ಉಕ್ರೇನ್: ಭಾರತೀಯರ ವಿರುದ್ಧ ಅವಮಾನ ಅಸಹಕಾರ ತೋರುತ್ತಿರುವ ಉಕ್ರೇನಿಯನ್ನರು

ಕೀವ್: 

ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿರುವ ಬೆನ್ನಲ್ಲಿ ಅಲ್ಲಿ ನೆಲೆಸಿರುವವರಿಗೆ ಜೀವ ಭಯದ ವಾತಾವರಣ ನಿರ್ಮಾಣವಾಗಿದೆ. ಅಲ್ಲಿ ಸಿಲುಕಿಕೊಂಡಿರುವ ಭಾರತೀಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಮತ್ತೊಂದು ಸಮಸ್ಯೆ ಎದುರಾಗಿದೆ.

ವಿಶ್ವಸಂಸ್ಥೆಯಲ್ಲಿ ಭಾರತ ತಟಸ್ಥ ನೀತಿಯನ್ನು ಅನುಸರಿಸಿದೆ.

ಭಾರತ ಉಕ್ರೇನಿಗೆ ಬೆಂಬಲ ನೀಡಲಿಲ್ಲ ಎನ್ನುವ ಕಾರಣಕ್ಕೆ ಅಲ್ಲಿನ ಪ್ರಜೆಗಳು ಭಾರತೀಯರ ವಿರುದ್ಧ ತಿರುಗಿಬೀಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಆಹಾರ ಸೇರಿದಂತೆ ಅಗತ್ಯ ವಸ್ತುಗಳಿಗಾಗಿ ಬೇಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ರೈಲಿನಲ್ಲಿ ಭಾರತೀಯರನ್ನು ಹೊರಕ್ಕೆ ಕಳಿಸಿರುವುದು, ಬಸ್ಸುಗಳಲ್ಲಿ ಭಾರತೀಯರನ್ನು ಸೀಟಿನಿಂದ ಎಬ್ಬಿಸಿ ಗಂಟೆಗಟ್ಟಲೆ ನಿಲ್ಲಿಸಿ ಅವಮಾನ ಮಾಡಿರುವುದು ಹೀಗೆ ನಾನಾ ಬಗೆಯ ಘಟನೆಗಳು ನಡೆದಿರುವುದು ಆತಂಕ ಸೃಷ್ಟಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link