ಉಕ್ರೇನ್:
ಉಕ್ರೇನ್ ಬಿಕ್ಕಟ್ಟು- ಮೋದಿಯವರಿಗೆ ಬೇಷರತ್ ಬೆಂಬಲ ನೀಡಿದ ಮಮತಾ ಬ್ಯಾನರ್ಜಿ
ಉಕ್ರೇನ್ ಬಿಕ್ಕಟ್ಟಿನ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಬೇಷರತ್ ಬೆಂಬಲವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿದ್ದಾರೆ.
ಬಿಕ್ಕಟ್ಟಿನಿಂದ ಹೊರಬರಲು ರಾಷ್ಟ್ರೀಯ ಸಂಕಲ್ಪಕ್ಕಾಗಿ ಸರ್ವಪಕ್ಷ ಸಭೆಯನ್ನು ಕರೆಯುವ ಬಗ್ಗೆ ಪರಿಗಣಿಸುವಂತೆ ಮೋದಿಯನ್ನ ಒತ್ತಾಯಿಸಿದ್ದಾರೆ.
ಪ್ರಧಾನಿಗೆ ಬರೆದ ಪತ್ರದಲ್ಲಿ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಮತ್ತು ವಿಶೇಷವಾಗಿ “ಸಂಕಷ್ಟದಲ್ಲಿರುವ ನಮ್ಮ ವಿದ್ಯಾರ್ಥಿಗಳಿಗೆ ತ್ವರಿತ ಸಹಾಯ” ನೀಡುವಲ್ಲಿ ದೇಶವು ಒಗ್ಗಟ್ಟಿನಿಂದ ನಿಂತಿದೆ ಎಂದು ಬ್ಯಾನರ್ಜಿ ಪುನರುಚ್ಚರಿಸಿದ್ದಾರೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದ, ಭಾರತವು ಜಗತ್ತಿಗೆ ಶಾಂತಿಯುತ ಪರಿಹಾರವನ್ನು ನೀಡಲು ಮುಂದಾಗಬೇಕು ಮತ್ತು ನಾವು ಅದನ್ನು ಧೈರ್ಯದಿಂದ ಮತ್ತು ಹಿಂಜರಿಕೆಯಿಲ್ಲದೆ ನೀಡಬೇಕು ಎಂದು ಬ್ಯಾನರ್ಜಿ ಹೇಳಿದ್ದಾರೆ.
“.ಭೀಕರ ಅಂತರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ, ನಾವು ಒಂದು ರಾಷ್ಟ್ರವಾಗಿ ಒಗ್ಗಟ್ಟಿನಿಂದ ನಿಲ್ಲಲು ನಮ್ಮ ದೇಶೀಯ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸುತ್ತೇವೆ. ಒಂದು ರಾಷ್ಟ್ರವಾಗಿ ನಮ್ಮ ಘನತೆ ಅವಿರೋಧ ಮತ್ತು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ನಾವು ಇದನ್ನು ಮಾಡುತ್ತೇವೆ.
ನಾವು ನಮ್ಮ ವಿದೇಶಾಂಗ ವ್ಯವಹಾರಗಳನ್ನು ನಡೆಸುವ ತತ್ವಗಳು ಜಾಗತಿಕ ರಂಗದಲ್ಲಿ ಸ್ಥಿರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಇದನ್ನು ಮಾಡುತ್ತೇವೆ, “ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಟಿಎಂಸಿ ಮುಖ್ಯಸ್ಥರಾಗಿರುವ ಮಮತ ಬ್ಯಾನರ್ಜಿ ಅವರು ಹಿರಿಯ ಮುಖ್ಯಮಂತ್ರಿಯಾಗಿ ಮತ್ತು ರಾಷ್ಟ್ರೀಯ ರಾಜಕೀಯ ಪಕ್ಷದ ನಾಯಕರಾಗಿ “ಉಕ್ರೇನ್ ಯುದ್ಧದ ಪ್ರಸ್ತುತ ಅಂತರರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಬದ್ಧತೆಯನ್ನು ನಾನು ಪುನರುಚ್ಚರಿಸುತ್ತೇನೆ” ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








