ಜಾತಿಗಣತಿ ವರದಿ : ಜಾರಿ ಮಾಡಿ ಖಳನಾಯಕರಾಗಬೇಡಿ: ವಿ ಸೋಮಣ್ಣ

ತುಮಕೂರು :

    ಜಾತಿಗಣತಿ ವರದಿಯಲ್ಲಿ ಗೊಂದಲ‌ ಸೃಷ್ಟಿಯಾಗಿದ್ದು ಮತ್ತೊಮ್ಮೆ ಸರ್ವೇ ಮಾಡಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ಜಾತಿ ಗಣತಿ ವರದಿ ವಿಚಾರ ಸಂಬಂಧ ಗುಬ್ಬಿಯಲ್ಲಿ ಮಾತನಾಡಿ, ವರದಿಗೆ 10 ವರ್ಷ ಕಳೆದಿದೆ. ಕಾಂತರಾಜುನೇ ಸಹಿ ಹಾಕದೆ ಓಡಿ ಹೋಗಿದ್ದರು. ನಾವು ಜಯಪ್ರಕಾಶ್ ಹೆಗಡೆನಾ ಕರತಂದವು, ಅವರು ಕೂಡ ಎಲ್ಲೋ ಒಂದು ಕಡೆ ಮಕ್ಕಿಕಾ ಮಕ್ಕಿ ಆದರು. ಎಲ್ಲರಿಗೂ ಸ್ವಾರ್ಥ ತುಂಬಿ ತುಳುಕಿತ್ತು.

    ಇದರಲ್ಲಿ ಯಾರಿಗೆ ತೊಂದರೆ ಅನ್ನೋದಕ್ಕಿಂತ ಗೊಂದಲ ಸೃಷ್ಟಿಯಾಗಿದೆ. ಇನ್ನಷ್ಟು ಗೊಂದಲ ಮಾಡಿಕೊಳ್ಳದೆ, ವರದಿ ತಿರಸ್ಕಾರ ಮಾಡಿ, ಮತ್ತೇ ಪ್ರತಿಯೊಂದನ್ನು ಪಾರದರ್ಶಕವಾಗಿ ಪುನಃ ಸರ್ವೇ ಮಾಡಿ ಎಂದರು. ಒಂದು ಕಣ್ಣಿಗೆ ಎಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚುವ ಕಾರ್ಯ ಮಾಡಬೇಡಿ.

   ಇಷ್ಟೆಲ್ಲಾ ಗೊಂದಲ ಇಟ್ಟುಕೊಂಡು ಇದನ್ನು ಜಾರಿ ಮಾಡಿದರೆ ಜೇನುಗೂಡಿಗೆ ಕೈ ಹಾಕಿದ ಹಾಗೆ ಆಗುತ್ತದೆ. ಇದರಿಂದ ಏನೂ ಪ್ರಪಂಚ ಮುಳುಗಿ ಹೋಗೋವುದಿಲ್ಲ. ಸಿದ್ದರಾಮಯ್ಯ ಅರಿವು ಉಳ್ಳವರಾಗಿ ಹೀಗೆ ಮಾಡಬಾರದು ಒಂದೂವರೆ ವರ್ಷ ಸಮಯ ಕೊಟ್ಟು ಮತ್ತೊಮ್ಮೆ ಸರ್ವೇ ಮಾಡಿ.ನಿಮ್ಮ ಕಾಲದಲ್ಲೇ ಅನೌನ್ಸ್ ಮಾಡಿ‌ ನೀವೇ ಕ್ರೆಡಿಟ್ ತಗೊಳ್ಳಿ. ಆಗ ದೇವರಾಜ ಅರಸು ತರ ನಿಮ್ಮನ್ನು ನೆನಪು ಮಾಡಿಕೊಳ್ಳುತ್ತೇವೆ. ಅದನ್ನು ಬಿಟ್ಟು ಇರೋ ವರದಿ ಜಾರಿ ಮಾಡಿ ಖಳನಾಯಕರಾಗಬೇಡಿ ಎಂದರು.

Recent Articles

spot_img

Related Stories

Share via
Copy link