ನವದೆಹಲಿ :
ಮೊದಲ ಡೋಸ್ ಲಸಿಕೆ ಪಡೆದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡರೆ ಆತ ಗುಣಮುಖನಾದ 3 ತಿಂಗಳ ನಂತರ ಎರಡನೆ ಡೋಸ್ ಪಡೆಯಬಹುದು ಎಂಬ ತಜ್ಞರ ಸಲಹೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ.
ಇದುವರೆಗೂ ಕೊರೊನಾ ಸೋಂಕು ಕಾಣಿಸಿಕೊಂಡ ವ್ಯಕ್ತಿ ಮೊದಲ ಡೋಸ್ ಹಾಕಿಸಿಕೊಂಡಿದ್ದರೆ ಆತ ಗುಣಮುಖರಾದ ನಾಲ್ಕು ವಾರಗಳ ನಂತರ ಎರಡನೆ ಲಸಿಕೆ ಹಾಕಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡುತ್ತಿದ್ದರು.
ಇದೀಗ ಸೋಂಕಿತ ವ್ಯಕ್ತಿಗೆ ಮೂರು ತಿಂಗಳ ನಂತರ ಎರಡನೆ ಡೋಸ್ ಹಾಕಿಸಿಕೊಳ್ಳುವುದು ಸೂಕ್ತ ಎಂದು ತಜ್ಞರು ನೀಡಿರುವ ಸಲಹೆಯನ್ನು ಕೇಂದ್ರ ಸರ್ಕಾರ ಅಂಗಿಕರಿಸಿರುವುದರಿಂದ ಇನ್ನು ಮುಂದೆ ಮೊದಲ ಡೋಸ್ ಲಸಿಕೆ ಪಡೆದ ಸೋಂಕಿತ ಗುಣಮುಖರಾದ ಮೂರು ತಿಂಗಳ ನಂತರ ಎರಡನೆ ಡೋಸ್ ಪಡೆಯಬಹುದಾಗಿದೆ.
ಕೋವಿಶೀಲ್ಡ್ ಲಸಿಕೆ ಎರಡು ಡೋಸ್‍ಗಳ ನಡುವಿನ ಅಂತರವನ್ನು 12ರಿಂದ 16 ವಾರಗಳಿಗೆ ವಿಸ್ತರಿಸಿರುವ ಬೆನ್ನಲ್ಲೆ ಈ ಹೊಸ ರೂಲ್ಸ್ ಜಾರಿಯಾಗುತ್ತಿರುವುದು ವಿಶೇಷ.
ಯಾವುದೆ ಡೋಸ್ ಪಡೆದುಕೊಳ್ಳದೆ ಸೋಂಕಿಗೆ ಗುರಿಯಾಗುವ ವ್ಯಕ್ತಿ ಸೋಂಕಿನಿಂದ ಗುಣಮುಖರಾದ ಒಂದು ತಿಂಗಳ ನಂತರ ಮೊದಲನೆ ಡೋಸ್ ಪಡೆಯಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ