ತುಮಕೂರು
ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕ್ಯಾತ್ಸಂದ್ರ ವಸತಿ ಬಡಾವಣೆಯ ಕ್ರೀಡಾ ಸಮುಚ್ಚಯದಲ್ಲಿ ನಿರ್ಮಿಸಿರುವ ಸಾರ್ವಜನಿಕ ಈಜುಕೊಳ, ಬ್ಯಾಸ್ಕೆಟ್‌ಬಾಲ್, ಟೇಬಲ್ ಟೆನ್ನಿಸ್ ಹಾಗೂ ಸ್ಕೇಟಿಂಗ್ ಚಟುವಟಿಕೆಗಳಿಗೆ ಶುಕ್ರವಾರ ಚಾಲನೆ ನೀಡಲಾಯಿತು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು ವಿವಿಧ ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿ ಹೊರಾಂಗಣ ಆಟವಿರಲಿ, ಒಳಾಂಗಣ ಆಟವಿರಲಿ ಕ್ರೀಡೆ ಎನ್ನುವುದು ಮನುಷ್ಯನ ದೈಹಿಕ ಮಾನಸಿಕ ಆರೋಗ್ಯಕ್ಕೆ ಅತ್ಯಾವಶ್ಯಕ. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಿಂದೆ ನಿರ್ಮಿಸಿದ ಕ್ರೀಡಾ ಸಮುಚ್ಚಯದಲ್ಲಿ ಕ್ರೀಡಾ ಚಟುವಟಿಕೆಗಳು ನಡೆಯದೆ ಇದ್ದ ಕಾರಣ, ಕೋವಿಡ್ ಸಮಯದಲ್ಲಿ ಕಟ್ಟಡವನ್ನು ಕೇರ್ ಸೆಂಟರ್ ಹಾಗೂ ಹೆಚ್ಚು ಮಳೆಬಿದ್ದ ಸಂದರ್ಭದಲ್ಲಿ ನಿರಾಶ್ರಿತರಿಗೆ ಆಶ್ರಯ ತಾಣವಾಗಿ ಬಳಕೆ ಮಾಡಲಾಗಿತ್ತು.
ಪ್ರಸ್ತುತ ಮೂಲ ಉದ್ದೇಶದ ಕ್ರೀಡಾ ಚಟುವಟಿಕೆಗಳಿಗೆ ಈ ಸಮುಚ್ಚಯ ಬಳಕೆಯಾಗಬೇಕೆಂದು ಟೂಡಾದವರು ಮುಂದಾಗಿ ತರಬೇತುದಾರರನ್ನು ಸಂಪರ್ಕಿಸಿ ಈಜು ಸೇರಿದಂತೆ ವಿವಿಧ ಕ್ರೀಡಾಚಟುವಟಿಕೆಗಳಿಗೆ ಚಾಲನೆ ಕೊಡಿಸಿದ್ದಾರೆ. ಸರ್ಕಾರದ್ದೆಂದು ಸಾರ್ವಜನಿಕರು ಯದ್ವಾತದ್ವಾ ಬಳಕೆ ಮಾಡಬಾರದು ಎಂದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ