ದರ್ಶನ ಮೇಲಿನ ಅಸಮಾಧಾನ ಹೊರ ಹಾಕಿದ ಉಮಾಪತಿ….!

ಬೆಂಗಳೂರು

   ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಬಂಧನದ ಬಗ್ಗೆ ನಿರ್ಮಾಪಕ ಉಮಾಪತಿ ಮಾತನಾಡಿದ್ದು, ದರ್ಶನ್‌ ಮೇಲಿನ ಅಸಮಾಧಾನವನ್ನು ಹೊರ ಹಾಕಿದ್ದಾರೆ.

   ಮಾಧ್ಯಮಗಳೊಂದಿಗೆ ಮಾತನಾಡಿದ ಉಮಾಪತಿ, ಯಾರು ಅಪರಾಧ ಮಾಡಿದರೂ ತಪ್ಪು ತಪ್ಪೇ. ನನ್ನದೇ ಆದ ಸ್ನೇಹಿತರ ಬಳಗದಿಂದ ಒಂದಿಷ್ಟು ಮಾಹಿತಿ ಬಂತು.

   ಆತ ಎಷ್ಟೇ ಬೇಡಿಕೊಂಡರೂ ಇವರು ಬಿಡಲಿಲ್ಲ ಅಂತಾ. ಈತನನ್ನು ಸಾಯಿಸಬೇಕು ಅಂತಾನೇ ಕರೆದುಕೊಂಡು ಬಂದ್ರಾ ಗೊತ್ತಿಲ್ಲ. ನನ್ನ ತಂದೆ ನನಗೆ ಎಲ್ಲಾ ದಾರಿ ತೋರಿಸದರೂ ನಮಗೆ ಜೀವನ ಕಟ್ಟಿಕೊಳ್ಳಲು ಕಷ್ಟ ಆಯಿತು. ದುಡ್ಡಿದ್ದರೂ ದಾರಿ ಗೊತ್ತಾಗುತ್ತಿರಲಿಲ್ಲ. ಆದರೆ ಹುಟ್ಟುವ ಆ ಮಗುಗೆ ನಿನ್ನ ತಂದೆ ಹೀಗೆ ಸತ್ತರು ಅಂದರೆ ಎಷ್ಟು ನೋವಾಗುತ್ತದೆ ಎಂದರು.

   ಅವರೆಲ್ಲಾ ಮುಗ್ಧ ಜನ. ಅವನಿಗೂ ಗೊತ್ತಿರಲಿಲ್ಲ ಹೀಗೆಲ್ಲಾ ಆಗುತ್ತದೆ ಅಂತಾ. ಏನೋ ಪ್ರೀತಿ ವಿಶ್ವಾಸಕ್ಕೆ ಮಾಡಿದ್ದಾನೆ. ಕೆಲಸ ಇದ್ದವರು ಇಂತಹದನೆಲ್ಲಾ ನಿರ್ಲಕ್ಷ್ಯ ಮಾಡಿ ಬಿಡುತ್ತಾರೆ. ತಪ್ಪು ಯಾರೇ ಮಾಡಿದರೂ ತಪ್ಪು ತಪ್ಪೇ. ಎದೆ ಮೇಲೆ ಹಚ್ಚೆ ಹಾಕಿಸಿಕೊಂಡು ಎದೆ ಬಗೆದು ತೋರಿಸುತ್ತೇನೆ ಅನ್ನುವುದೆಲ್ಲಾ ಈಗಿಲ್ಲ. ಶ್ರೀರಾಮನನ್ನು ತೋರಿಸುವ ಆಂಜನೇಯ ಈಗಿಲ್ಲ. ಆ ಕಾಲನೂ ಇವತ್ತಲ್ಲ ಎಂದು ಹೇಳಿದರು.

   ಈಗ ಏನಿದ್ದರೂ ನೀನು ಬದುಕು, ನಾನು ಬದುಕುತ್ತೇನೆ. ನೀನು ಚನ್ನಾಗಿರು ನಾನು ಚೆನ್ನಾಗಿರುತ್ತೇನೆ. ಆಯ್ತು ನೀನೇದ್ರೂ ತೊಂದರೆ ಕೊಡು ಪರವಾಗಿಲ್ಲ. ಎಷ್ಟು ದಿನ ಅಂತಾ ತೊಂದರೆ ಕೊಡುತ್ತೀಯಾ. ನಾಯಿಗಳು ಬೊಗಳುತ್ತದೆ. ಎಷ್ಟೋತ್ತು ಅಂತಾ ಬೊಗಳುತ್ತದೆ. ಗಂಟು ಒಣಗುವರೆಗೂ ಬೊಗಳುತ್ತದೆ. ಆಮೇಲೆ ಸೈಲೆಂಟ್‌ ಆಗಿ ಮೂಲೆಗೆ ಹೋಗುತ್ತದೆ ಎಂದರು.

   ನನಗೆ ಯಾರೋ ಒಬ್ಬರು ಹೇಳುತ್ತಿದ್ದರು. ನೋಡಿ ಸ್ವಾಮಿ ಇವತ್ತಿನ ಕಾಲ ಹೇಂಗೆ ಅಂದರೆ, ದೇವರಂತಹ ಮನುಷ್ಯ ನಾಯಿಯಂತಹ ಬುದ್ಧಿ ಅಂತಾ ಹೇಳುತ್ತಿದ್ದರು ಅದೆಲ್ಲಾ ಬಿಟ್ಟಾಕಿ. ತಪ್ಪು ಮಾಡಿರೋರು ಕಾನೂನಿಕ ಚೌಕಟ್ಟಿನಲ್ಲಿ ಶಿಕ್ಷೆ ಅನುಭವಿಸಲೇಬೇಕಾಗುತ್ತದೆ. ನನಗೆ ತೊಂದರೆ ಆದಾಗ ನಾನು ಮಾತನಾಡಿದೆನೆಲ್ಲ. ಅದೇ ರೀತಿ ಎಲ್ಲಾ ಧ್ವನಿ ಎತ್ತಿ. ನನ್ನ ಸೆಟ್‌ ಅಲ್ಲಿ ಎರಡು ಮೂರು ಸಲ ಯಾರಿಗೋ ಹೊಡೆದರು. ನಾನು ಬೇಡ ಬಿಟ್ಟಾಕಿ ಅಂದೆ. ನಾಳೆ ದಿನ ಅವನು ಸಿನಿಮಾ ಮಾಡಲ್ಲ ಎಂದರೆ ನನ್ನ ಪರಿಸ್ಥಿತಿ ಏನು ಎಂದು ಎಲ್ಲವನ್ನು ನಿಲ್ಲಿಸಿದ್ದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap