ಗಾಜಾ : ತೆರೆದಷ್ಟು ತೆರೆಯುತ್ತಿದೆ ಸುರಂಗಗಳ ಜಾಲಾ…….!

ಗಾಜಾ :

    ಗಾಜಾದ ನೆಲದಲ್ಲಿ ಇಸ್ರೇಲ್‌ ಸೇನೆಯ ನಿರಂತರ ದಾಳಿ ಮುಂದುವರಿದಿರು ವಂತೆಯೇ, ಇಲ್ಲಿನ ಭೂಮಿಯಡಿ ಭೂಗತ ಸುರಂಗಗಳ ಮಹಾಲೋಕವೇ ಇರುವುದು ತಿಳಿದುಬಂದಿದೆ!

    ನೂರಾರು ಕಿ.ಮೀ. ಉದ್ದದ, 80 ಮೀಟರ್‌ ಆಳದ ಈ ಸುರಂಗಗಳ ಜಾಲವೇ ಈಗ ಇಸ್ರೇಲ್‌ ಸೇನೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

    ಹಮಾಸ್‌ ಉಗ್ರರು ಈ ನಗರದಂಥ ಸುರಂಗದೊಳಗೆ ಒತ್ತೆಯಾಳುಗಳನ್ನು ಇಟ್ಟುಕೊಂಡಿದ್ದಾರೆ. ಇದರ ಮೂಲಕವೇ ಹೊರಪ್ರಪಂಚದೊಂದಿಗೆ ಸಂಪರ್ಕ ಸಾಧಿಸುತ್ತಿದ್ದು, ಬೇರೆ ದೇಶಗಳಿಂದ ಶಸ್ತ್ರಾಸ್ತ್ರಗಳ ರವಾನೆಯೂ ಸುರಂಗಗಳ ಮೂಲಕವೇ ಆಗುತ್ತಿದೆ ಎನ್ನಲಾಗಿದೆ.

    ಇಲ್ಲಿ ಬಂಕರ್‌ಗಳು, ದಾಸ್ತಾನು ಕೇಂದ್ರಗಳು ಇದ್ದು, ಸುರಂಗದೊಳ ಗಿಂದಲೇ ರಾಕೆಟ್‌ ಉಡಾವಣೆ ವ್ಯವಸ್ಥೆ ಗಳನ್ನು ರೂಪಿಸಲಾಗಿದೆ. ಸುರಂಗಗಳ ಜಾಲದೊಳಗೆ ಹಮಾಸ್‌ ಉಗ್ರರನ್ನು ಎದುರಿಸಲು ಇಸ್ರೇಲ್‌ “ಸ್ಪಾಂಜ್‌ ಬಾಂಬ್‌’ಗಳನ್ನು ತಯಾರಿಸುತ್ತಿದೆ ಹಾಗೂ ಕೆಮಿಕಲ್‌ ಗ್ರೆನೇಡ್‌ಗಳ ಪರೀಕ್ಷೆಗಳನ್ನೂ ನಡೆಸುತ್ತಿದೆ ಎನ್ನಲಾಗಿದೆ.

     ಇಸ್ರೇಲ್‌ ಸೇನೆಯು ಸತತ 2ನೇ ದಿನ ಗಾಜಾದ ಮೇಲೆ ಭೂ ಆಕ್ರಮಣ ನಡೆಸಿದ್ದು, ಗುರುವಾರ ರಾತೋರಾತ್ರಿ ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳು ಗಾಜಾದೊಳಗೆ ನುಗ್ಗಿವೆ. ಇಸ್ರೇಲ್‌ ದಾಳಿಗೆ ಗಾಜಾದಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ ಉಂಟಾಗಿದೆ. ಈವರೆಗೆ ಗಾಜಾ ಪಟ್ಟಿ ಯಲ್ಲಿ 2,900 ಮಕ್ಕಳು, 1,500 ಮಹಿಳೆಯರು ಸೇರಿದಂತೆ 7 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 1,650 ಮಂದಿ ಇನ್ನೂ ಅವಶೇಷಗಳಡಿ ಸಿಲುಕಿದ್ದಾರೆ ಎಂದು ಪ್ಯಾಲೆಸ್ತೀನ್‌ನ ಆರೋಗ್ಯ ಇಲಾಖೆ ತಿಳಿಸಿದೆ.

     ಇಸ್ರೇಲ್‌-ಹಮಾಸ್‌ ಯುದ್ಧದ ನಡು ವೆಯೇ, ಅಮೆರಿಕವು ಶುಕ್ರವಾರ ಸಿರಿ ಯಾದ ಮೇಲೆ ವೈಮಾನಿಕ ದಾಳಿ ನಡೆ ಸಿದೆ. ಸಿರಿಯಾದಲ್ಲಿನ ಇರಾನ್‌ನ ರೆವೊಲ್ಯೂಶನರಿ ಗಾರ್ಡ್‌ ಗುರಿ ಯಾಗಿ ಸಿಕೊಂಡು ಈ ದಾಳಿ ನಡೆಸಲಾಗಿದೆ. ಕಳೆದ ವಾರವಷ್ಟೇ ಇರಾನ್‌ ಪಡೆಗಳು ಡ್ರೋನ್‌, ಕ್ಷಿಪಣಿಗಳ ಮೂಲಕ ಅಮೆರಿಕದ ನೆಲೆಗಳನ್ನು ಟಾರ್ಗೆಟ್‌ ಮಾಡಿದ್ದವು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap