UPSC ಪ್ರಿಲಿಮಿನರಿ ಫಲಿತಾಂಶ ಪ್ರಕಟ….!

ಬೆಂಗಳೂರು: 

      ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಮೇ 28ರಂದು ಸಿವಿಲ್ ಸರ್ವಿಸಸ್ ಪ್ರಿಲಿಮಿನರಿ ಪರೀಕ್ಷೆಯನ್ನು(CSE) ಯಶಸ್ವಿಯಾಗಿ ನಡೆಸಿತ್ತು. ಸದ್ಯ, ಆಯೋಗವು ಈ ಪರೀಕ್ಷೆಯ ಫಲಿತಾಂಶವನ್ನು ತನ್ನ ವೆಬ್​ಸೈಟ್​ನಲ್ಲಿ ಇಂದು ಪ್ರಕಟಿಸಿದೆ.

    ಅಭ್ಯರ್ಥಿಗಳು ಯುಪಿಎಸ್​ಸಿಯ ಅಧಿಕೃತ ವೆಬ್​ಸೈಟ್​ https://www.upsc.gov.in/ ಗೆ ಭೇಟಿ ನೀಡಿ. ಮುಖಪುಟದಲ್ಲಿ ಫಲಿತಾಂಶಗಳು ಅಥವಾ ಪರೀಕ್ಷೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಯುಪಿಎಸ್​ಸಿ ವಿವಿಧ ಪರೀಕ್ಷೆಗಳನ್ನು ನಡೆಸುತ್ತದೆ ಹಾಗಾಗಿ ನೀವು ಬರೆದ ಪರೀಕ್ಷೆಯ ಫಲಿತಾಂಶದ ಲಿಂಕ್​ ಮೇಲೆ ಕ್ಲಿಕ್​ ಮಾಡಿ ಫಲಿತಾಂಶವನ್ನು ಪರೀಕ್ಷಿಸಬಹುದಾಗಿದೆ.

    ಪರೀಕ್ಷಾ ಫಲಿತಾಂಶದ ಕುರಿತು ಯಾವುದೇ ಪ್ರಶ್ನೆಗಳನ್ನು ಪರಿಹರಿಸಲು ಅಥವಾ ಸ್ಪಷ್ಟಿಕರಣವನ್ನು ಪಡೆಯಲು, ಹೊಸ ದೆಹಲಿಯ ಷಹಜಹಾನ್ ರಸ್ತೆಯಲ್ಲಿರುವ ಕೇಂದ್ರ ಲೋಕಸೇವಾ ಆಯೋಗದ ಆವರಣದಲ್ಲಿ ಫೆಸಿಲಿಟೇಶನ್ ಕೌಂಟರ್​​ನ್ನು ಸ್ಥಾಪಿಸಿದೆ. ಅಭ್ಯರ್ಥಿಗಳು ಕೌಂಟರ್‌ಗೆ ಖುದ್ದಾಗಿ ಭೇಟಿ ನೀಡಬಹುದು ಅಥವಾ ಯುಪಿಎಸ್​ಸಿಯ ವೆಬ್​ಸೈಟ್​ನಲ್ಲಿರುವ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap