ಉಕ್ರೇನ್ ತಿರುಗೇಟು: ರಷ್ಯಾದ 800 ಸೈನಿಕರು ಸಾವು, 30 ಯುದ್ಧ ಟ್ಯಾಂಕರ್, 6 ಕಾಪ್ಟರ್, 2 ವಿಮಾನ ನಾಶ

ರಷ್ಯಾ:

ರಷ್ಯಾ, ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ವೇಳೆ ಉಕ್ರೇನ್ ದಾಳಿಯಲ್ಲಿ 800 ರಷ್ಯಾ ಯೋಧರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕೀ ಮಾಹಿತಿ ನೀಡಿದ್ದಾರೆ.

ಕೀವ್ ಬಳಿ ಎರಡು ರಷ್ಯಾ ವಿಮಾನ ಹೊಡೆದುರುಳಿಸಲಾಗಿದೆ. 30 ಯುದ್ಧ ಟ್ಯಾಂಕರ್ ಧ್ವಂಸಗೊಳಿಸಲಾಗಿದೆ.

ರಷ್ಯಾದ 2 ವಿಮಾನ, 6 ಹೆಲಿಕಾಪ್ಟರ್ ಗಳನ್ನು ನಾಶ ಮಾಡಲಾಗಿದೆ.

ರಷ್ಯಾ ದಾಳಿಗೆ 137 ಸಾವು ಕಂಡಿದ್ದು, 316 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ರಷ್ಯಾ ಸೇನೆ ತಡೆಯೊಡ್ಡಿದೆ. ಆಸ್ಪತ್ರೆಗಳ ಮೇಲೆ ದಾಳಿ ಮಾಡಿದೆ. ಉಕ್ರೇನ್ ಚರ್ನೋಬಿಲ್ ಅಣುಸ್ಥಾವರವನ್ನು ರಷ್ಯಾ ವಶಕ್ಕೆ ಪಡೆದುಕೊಂಡಿದೆ ಎಂದು ಉಕ್ರೇನ್ ಸರ್ಕಾರದಿಂದ ಮಾಹಿತಿ ನೀಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap