ಸಂಶೋಧನಾ ಕ್ಷೇತ್ರದಲ್ಲಿ ಹೂಡಿಕೆಗಿರುವ ಅವಕಾಶಗಳನ್ನು ಬಳಸಿಕೊಳ್ಳಿ: ಸಚಿವ ಬಿ.ನಾಗೇಂದ್ರ

ಬೆಂಗಳೂರು 

     ನಮ್ಮ ಸರ್ಕಾರ ರಾಜ್ಯವನ್ನು ಸಂಶೋಧನಾ ಕ್ಷೇತ್ರದ ಪ್ರಮುಖ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಕರ್ನಾಟಕ ರಿಸರ್ಚ್ ಫೌಂಡೇಶನ್‌ನAತಹ ಹಲವಾರು ಯೋಜನೆಗಳನ್ನ ರೂಪಿಸಿದೆ. ಹಾಗೆಯೇ, ಸಂಶೋಧನಾ ಕ್ಷೇತ್ರದ ಹೂಡಿಕೆಗೆ ಅಗತ್ಯ ಪ್ರೋತ್ಸಾಹ ನೀಡಲಾಗುತ್ತಿದ್ದು ಸಂಸ್ಥೆಗಳ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಯುವ ಸಬಲೀಕರಣ, ಕ್ರೀಡೆ ಮತ್ತು ಬುಡಕಟ್ಟು ಕಲ್ಯಾಣ ಸಚಿವರಾದ ಬಿ. ನಾಗೇಂದ್ರ ಕರೆ ನೀಡಿದರು.

     ಇಂದು ನಗರದಲ್ಲಿ ವಿಜ್ಹಿ ಸಂಸ್ಥೆ ಹಾಗೂ ಯೂನಿವರ್ಸಿಟಿ ಆಫ್ ಇಲಿನಾಯ್ಸ್ ಅರ್ಬಾನಾ-ಚಾಂಪೇನ್‌ನ ಮಧ್ಯೆ ಸಂಶೋಧನೆಗಾಗಿ ನಡೆದಂತಹ ಒಡಂಬಡಿಕೆಗೆ ಸಾಕ್ಷಿಯಾಗಿ ಅವರು ಮಾತನಾಡಿದರು. ನಮ್ಮ ದಿನನಿತ್ಯದ ಹಲವಾರು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಶೋಧನೆಗಳ ಪಾತ್ರ ಪ್ರಮುಖವಾದದ್ದು. ಇಂದಿನ ಒತ್ತಡದ ಜೀವನಶೈಲಿಯಿಂದಾಗಿ ಟೈಪ್-2 ನಂತಹ ಕಾಯಿಲೆಗಳಿಗೆ ಜನರು ಸುಲಭವಾಗಿ ತುತ್ತಾಗುತ್ತಿದ್ದಾರೆ.

    ಈ ರೋಗಗಳನ್ನ ನಿಯಂತ್ರಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ಸಂಶೋಧನೆಯ ಅಗತ್ಯವನ್ನು ಮನಗೊಂಡು ನಮ್ಮ ಕನ್ನಡಿಗದ್ದೇ ಆದ ವಿಜ್ಹಿ ಸಂಸ್ಥೆ ಅಮೇರಿಕಾದ ವಿಶ್ವವಿದ್ಯಾಲಯದಲ್ಲಿ 12.5 ಮಿಲಿಯನ್ ಹಣವನ್ನು ಹೂಡಿಕೆ ಮಾಡುತ್ತಿರುವುದು ಬಹಳ ಹೆಮ್ಮೆಯ ವಿಷಯ. ಸಂಶೋಧನೆಗಳ ಮಹತ್ವವನ್ನು ನಮ್ಮ ಸರಕಾರ ಅರಿತಿದೆ.

    ರಾಜ್ಯವನ್ನು ಸಂಶೋಧನೆಯ ಪ್ರಮುಖ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಕರ್ನಾಟಕ ರಿಸರ್ಚ್ ಫೌಂಡೇಶನ್ ಸ್ಥಾಪನೆಗೆ ಎಲ್ಲಾ ಕ್ರಮಗಳನ್ನ ಕೈಗೊಂಡಿದೆ. ಹಾಗೆಯೇ, ಸಂಶೋಧನಾ ಕ್ಷೇತ್ರದಲ್ಲಿ ಹೂಡಿಕೆಗೆ ಬಹಳಷ್ಟು ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಇದನ್ನ ವಿಜ್ಹಿ ಯಂತಹ ಸಂಸ್ಥೆಗಳು ಸದುಪಯೋಗಪಡಿಸಿಕೊಳ್ಳಬೇಕು. ಈ ಮೂಲಕ ರಾಜ್ಯದಲ್ಲಿ ಸಂಶೋಧನೆಯ ಪರಿಸರವನ್ನ ಅಭಿವೃದ್ದಿಪಡಿಸುವ ಜೊತೆಯಲ್ಲಿಯೇ ಉದ್ಯೋಗಾವಕಾಶಗಳ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

    ವಿಜ್ಹಿ ಇಂಕ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಓ ಡಾ. ವಿಷ್ಣುವರ್ಧನ್ ಮಾತನಾಡಿ, ನ್ಯಾಷನಲ್ ಸೆಂಟರ್ ಫಾರ್ ಹೆಲ್ತ್ ಸ್ಟಾಟಸ್ಟಿಕ್ಸ್ ನ ಸಮೀಕ್ಷೆಯಲ್ಲಿ ಶೇಕಡಾ 88 ರಷ್ಟು ವಯಸ್ಕರು ದಿನನಿತ್ಯದ ಚಯಾಪಚಯ ಕ್ರಿಯೆಯಲ್ಲಿ ಅನರ್ಹರಾಗಿದ್ದಾರೆ ಮತ್ತು 1970 ರ ದಶಕದಿಂದ ಸರಾಸರಿ ವಯಸ್ಕರು 15 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದೆ. ಇದರಿಂದಾಗಿ ಅಮೇರಿಕಾದಲ್ಲಿ ಆರೋಗ್ಯದ ವೆಚ್ಚವನ್ನು 4 ಟ್ರಿಲಿಯನ್‌ಗೆ ಹೆಚ್ಚಿಸಿದೆ. ಈ ಪ್ರವೃತ್ತಿ ಭಾರತ ದೇಶದಲ್ಲೂ ಕಾಣಿಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ವಿಜ್ಹಿ ಸಂಸ್ಥೆಯು ತಡೆಗಟ್ಟುವಿಕೆ, ಮನ್ಸೂಚನೆ, ನಿಖರ, ಎಲ್ಲರೂ ಭಾಗವಹಿಸುವಂತಹ ಮತ್ತು ವೈಯಕ್ತಿಕ ಚಿಕಿತ್ಸಾ ವಿಧಾನವನ್ನ ಅನುಷ್ಠಾನಗೊಳಿಸುತ್ತಿದೆ ಎಂದರು.

    ಈ ತಂತ್ರಜ್ಞಾನಗಳು ಜಾಗತಿಕ ಸಹಯೋಗದಲ್ಲಿ ಅಭಿವೃದ್ದಿ ಹೊಂದುತ್ತಿವೆ. ಜಾಗತಿಕ ಪ್ರಯತ್ನದ ಅನ್ವೇಷಣೆಯ ಪ್ರಮುಖ ಭಾಗವಾಗುವ ನಿಟ್ಟಿನಲ್ಲಿ ವಿಜ್ಹಿ ಸಂಸ್ಥೆ, ಅಮೇರಿಕಾದ ಪ್ರಮುಖ ಸಂಶೋಧನಾ ಸಂಸ್ಥೆಯಾಗಿ ಹೊರಹೊಮ್ಮಿರುವ ಯುನಿರ್ವಸಿಟಿ ಆಫ್ ಇಲಿಯಾನ್ಸ್ ಅರ್ಬಾನಾ-ಚಾಂಪೇನ್‌ಲ್ಲಿ “ಶ್ರೀನಿವಾಸಲು ಂIಫಾರ್‌ವೆಲ್‌ನೆಸ್ ಸೆಂಟರ್” ಸ್ಥಾಪನೆಗಾಗಿ 12.5 ಮಿಲಿಯನ್ ಡಾಲರ್ ಹೂಡಿಕೆಗೆ ಇಂದು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

    ಈ ಸಂಶೋಧನಾ ಕೇಂದ್ರವು, ವಿಶ್ವದ ಪ್ರತಿಷ್ಠಿತ ವಿಜ್ಞಾನಿಗಳೂ, ಇಂಜಿನೀಯರ್‌ಗಳೂ ಮತ್ತು ಆರೋಗ್ಯ ವ್ಯವಸ್ಥೆಯ ತಜ್ಞರ ತಂಡವನ್ನು ಒಗ್ಗೂಡಿಸಲಿದ್ದು, ಪ್ರಸ್ತುತ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲಿದೆ. ಹೈದರಾಬಾದ್‌ನಲ್ಲಿ ಭಾರತದ ಮೊದಲ ಐಐಐಟಿಯನ್ನು ಸ್ಥಾಪಿಸಲು ಹೆಸರುವಾಸಿಯಾದ ಕಂಪ್ಯೂಟರ್ ವಿಷನ್‌ನ ಉನ್ನತ ಜಾಗತಿಕ ವಿಜ್ಞಾನಿ, ಹೆಸರಾಂತ ಪ್ರೊ. ನರೇಂದ್ರ ಅಹುಜಾ ಅವರು ಕೇಂದ್ರವನ್ನು ಮುನ್ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಸಂಶೋಧನಾ ಕೇಂದ್ರಗಳನ್ನು ಪ್ರಾರಂಭಿಸುವ ಮೂಲಕ 500 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

     ಕಾರ್ಯಕ್ರಮದಲ್ಲಿ ಇಲಿನಾಯ್ಸ್ ಅರ್ಬಾನಾ ವಿಶ್ವವಿದ್ಯಾಲಯದ ಕುಲಪತಿ-ಚಾಂಪೇನ್ (ಯುಎಸ್‌ಎ) ಪ್ರೊ. ರಾಬರ್ಟಿ ಜೆ. ಜೋನ್ಸ್, ಗ್ರೇಂಜರ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಡೀನ್ ಪ್ರೊ. ರಶೀದ್ ಬಶೀರ್, ಇಲಿನಾಯ್ಸ್ ಅರ್ಬಾನಾ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ ಪ್ರೊ. ನರೇಂದ್ರ ಅಹುಜಾ, ಪ್ರೊಫೆಸರ್-ಚಾಂಪೇನ್ ಕಾರ್ಯಕ್ರಮದಲ್ಲಿ ಕೊಯಿಟಾ ಸೆಂಟರ್ ಫಾರ್ ಡಿಜಿಟಲ್ ಹೆಲ್ತ್, ಐಐಟಿ ಬಾಂಬೆ ಲಿವ್‌ಲೈಫ್ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕ ಪ್ರೊ.ಗಣೇಶ್ ರಾಮಕೃಷ್ಣ, ಕ್ಲಿನಿಕಲ್ ನಿರ್ದೇಶಕ ಮತ್ತು ಕಿಮ್ಸ್ ಮುಖ್ಯ ಶಸ್ತಚಿಕಿತ್ಸಕ ಡಾ.ನಂದಕಿಶೋರ್ ದುಕ್ಕಿಪಾಟಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap