ಉಕ್ರೇನ್​ ಬಣ್ಣ ಬಯಲು! ಯುದ್ಧಪರಾಧ ಮಾಡ್ತಿದ್ದಾರೆ ಯುಕ್ರೇನ್​ ಯೋಧರು!

ಇಷ್ಟುದಿನ ರಷ್ಯಾ ಯುದ್ಧಾಪರಾಧಗಳನ್ನ ಮಾಡ್ತಿದೆ, ಅಮಾಯಕರನ್ನ ಸಾಮೂಹಿಕವಾಗಿ ಹತ್ಯೆ ಮಾಡ್ತಿದೆ ಅಂತ ಸಾಲು ಸಾಲು ಆರೋಪ ಮಾಡಿದ್ದ ಯುಕ್ರೇನ್​ ಬಣ್ಣ ಕೂಡ ಈಗ ಬಯಲಾಗಿದೆ. ಯುಕ್ರೇನ್​ ಯೋಧರು ಯುದ್ಧಾಪರಾಧ ಮಾಡ್ತಿರೋದು ವಿಡಿಯೋವೊಂದರಲ್ಲಿ ಗೊತ್ತಾಗಿದೆ.

ಟೆಲಿಗ್ರಾಂನಲ್ಲಿ ಹರಿದಾಡ್ತಿರೋ ಈ ವಿಡಿಯೋದಲ್ಲಿ, ರಷ್ಯಾದ ಯುದ್ಧ ಖೈದಿಗಳನ್ನ ಯುಕ್ರೇನ್​ ಯೋಧರು ಗುಂಡಿಕ್ಕಿ ಕೊಂದಿರೋದು ಬೆಳಕಿಗೆ ಬಂದಿದೆ. ರಷ್ಯಾದ ಒಟ್ಟು ನಾಲ್ವರು ಯೋಧರನ್ನ ಹೀಗೆ ಕೊಲ್ಲಲಾಗಿದೆ. ಯುಕ್ರೇನ್​ ಯೋಧರೇ ರಷ್ಯಾ ಯೋಧರನ್ನ ಕೊಂದಿರೋದಕ್ಕೆ ಯೋಧರ ನಡುವಿನ ಸಂಭಾಷಣೆ, ಅವರ ಸಮವಸ್ತ್ರಗಳೇ ಸಾಕ್ಷಿ. ರಷ್ಯಾ ಯೋಧರನ್ನ ಕೊಂದ ಬಳಿಕ ಯುಕ್ರೇನ್​ ಯೋಧರು ಯುಕ್ರೇನ್​​ ಪರ ಘೋಷಣೆಗಳನ್ನ ಕೂಗಿದ್ದಾರೆ.

ಬಣ್ಣದ ಲೋಕಕ್ಕೆ ಚಿರು ಪುತ್ರ ರಾಯನ್ ರಾಜ್ ಸರ್ಜಾ ಎಂಟ್ರಿ!

ರಷ್ಯಾ ಯೋಧರ ಮೃತದೇಹಳ ಸಮೀಪದಲ್ಲೇ ರಷ್ಯಾದ ಟ್ಯಾಂಕ್​​ವೊಂದು ನಿಂತಿದೆ. ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರೋ ಈ ವಿಡಿಯೋವನ್ನ ನ್ಯೂಯಾರ್ಕ್​ ಟೈಮ್ಸ್ ಮತ್ತು ಬಿಬಿಸಿ ವೇರಿಫೈ ಮಾಡಿದೆ. ಯುಕ್ರೇನ್​ ರಾಜಧಾನಿ ಕಿಯವ್​​ ಹೊರವಲಯದ ಮಿಟ್ರಿವ್ಕಾ ಅನ್ನೋಕಡೆ ಈ ಘಟನೆ ನಡೆದಿದೆ. ಅಂತಾರಾಷ್ಟ್ರೀಯ ಕಾನೂನು ಪ್ರಕಾರ ಯುದ್ಧಖೈದಿಗಳ ಈ ರೀತಿ ನಡೆದುಕೊಳ್ಳುವಂತಿಲ್ಲ. ಘಟನೆ ಬಗ್ಗೆ ಪ್ರತಿಕ್ರಿಯಿಸಿರೋ ಯುಕ್ರೇನ್​ ವಿದೇಶಾಂಗ ಮಂತ್ರಿ ಕುಲೇಬಾ, ನಾವು ಖಂಡಿತವಾಗಿಯೂ ಈ ಬಗ್ಗೆ ತನಿಖೆ ನಡೆಸ್ತೀವಿ ಎಂದಿದ್ದಾರೆ.

ಪತ್ರಕರ್ತರ ಬಟ್ಟೆ ಬಿಚ್ಚಿಸಿದ ಮಧ್ಯ ಪ್ರದೇಶ ಪೊಲೀಸ್‌: ರಾಹುಲ್‌ ಗಾಂಧಿ ಆಕ್ರೋಶ

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link