆಯುತ್ತಿವೆ. ಯಾಕೆಂದರೆ, ಚುನಾವಣಾ ಆಯೋಗ ನಮ್ಮಪರ ಕೆಲಸ ಮಾಡುತ್ತಿದೆ ಎಂದರು. ಆಗ ಅವರು  ಹೇಳಿದರು, ತುಂಬಾ ಚೆನ್ನಾಗಿದೆ, ಮೊಗ್ಯಾಂಬೋ ಖುಷ್ ಹುವಾ ಎಂದು ಖುಷಿ ಪಟ್ಟಿದ್ದಾರೆ ಎಂದು ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.

    ಇವರೆಲ್ಲ ಇವತ್ತಿನ ಮೊಗ್ಯಾಂಬೋಗಳು. ಓರಿಜಿನಲ್ ಮೊಗ್ಯಾಂಬೋ ತರಹ, ಜನರು ತಮ್ಮ ಮಧ್ಯೆ ಹೊಡೆದಾಡಿಕೊಂಡು ಇರಬೇಕು ಎಂದು ಬಯಸುತ್ತಾರೆ. ಇದರಿಂದ ಅವರು ಅಧಿಕಾರವನ್ನು ಅನುಭವಿಸಬಹುದು ಎಂದು ಅಮಿತ್ ಶಾ ವಿರುದ್ಧ ಗುಡುಗಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap