ಉಕ್ರೇನ್ :
ಉಕ್ರೇನ್ & ರಷ್ಯಾ ನಡುವೆ ನಡೆಯುತ್ತಿರುವ ಯುದ್ಧ ಇದೀಗ ಘೋರ ಹಂತಕ್ಕೆ ತಲುಪಿದ್ದು ಜನರು ಪರದಾಡುತ್ತಿದ್ದಾರೆ. ಈ ಯುದ್ಧದ ಪರಿಣಾಮ ಕೋಟ್ಯಂತರ ಜನರು ನರಳುತ್ತಿದ್ದು, ಮುಂದೆ ಏನು? ಎಂಬ ಭಯ ಆವರಿಸಿದೆ. ಇದೇ ಸಮಯದಲ್ಲಿ ಯುದ್ಧ ನಿಲ್ಲಿಸಿ ಎನ್ನುತ್ತಾ ಚೀನಾದ ಕಾಲು ಹಿಡಿದಿದೆ ಉಕ್ರೇನ್.
ಉಕ್ರೇನ್ ತಾನೇ ಮಾಡಿಕೊಂಡ ಎಡವಟ್ಟು & ಅಹಂಕಾರದ ಪ್ರತಿಫಲ ಎನ್ನುವಂತೆ ಇದೀಗ ರಷ್ಯಾ ವಿರುದ್ಧ ಹೋರಾಡುವ ಪರಿಸ್ಥಿತಿ ಬಂದಿದೆ. ಪಾಶ್ಚಿಮಾತ್ಯ ದೇಶಗಳ ಮಾತು ಕೇಳಿ & ಕೇಳಿ ಈ ರೀತಿ ಉಕ್ರೇನ್ ಸಂಕಷ್ಟಕ್ಕೆ ಸಿಲುಕಿದೆ ಎಂಬ ಆರೋಪ ಕೂಡ ಕೇಳಿಬಂದಿದ್ದು, ಈ ಸಮಯದಲ್ಲೇ ಚೀನಾ ಮಧ್ಯಪ್ರವೇಶ ಮಾಡಬೇಕು ಎಂಬ ಡಿಮ್ಯಾಂಡ್ ಇಟ್ಟಿರುವ ಉಕ್ರೇನ್ ನಾಯಕರು, ತಮ್ಮ ಕೈಯಲ್ಲಿ ಯುದ್ಧ ಮಾಡಲು ಆಗುತ್ತಿಲ್ಲ ಎಂಬ ಸತ್ಯವನ್ನು ಒಪ್ಪಿದಂತೆ ಕಾಣುತ್ತಿದೆ. ಪಾಶ್ಚಿಮಾತ್ಯ ದೇಶಗಳು ಸಾಕಷ್ಟು ಪ್ರಮಾಣದಲ್ಲಿ ಸಹಾಯ ಮಾಡುತ್ತಿದ್ದರೂ, ಉಕ್ರೇನ್ ಮಾತ್ರ ಭಾರಿ ಹಿನ್ನಡೆ ಕಾಣುತ್ತಿದೆ.
ಈಗಿರುವ ಮಾಹಿತಿಗಳ ಪ್ರಕಾರ ರಷ್ಯಾ & ಉಕ್ರೇನ್ ನಡುವೆ ಚೀನಾ ಸಂಧಾನ ನಡೆಸುವುದು ಕಷ್ಟಸಾಧ್ಯ. ಯಾಕಂದ್ರೆ ಅಮೆರಿಕದ ಸಹಾಯ ಪಡೆದು ಉಕ್ರೇನ್ ಇದೀಗ ರಷ್ಯಾ ವಿರುದ್ಧವೇ ಘೋರ ದಾಳಿ ನಡೆಸುತ್ತಿದೆ. ಮತ್ತೊಂದು ಕಡೆ ಚೀನಾ & ರಷ್ಯಾ ಉತ್ತಮ ಗೆಳೆಯರು. ಇದೇ ಕಾರಣಕ್ಕೆ ಇದೀಗ ಚೀನಾ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದರೆ ರಷ್ಯಾ ಮತ್ತು ಚೀನಾ ಸಂಬಂಧ ಹಳಸುವ ಆತಂಕ ಇದೆ. ಹೀಗಾಗಿ ಚೀನಾ ಕೂಡ ಜಾಣ ನಡೆ ಇಡುತ್ತಿದೆ. ಇದೆಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.
ರಷ್ಯಾ ಕೂಡ ಕೆಲವು ದಿನಗಳ ಹಿಂದೆ ಯುದ್ಧ ನಿಲ್ಲಿಸಲು ಸಿದ್ಧ, ಶಾಂತಿ ಮಾತುಕತೆ ಬರಲಿ ಎಂದು ಹೇಳಿತ್ತು. ಆದರೆ ಉಕ್ರೇನ್ ಅಧ್ಯಕ್ಷನ ಡಬಲ್ ಗೇಮ್ ಇದೀಗ ಅದೇ ದೇಶಕ್ಕೆ ಭಾರಿ ದೊಡ್ಡ ಹಿನ್ನಡೆ ಉಂಟು ಮಾಡುತ್ತಿದೆ. ಅದರಲ್ಲೂ ಅಮೆರಿಕದ ಸಹಾಯ ಪಡೆದು ರಷ್ಯಾ ಸೇನೆ ವಿರುದ್ಧ ದಾಳಿ ಮಾಡುತ್ತಿರುವ ಉಕ್ರೇನ್‌ಗೆ ಇದೀಗ ನೇರವಾಗಿ ನಿರ್ಧಾರ ಕೈಗೊಳ್ಳುವ ಶಕ್ತಿ ಇಲ್ಲವೆಂಬ ಆರೋಪ ಕೂಡ ಇದೆ. ಯಾಕಂದ್ರೆ ಅಮೆರಿಕದ ಮಾತಿನಂತೆ ಉಕ್ರೇನ್ ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಬೇಕಾದ ಒತ್ತಡಕ್ಕೆ ಸಿಲುಕಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ ಸದ್ಯಕ್ಕೆ ನಿಲ್ಲುವುದು ಅನುಮಾನ ಎನ್ನಲಾಗುತ್ತಿದೆ.