ನಾಯಕನಹಟ್ಟಿ
ವರದಿ ಹರೀಶ್ ನಾಯಕನಹಟ್ಟಿ
ಎನ್ ದೇವರಹಳ್ಳಿ ಗ್ರಾಮದಲ್ಲಿ ಸುಮಾರು 50 ಲಕ್ಷದ ವೆಚ್ಚದಲ್ಲಿ ನೂತನ ಪ್ರಾಥಮಿಕ ಪಶು ಚಿಕಿತ್ಸೆ ಆಸ್ಪತ್ರೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಟಿ ಶ್ರೀನಿವಾಸ್ ಬಾಬು ಹೇಳಿದರು.
ಭಾನುವಾರ ಹೋಬಳಿಯ ಎನ್ ದೇವರಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಚಿತ್ರದುರ್ಗ ತಾಲೂಕು ಪಂಚಾಯಿತಿ ಚಳ್ಳಕೆರೆ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಚಳ್ಳಕೆರೆ ತಾಲೂಕು ಆರ್,ಐ,ಡಿ,ಎಫ್, 30ರ ಯೋಜನೆ ಅಡಿಯಲ್ಲಿ ಪ್ರಾಥಮಿಕ ಪಶು ಚಿಕಿತ್ಸೆ ಕೇಂದ್ರದ ನೂತನ ಕಟ್ಟಡ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು ಎಲ್ಲಿದೆ ಗ್ರಾಮದಲ್ಲಿ 50 ಲಕ್ಷ ಮೆಚ್ಚಿದ ಪ್ರಾಥಮಿಕ ಪ್ರಶಸ್ತಿ ಚಿಕಿತ್ಸೆ ಕೇಂದ್ರ ಭೂಮಿಪೂಜೆ ನೆರವೇರಿಸಿದ್ದು ಗ್ರಾಮದಲ್ಲಿ ಪಶು ಆಸ್ಪತ್ರೆಯ ಜಾಗದ ಕುರಿತು ಗ್ರಾಮದ ದಿವಾಕರ್ ರೆಡ್ಡಿ ಜಾಗ ಕೊಡಲು ಮುಂದಾದಾಗ ಗ್ರಾಮ ಪಂಚಾಯಿತಿ ವತಿಯಿಂದ ನಮ್ಮ ಪಶು ಇಲಾಖೆಗೆ ಹಸ್ತಾಂತರಿಸಿದರೆ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಆದ್ದರಿಂದ ಗ್ರಾಮದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರು ಪಶು ಇಲಾಖೆ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಇದೇ ವೇಳೆ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಟಿ. ತಿಪ್ಪೇಸ್ವಾಮಿ ಮಾತನಾಡಿದರು ಪಶು ಆಸ್ಪತ್ರೆಯೆಂದರೆ ರೈತರ ಜೀವನಾಡಿ ಗ್ರಾಮದಲ್ಲಿ ಅತಿ ಹೆಚ್ಚು ಜಾನುವಾರುಗಳ ಸಂಖ್ಯೆ ಹೆಚ್ಚಾಗಿದ್ದು ಚಿಕಿತ್ಸೆಗೆ ದೂರದ ಪಟ್ಟಣಕ್ಕೆ ಹೋಗಬೇಕಾಗಿತ್ತು ಗ್ರಾಮದಲ್ಲಿ ಸರ್ಕಾರ ಪಶು ಚಿಕಿತ್ಸೆ ಕೇಂದ್ರ ಮಂಜೂರು ಮಾಡಿರುವುದು ಶ್ಲಾಘನೀಯ ಎಂದರು.
ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ. ಎಸ್. ದಿವಾಕರ್ ರೆಡ್ಡಿ ಮಾತನಾಡಿದರು. ಬಹುದಿನದ ಕನಸು ಪಶು ಚಿಕಿತ್ಸೆ ಕೇಂದ್ರ ಇಂದು ಭೂಮಿ ಭೂಮಿ ಪೂಜೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು ಗ್ರಾಮಸ್ಥರು ನೆರವೇರಿಸಿದ್ದಾರೆ ಗ್ರಾಮಕ್ಕೆ ಪಶು ಆಸ್ಪತ್ರೆ ಬರಲು ಪ್ರಮುಖ ಕಾರಣ ಮಂಜುನಾಥ್ ನಾಯ್ಕ ಅವರನ್ನು ಸ್ಮರಿಸಬೇಕು ಕ್ಷಣದಲ್ಲಿ ಎಂದರು.
ಇದೇ ಸಂದರ್ಭದಲ್ಲಿ ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸರಿತಾಬಾಯಿ ರಾಜ ನಾಯ್ಕ, ಉಪಾಧ್ಯಕ್ಷೆ ಸುಮಾ ಸುಭಾಷ್, ಸದಸ್ಯರಾದ ಆರ್ ಬಸವರಾಜ್, ಎಸ್, ಸಿದ್ದಪ್ಪ, ರಾಯಮ್ಮ ಬೈಯಣ್ಣ, ರತ್ನಮ್ಮ ರಾಜಣ್ಣ, ಹಾಗೂ ಎನ್.ದೇವರಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ಎಚ್. ನಾಗರಾಜ್, ಹಾಲಿನ ಡೈರಿ ಅಧ್ಯಕ್ಷ ಶಂಕರ್ ಮೂರ್ತಿ, ಮಾಜಿ ಹಾಲಿನ ಡೈರಿ ಅಧ್ಯಕ್ಷ ಜಿ, ಮಲ್ಲಿಕಾರ್ಜುನ್, ಹಾಲಿನ ಡೈರಿ ನಿರ್ದೇಶಕ ಕೆ ಸಿ ನಾಗರಾಜ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಕೆ.ಎಸ್ .ಮಲ್ಲಣ್ಣ, ಗ್ರಾಮಸ್ಥರಾದ ಕಲ್ಯಾಣ ಕುಮಾರ್, ಸಿ.ತಿಪ್ಪೇಸ್ವಾಮಿ ಬಾಲರಾಜ್, ಕೆ ಲೋಕೇಶ್, ಗಣಕಯಂತ್ರ ನಿರ್ವಾಹಕ ಸಂತೋಷ್, ಸೇರಿದಂತೆ ಎನ್ ದೇವರಹಳ್ಳಿ ಸಮಸ್ತ ಗ್ರಾಮಸ್ಥರು ಇದ್ದರು
