ಪ್ಲಾಸ್ಟಿಕ್ ಹಾಳೆ-ಲೋಟ ಬಳಸುವುದು ನಿಷಿದ್ಧ

ತುರುವೇಕೆರೆ:                  ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನು ಮಾಡಬೇಕೆಂದು ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಲೋಟಗಳು, ಬಿಸಿ ಪದಾರ್ಥ (ಇಡ್ಲಿ) ಗಳನ್ನು ಪ್ಲಾಸ್ಟಿಕ್ ಹಾಳೆಗಳಲ್ಲಿ ಬೇಯಿಸುವುದು, ಪ್ಯಾಕಿಂಗ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು. ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಧೀಶರಾದÀ ಪಿ.ಎಂ. ಬಾಲಸುಬ್ರಹ್ಮಣ್ಯ ತಿಳಿಸಿದರು.

ಪಟ್ಟಣದ ವಾಸವಿ ಕಲ್ಯಾಣ ಮಂದಿರದಲ್ಲಿ ವಿವಿಧ ಸಂಘ ಸಂಸ್ಥೆಗಳು ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 1996 ಡಿಸೆಂಬರ್ 24 ರಂದು ಗ್ರಾಹಕರ ಹಕ್ಕು ಕಾಯಿದೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಮಾರಾಟ ಮಾಡುವ ವಸ್ತುಗಳ ಬೆಲೆ, ಲಾಭ, ನಷ್ಟ ಮಾರಾಟಗಾರರು ತಯಾರಿಸಿದ ಮತ್ತು ವಾಯಿದೆ ಮುಕ್ತಾಯದ ದಿನಾಂಕ ನಮೂದು, ಅದರಿಂದಾದ ಪರಿಣಾಮಗಳಿಗೆ ಪರಿಹಾರ ನೀಡಲು ನ್ಯಾಯಾಲಯದ 2019 ರ ತಿದ್ದುಪಡಿ ಕಾಯ್ದೆಯಂತೆ ವರ್ತಕರಿಗೆ ಕಡಿವಾಣ ಹಾಕಿಕೊಂಡು ಸೆಕ್ಷನ್ 88, 89 ರ ಕಲಂ ಅನ್ವಯ 2 ರಿಂದ 7 ವರ್ಷ ಸಜೆ, ಐವತ್ತು ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ ಎಂದರು.

ತಾಲ್ಲೂಕು ದಂಡಾಧಿಕಾರಿ ನಯೀಮ್‍ಉನ್ನೀಸಾ ಮಾತನಾಡಿ, ಎಲ್ಲಾ ಕಛೇರಿಗಳಿಗೂ ಅಂಗಡಿ ಮತ್ತು ಹೋಟೆಲ್‍ಗಳಿಗೂ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸದಂತೆ ಆದೇಶ ಹೊರಡಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವರ್ತಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್(ರಾಜು), ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಂ.ಬಿ. ಚಂದ್ರಶೇಖರ್, ಸಂಪನ್ಮೂಲ ವ್ಯಕ್ತಿಗಳಾದ ಆಹಾರ ಶಿರಸ್ತೆದಾರರಾದ ಪ್ರೇಮಾ, ಆಹಾರ ನಿರೀಕ್ಷಕ ಕೃಷ್ಣೇಗೌಡ, ಸಂಪನ್ಮೂಲ ವ್ಯಕ್ತಿ ಪ್ರಾಧ್ಯಾಪಕ ಗಂಗಾಧರ್, ಉಪಾಧ್ಯಕ್ಷ ಜಗನ್ನಾಥ್ ದಂಡಿನರ್, ಸದಸ್ಯರುಗಳಾದ ಡಿ.ಪಿ. ನಂದೀಶ್, ನಟರಾಜು, ಹರೀಶ್, ಶ್ರೀನಿವಾಸ್, ಎನ್.ಬಿ.ಸಿ. ಚಂದ್ರಣ್ಣ ಹಾಗೂ ರಾಮಣ್ಣ ಹಾಗೂ ವರ್ತಕರುಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link