ಬೆಂಗಳೂರು ಸೇರಿ 13 ನಗರಗಳಿಗೆ ತಲುಪಿದ ಕೋವಿಶೀಲ್ಡ್ ಲಸಿಕೆ!

ಬೆಂಗಳೂರು :  

    ಕೋವಿಶೀಲ್ಡ್ ಲಸಿಕೆಯನ್ನು ಹೊತ್ತ ಸ್ಪೈಸ್ ಜೆಟ್ ವಿಮಾನ ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ನಿಂದ ಇಂದು ಮುಂಜಾನೆ ಹೊರಟು  ಈಗಾಗಲೇ ಬೆಂಗಳೂರು, ದೆಹಲಿ ಸೇರಿದಂತೆ ದೇಶದ ವಿವಿಧ ಮಹಾನಗರಗಳಿಗೆ ತಲುಪಿದೆ.

     ಇಂದು ಬೆಳಗ್ಗೆ 8 ಗಂಟೆಗೆ ಪುಣೆ ವಿಮಾನ ನಿಲ್ದಾಣದಿಂದ ಸ್ಪೈಸ್ ಜೆಟ್ ವಿಮಾನ ಲಸಿಕೆಯನ್ನು ಹೊತ್ತು ದೆಹಲಿ ವಿಮಾನ ನಿಲ್ದಾಣಕ್ಕೆ 10 ಗಂಟೆ ಹೊತ್ತಿಗೆ ಬಂದಿಳಿಯಿತು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 11.45ರ ಸುಮಾರಿಗೆ ಬಂದಿಳಿದಿದ್ದು, ಅಲ್ಲಿಂದ ವ್ಯಾಕ್ಸಿನ್ ಕೇಂದ್ರಗಳಿಗೆ ರವಾನೆಯಾಗಲಿದೆ. 

      ದೇಶಾದ್ಯಂತ ಸಂಕ್ರಾಂತಿ ಮುಗಿದ ಬಳಿಕ ಜನವರಿ 16ರಂದು ಲಸಿಕೆ ಅಭಿಯಾನ ನಡೆಯಲಿದ್ದು ಅದಕ್ಕೂ ಮೊದಲೇ ಇಂದು ಕೋವಿಶೀಲ್ಡ್ ದೇಶದ ವಿವಿಧ ಭಾಗಗಳಿಗೆ ತಲುಪಲಿದೆ. ತೀವ್ರ ಭದ್ರತೆ ನಡುವೆ ಮೊದಲ ಹಂತದಲ್ಲಿ ಲಸಿಕೆಯನ್ನು ಮೂರು ಟ್ರಕ್ ಗಳಲ್ಲಿ ದೇಶದ ವಿವಿಧ ಕಡೆಗಳಿಗೆ ತಲುಪಿಸಲಾಗುತ್ತಿದೆ.

Image

     ಇಂದು ಪುಣೆಯಿಂದ ದೆಹಲಿ, ಚೆನ್ನೈ, ಕೋಲ್ಕತ್ತಾ, ಗುವಾಹಟಿ, ಶಿಲ್ಲಾಂಗ್, ಅಹಮದಾಬಾದ್, ಹೈದರಾಬಾದ್, ವಿಜಯವಾಡ, ಭುವನೇಶ್ವರ, ಪಾಟ್ನಾ, ಬೆಂಗಳೂರು, ಲಕ್ನೊ ಮತ್ತು ಚಂಡೀಗಢಕ್ಕೆ 56.5 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ 9 ವಿಮಾನಗಳಲ್ಲಿ ಏರ್ ಇಂಡಿಯಾ, ಸ್ಪೈಸ್ ಜೆಟ್ ಮತ್ತು ಇಂಡಿಗೊ ವಿಮಾನದಲ್ಲಿ ರವಾನೆಯಾಗಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಎಸ್ ಪುರಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link