ಡಿ ಪಿ ಬದಲು ಕ್ಯೂಆರ್ ಕೋಡ್ ಹಾಕಿ : ಸಿ ಕೆ ಬಾಬಾ

ಬೆಂಗಳೂರು

        ಬೆಂಗಳೂರು ಪೊಲೀಸರು  ಒಂದಲ್ಲ ಒಂದು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಜನರಿಗೆ ಹತ್ತಿರವಾಗಲು ಪ್ರಯತ್ನ ಮಾಡುತ್ತಿರುತ್ತಾರೆ. ಇಂತಹ ಪ್ರಯತ್ನಗಳ್ಳಲ್ಲಿ ಒಂದು  ದೂರುದಾರರು ಸುಲಭವಾಗಿ ದೂರು ನೀಡಲು ಕ್ಯೂಆರ್‌ ಕೋಡ್ ನೀಡಿದ್ದಾರೆ. ಈ ಮೂಲಕ ಸಾರ್ವಜನಿಕರು ಕ್ಯೂಆರ್‌ ಕೋಡ್ ಬಳಸಿ ವಿಷಯ ತಲುಪಿಸಬಹುದಾಗಿದೆ.

      ಈ ಬಗ್ಗೆ ಡಿಸಿಪಿ ಸಿಕೆ ಬಾಬಾ ಅವರು, ಆಗ್ನೇಯ ವಿಭಾಗ ಪೊಲೀಸರು ತಮ್ಮ ಅಧಿಕೃತ ಸರ್ಕಾರಿ ಸಂಖ್ಯೆಯ ವಾಟ್ಸಾಪ್ ಡಿಪಿಗೆ ತಮ್ಮ ಫೋಟೋವನ್ನು ಹಾಕುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ. ಇದರ ಬದಲು ವಾಟ್ಸಾಪ್ ಡಿಪಿಗೆ ಲೋಕ ಸ್ಪಂದನ ಕ್ಯೂಆರ್ ಕೋಡ್ ಬಳಸಬೇಕು. ಮೊಬೈಲ್‌ಗೆ ಕರೆ ಬಂದರು ಅದನ್ನು ರಿಸೀವ್ ಮಾಡಿಲ್ಲ ಅಂದ್ರೆ ಸಮಸ್ಯೆಗೆ ಒಳಗಾಗಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

     ಈ ಬಗ್ಗೆ ಮಾತನಾಡಿರುವ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ” ಕೆಲಸದಲ್ಲಿ ಪಾರದರ್ಶಕತೆ ತರಲು ಮತ್ತು ಅಧಿಕಾರಿಗಳ ದಕ್ಷತೆಯನ್ನು ಸುಧಾರಿಸಲು ಈ ವ್ಯವಸ್ಥೆ ಮಾಡಲಾಗಿದೆ. ನಾವು ಜನರ ಟೀಕೆಗಳು ಮತ್ತು ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂಬ ಸಂದೇಶವನ್ನು ಸಮಾಜಕ್ಕೆ ಕಳುಹಿಸುವ ಆಲೋಚನೆಯೂ ಈ ಕ್ರಮದ ಹಿಂದೆ ಇದೆ” ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link