ಯುಜಿಡಿ ಸಮಸ್ಯೆ ಬಗೆಹರಿಸಿದ ಪಾಲಿಕೆ

ತುಮಕೂರು:


ತುಮಕೂರು ವಿಶ್ವವಿದ್ಯಾನಿಲಯದ ಆವರಣದ ಕಲಾ ಕಾಲೇಜಿನ ಪಾರ್ಕಿಂಗ್ ಸಮೀಪ ಯುಜಿಡಿ ಸಮಸ್ಯೆ ಉಂಟಾಗಿ ನೀರು ಸರಾಗವಾಗಿ ಹರಿಯದೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಗುತ್ತಿದ್ದರ ಬಗ್ಗೆ ಪ್ರಗತಿ ವಾಹಿನಿಯು ವಿಸ್ಕೃತವಾಗಿ ವರದಿ ಬಿತ್ತರ ಮಾಡಿತ್ತು.

ಈ ಬಗ್ಗೆ ತಕ್ಷಣವೇ ಎಚ್ಚೆತ್ತುಕೊಂಡ 19ನೇ ವಾರ್ಡಿನ ಕಾಪೆರ್Çರೇಟರ್ ರೂಪ ಶ್ರೀ ಶೆಟ್ಟಳಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಹಾನಗರಪಾಲಿಕೆಯ ಆಯುಕ್ತರ ಗಮನಕ್ಕೆ ತಂದಿದ್ದರು. ಈ ಸುದ್ದಿ ಪ್ರಸಾರ ಮಾಡಿದ ಮರುದಿನವೇ ಮಹಾನಗರ ಪಾಲಿಕೆಯ ಆಯುಕ್ತರಾದ ರೇಣುಕಾ ಅವರು ಸ್ವಚ್ಛತಾ ಪೌರಕಾರ್ಮಿಕರನ್ನು ಸ್ಥಳಕ್ಕೆ ಕಳುಹಿಸಿ ಸ್ವಚ್ಛಗೊಳಿಸಿದ್ದಾರೆ.

ಡ್ರೈನೇಜ್ ನಲ್ಲಿ ಇನ್ನರ್ ವೇರ್ ಬಟ್ಟೆಗಳು, ಟವಲ್‍ಗಳು ಹಾಗೂ ಅನೇಕ ವಸ್ತುಗಳು ಇದರಲ್ಲಿ ಸಿಕ್ಕಿಹಾಕಿಕೊಂಡಿದ್ದು ಡ್ರೈನೇಜ್ ಕಿರಿದಾಗಿರುವುದರಿಂದ ಮುಂದಕ್ಕೆ ನೀರು ಹೋಗದೆ ಸಮಸ್ಯೆ ಉಂಟಾಗಿತ್ತು. ಇದೆಲ್ಲವನ್ನು ಸರಿಯಾಗಿ ಕ್ಲೀನ್ ಮಾಡಿ ಇದೀಗ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ. ಮಾತ್ರವಲ್ಲದೆ ಯುಜಿಡಿಯಲ್ಲಿ ಕಾಂಡೋಮ್‍ಗಳು ಕಂಡು ಬಂದಿದ್ದು, ವಿಶ್ವವಿದ್ಯಾನಿಲಯದ ಆವರಣದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರಬಹುದು ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದು, ಇದಕ್ಕೆಲ್ಲ ಬ್ರೇಕ್ ಹಾಕಬೇಕು ಎಂದು ಒತ್ತಾಯ ಮಾಡಿದ್ದಾರೆ.

ಇನ್ನೂ ಈ ಬಗ್ಗೆ ಸ್ಥಳೀಯರು ಮಹಾನಗರ ಪಾಲಿಕೆ ಆಯುಕ್ತರಿಗೆ ಮತ್ತು ಪಾಲಿಕೆ ಸದಸ್ಯರಿಗೆ ಹಾಗೂ ವರದಿಯನ್ನು ಬಿತ್ತರ ಮಾಡಿ ಸಮಸ್ಯೆ ಬಗೆಹರಿಸಿದ್ದಕ್ಕೆ ಪ್ರಗತಿ ವಾಹಿನಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ತುಮಕೂರು ನಗರದಲ್ಲಿ ಯುಜಿಡಿ, ಕಸ ಸೇರಿದಂತೆ ಪಾಲಿಕೆ ವ್ಯಾಪ್ತಿಗೆ ಬರುವಂತಹ ಸಮಸ್ಯೆಗಳು ಕಂಡುಬಂದಾಗ ನಮ್ಮ ಗಮನಕ್ಕೆ ತರಲಾಗುತ್ತದೆ. ಅದೇ ರೀತಿಯಾಗಿ ಪ್ರಗತಿ ವಾಹಿನಿಯಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಯುಜಿಟಿ ಸಮಸ್ಯೆಯಾಗಿದೆ ಎಂದು ವರದಿ ಪ್ರಸಾರವಾಗಿತ್ತು. ಈ ಬಗ್ಗೆ ಪಾಲಿಕೆ ಸದಸ್ಯರಾದ ರೂಪಶ್ರೀ ಶೆಟ್ಟಳಯ್ಯ ಅವರು ನಮ್ಮ ಗಮನಕ್ಕೆ ತಂದಿದ್ದು, ಕೂಡಲೇ ಆ ಸಮಸ್ಯೆಯನ್ನು ಬಗೆಹರಿಸಿಕೊಟ್ಟಿದ್ದೇವೆ ಎಂದು ಹೇಳಿದರು.

ತುಮಕೂರು ನಗರ ಜನರ ಆರೋಗ್ಯ ಕಾಪಾಡುವುದು ಪಾಲಿಕೆಯ ಕರ್ತವ್ಯವಾಗಿದೆ, ಅದೇ ರೀತಿಯಾಗಿ ಇಂತಹ ಸಮಸ್ಯೆಗಳು ಕಂಡುಬಂದಾಗ ನಮ್ಮ ಗಮನಕ್ಕೆ ತಂದರೆ ಅದನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ಇಂತಹ ವರದಿಗಳನ್ನು ಬಿತ್ತರ ಮಾಡುವ ಮೂಲಕ ತುಮಕೂರು ಜನರ ಆರೋಗ್ಯ ಕಾಪಾಡುವಲ್ಲಿ ಕೆಲಸ ಮಾಡುತ್ತಿರುವ ಪ್ರಗತಿ ಟಿವಿಗೆ ಪಾಲಿಕೆ ವತಿಯಿಂದ ಧನ್ಯವಾದಗಳು ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap