ನವದೆಹಲಿ:
ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆ ಅಂತಿಮ ಫಲಿತಾಂಶ(UPSC result) ಪ್ರಕಟಗೊಂಡಿದೆ. ಬರೋಬ್ಬರಿ 1009 ಅಭ್ಯರ್ಥಿಗಳು IAS, IPS, IFS ಮತ್ತು ಕೇಂದ್ರ ಸೇವೆಗಳ ಗುಂಪು A ಮತ್ತು B ನಂತಹ ಸೇವೆಗಳಲ್ಲಿ ನೇಮಕಾತಿಗಾಗಿ UPSC ಶಿಫಾರಸು ಮಾಡಿದೆ. ಸಂದರ್ಶನಗಳಿಗೆ ಹಾಜರಾದ ಅಭ್ಯರ್ಥಿಗಳು ಈಗ ತಮ್ಮ ಫಲಿತಾಂಶವನ್ನು UPSCನ ಅಧಿಕೃತ ವೆಬ್‌ಸೈಟ್ upsc.gov.in ನಲ್ಲಿ ಪರಿಶೀಲಿಸಬಹುದು. ಕಳೆದ ವರ್ಷ ಸೆಪ್ಟೆಂಬರ್ ಲಿಖಿತ ಪರೀಕ್ಷೆ, ಜನವರಿ ಮತ್ತು ಏಪ್ರಿಲ್ 2025 ರ ನಡುವೆ ಸಂದರ್ಶನಗಳು ನಡೆದಿದ್ದವು.
ಶಕ್ತಿ ದುಬೆ UPSC CSE 2025 ರಲ್ಲಿ 1 ನೇ ಶ್ರೇಯಾಂಕವನ್ನು ಪಡೆದುಕೊಂಡಿದ್ದಾರೆ, ವರ್ಷದ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಹರ್ಷಿತಾ ಗೋಯಲ್ 2 ನೇ ಸ್ಥಾನ ಪಡೆದರೆ, ಡೋಂಗ್ರೆ ಅರ್ಚಿತ್ ಪರಾಗ್ 3 ನೇ ಸ್ಥಾನ ಪಡೆದರು.ಶಿಫಾರಸು ಮಾಡಲಾದ 1009 ಅಭ್ಯರ್ಥಿಗಳಲ್ಲಿ 335 ಸಾಮಾನ್ಯ ವರ್ಗ, 109 ಇಡಬ್ಲ್ಯೂಎಸ್, 318 ಓಬಿಸಿ, 160 ಎಸ್‌ಸಿ,87 ಎಸ್‌ಟಿ, 45 ವಿಕಲಚೇತನ, 230 ಇತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: upsc.gov.in
- ‘ಅಂತಿಮ ಫಲಿತಾಂಶ – ನಾಗರಿಕ ಸೇವೆಗಳ ಪರೀಕ್ಷೆ, 2024’ ಮೇಲೆ ಕ್ಲಿಕ್ ಮಾಡಿ
- ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಹೊಂದಿರುವ ಪಿಡಿಎಫ್ ಅನ್ನು ಡೌನ್‌ಲೋಡ್ ಮಾಡಿ
- ಪಟ್ಟಿಯಲ್ಲಿ ನಿಮ್ಮ ರಿಜಿಸ್ಟರ್ ಸಂಖ್ಯೆಯನ್ನು ಹುಡುಕಿ
- ಫಲಿತಾಂಶವನ್ನು ಸೇವ್ ಮಾಡಿ ಮುದ್ರಿಸಿ
