ಮಧುಗಿರಿ :
ತಾಲೂಕಿನ ಮಿಡಿಗೇಶಿ ಹೋಬಳಿಯ ಹೊಸಕೆರೆ ಗ್ರಾಮದ ಬಳಿ ಕೆ ಶಿಫ್ ರಸ್ತೆಯ ಸಂಸ್ಥೆಯವರು ಅವೈಜ್ಞಾನಿಕ ವಾಗಿ ನಿರ್ಮಿಸಿದ್ದ ಮೋರಿಯ ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು ವ್ಯಕ್ತಿ ಯೊಬ್ಬ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಮೃತ ವ್ಯಕ್ತಿಯು ಹೋಬಳಿಯ ಚಿಕ್ಕ ಗೊಲ್ಲರಹಟ್ಟಿಯ ವಾಸಿ ಆಶ್ವಥಪ್ಪ (55) ಎಂದು ಗುರುತಿಸಲಾಗಿದ್ದು ಸ್ಥಳಕ್ಕೆ ಮಿಡಿಗೇಶಿ ಪೊಲೀಸರು ಸ್ಥಳಕ್ಕೆ ಭೇಟಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಮನೆಯ ಮಾಲೀಕರಾದ ಕುಮಾರ್ , ಕುಮಾರಮ್ಮ ದಂಪತಿಗಳು
ಈ ಹಿಂದೆ ಮಳೆ ಸುರಿದಾಗ ಹೆಚ್ಚು ನೀರು ಸಂಗ್ರಹವಾಗುತ್ತಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ಪ್ರಜಾ ಪ್ರಗತಿ ಪತ್ರಿಕೆಯು ವರ್ಷಗಳ ಹಿಂದೆಯೇ ವರದಿಯನ್ನು ವರದಿ ಮಾಡಿದ್ದರು ಅಂದಿನಿಂದ ಇಂದಿನ ವರೆವಿಗೂ ಮಳೆ ನೀರನ್ನು ಸರಾಗವಾಗಿ ಹರಿಯುವಂತೆ ಮಾಡುವಲ್ಲಿ ಸ್ಥಳೀಯ ಗ್ರಾ.ಪಂ ಆಗಲಿ ಕೆ ಶಿಫ್ ನವರಾಗಲಿ ಮುಂದಾಗಿಲ್ಲ ಈ ಮೋರಿಯ ಸಮೀಪವೇ ಮನೆಯು ಇರುವುದರಿಂದ ಹಾಗೂ ಮಳೆ ಬಂದಾಗಲೆಲ್ಲಾ ಹೆಚ್ಚು ನೀರು ಸಂಗ್ರಹವಾಗುತ್ತಿದೆ. ಈಗಲೂ ಅಲ್ಲಿನ ಜನರಿಗೆ ಓಡಾಡಲೂ ಕಷ್ಟಕರ ವಾಗಿದ್ದು ಈಗಾಲಾದರೂ ಸಂಭಂಧಪಟ್ಟವರು ಎಚ್ಚೆತ್ತು ಕೊಂಡು ಮಳೆಯ ನೀರನ್ನು ಸರಾಗವಾಗಿ ಹರಿಯುವಂತೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.