ಬಿಜೆಪಿ ಎದೆಯಲ್ಲಿ ನಡುಕ ಹುಟ್ಟಿಸಿದ ಸರ್ವೆ : ತುರ್ತು ಸಭೆ

ಬೆಂಗಳೂರು :

       ರಾಜ್ಯದಲ್ಲಿ ಪಕ್ಷ ತೊಂಭತ್ತು ಸೀಟುಗಳ ಗಡಿ ದಾಟುವುದು ಕಷ್ಟ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಇಂದು (ಫೆೆ.23) ಬೆಂಗಳೂರಿನಲ್ಲಿ ಪಕ್ಷದ ನಾಯಕರ ಮಹತ್ವದ ಸಭೆ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ನಿರ್ಧರಿಸಿದ್ದಾರೆ.

      ಎರಡು ದಿನಗಳ ರಾಜ್ಯ ಪ್ರವಾಸಕ್ಕೆಂದು ಗುರುವಾರ ಆಗಮಿಸುತ್ತಿರುವ ಅಮಿತ್ ಷಾ, ಸಂಜೆ ರಾಜಧಾನಿಯ ಶಾಸಕರು, ಸಂಸದರು ಮತ್ತು ಪ್ರಮುಖ ನಾಯಕರ ಸಭೆ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ಕನಿಷ್ಠ ಇಪ್ಪತ್ತು ಸೀಟುಗಳನ್ನು ಗೆಲ್ಲಬೇಕು ಮತ್ತು ಹಳೆ ಮೈಸೂರಿನಲ್ಲಿ ಕನಿಷ್ಠ 35 ಸೀಟುಗಳನ್ನು ಗೆಲ್ಲಬೇಕು ಎಂಬುದು ಅಮಿತ್ ಷಾ ಅವರ ಟಾರ್ಗೆಟ್ ಆಗಿದ್ದು, ಇಂದಿನ ಸಭೆಯಲ್ಲಿ ಈ ಕುರಿತು ಮಾರ್ಗದರ್ಶನ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

       ಕರ್ನಾಟಕದಲ್ಲಿ ಪಕ್ಷದ ಶಕ್ತಿ ಹೆಚ್ಚಿದೆಯೆಂದು ಹೇಳಿಕೊಂಡರೂ ಹಳೆ ಮೈಸೂರು ಭಾಗದಲ್ಲಿ ಗಣನೀಯ ಸಂಖ್ಯೆಯ ಸೀಟುಗಳನ್ನು ಗೆಲ್ಲಲು ಆಗದಿರುವುದು ಅಮಿತ್ ಷಾ ಅವರ ಸದ್ಯದ ಚಿಂತೆಗೆ ಕಾರಣ. ಕಳೆದ ಬಾರಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಪಕ್ಷ ಗಣನೀಯ ಪ್ರಮಾಣದ ಸೀಟುಗಳನ್ನು ಗಳಿಸುವ ಜೊತೆಗೆ ರಾಜರಾಜೇಶ್ವರಿ ನಗರ, ಯಶವಂತಪುರ, ಕೆ.ಆರ್.ಪುರಂನಲ್ಲಿ ಗೆದ್ದ ಕಾಂಗ್ರೆಸ್ ಶಾಸಕರು ಬಿಜೆಪಿ ಕಡೆ ಬಂದರೂ ಪಕ್ಷದ ಸ್ವಯಂ ಸಾಧನೆ ಈ ಬಾರಿ ಇಪ್ಪತ್ತು ಸೀಟುಗಳ ಗಡಿ ದಾಟಬೇಕು. ಬ್ಯಾಟರಾಯನಪುರ, ಜಯನಗರ, ಹೆಬ್ಬಾಳ ಸೇರಿದಂತೆ ಕಾಂಗ್ರೆಸ್ ಹಿಡಿತದಲ್ಲಿರುವ ಹಲವು ಕ್ಷೇತ್ರಗಳನ್ನು ಈ ಬಾರಿ ಗೆಲ್ಲುವ ಅವಕಾಶ ಬಿಜೆಪಿಗಿದೆ ಎಂಬುದು ಅಮಿತ್ ಷಾ ಅವರಿಗಿರುವ ಮಾಹಿತಿ ಎಂಬುದು ಮೂಲಗಳ ಹೇಳಿಕೆ.

     ಇದೇ ರೀತಿ ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಪಕ್ಷದ ಗಳಿಕೆ 35 ಸೀಟುಗಳ ಗಡಿ ತಲುಪಿದರೆ ನಾವು ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುತ್ತೇವೆ. ಇದಕ್ಕಾಗಿ ರಾಜಧಾನಿಯ ನಾಯಕರು ಕೂಡ ಕೈ ಜೋಡಿಸಬೇಕು ಎಂದು ಅಮಿತ್ ಶಾ ಗುರುವಾರದ ಸಭೆಯಲ್ಲಿ ಸಂದೇಶ ನೀಡಲಿದ್ದಾರೆ. ಪರಿಸ್ಥಿತಿ ಹೇಗೇ ಇರಲಿ, ಆದರೆ ನೀವು ಪಕ್ಷವನ್ನು ಬೂತ್‌ಮಟ್ಟದಲ್ಲಿ ಸಂಘಟಿಸಲು ಆದ್ಯತೆ ನೀಡಿ. ನೀವು ಈ ಕೆಲಸ ಮಾಡಿದರೆ ಪಕ್ಷ ಸೋತಿರುವ ಕ್ಷೇತ್ರಗಳನ್ನೂ ವಶಪಡಿಸಿಕೊಳ್ಳಬಹುದು ಎಂಬುದು ಅಮಿತ್‌ಶಾ ವಾದ.

    ಬೂತ್ ಮಟ್ಟದಲ್ಲಿ ಸಂಘಟನೆ ಬಲಿಷ್ಟವಾದ ಕಾರಣಕ್ಕಾಗಿಯೇ ನಾವು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಗಳಿಸಿದೆವು. ಕರ್ನಾಟಕದಲ್ಲೂ ಪರಿಸ್ಥಿತಿಯನ್ನು ಎದುರಿಸಿ ಗೆಲ್ಲಲು, ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಲು ಇದೇ ಮಾರ್ಗ ಅನುಸರಿಸಬೇಕು ಎಂದು ಗುರುವಾರದ ಸಭೆಯಲ್ಲಿ ಶಾಸಕರು, ಸಂಸದರು ಮತ್ತಿತರ ನಾಯಕರಿಗೆ ಅಮಿತ್ ಶಾ ಸೂಚನೆ ನೀಡಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap