ಎಂ ಎನ್ ಕೋಟೆ: ವೈಭವದ ವೈಕುಂಠ ಏಕಾದಶಿ ಆಚರಣೆ

ಗುಬ್ಬಿ :

    ಗುಬ್ಬಿ ತಾಲ್ಲೂಕಿನ ಪ್ರಸಿದ್ದ‌ ಪುರಾಣ ಎಂ ಎನ್ ಕೋಟೆ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯದಲ್ಲಿ ಶನಿವಾರ ವೈಕುಂಠ ಏಕಾದಶಿ ಜೋರಾಗಿತ್ತು.

     ಬೆಳಿಗ್ಗೆ 4ಗಂಟೆಯಿಂದಲೇ ಸುಪ್ರಭಾತ ಸೇವೆ , ಪಂಚಾಮೃತ ಅಭಿಷೇಕ ಪ್ರಕಾರೋತ್ಸವ ,ಉಯ್ಯಾಲೆ ಉತ್ಸವ ನಡೆಯಿತ್ತು.ಸ್ವಾಮಿಗೆ ವಿಶೇಷ ಅಲಂಕಾರದೊಂದಿಗೆ ಗೋಪೂಜೆ ನಡೆಯಿತ್ತು.ನಂತರ ದೇವಾಲಯದ ಸುತ್ತ ಸ್ವಾಮಿಯ ಉತ್ಸವ ನಡೆಯಿತ್ತು.

    ಬೆಳಿಗೆ 6ಗಂಟೆಯಿಂದಲೇ ಭಕ್ತಾಧಿಗಳಿಗೆ ಸಪ್ತದ್ವಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲೆಯ ವಿವಿದಡೆಗಳಿಂದ ಆಗಮಿಸಿದ ಭಕ್ತರು ಸಾರಥಿ ಸಾಲಿನಲ್ಲಿ ನಿಂತು ಸಪ್ತದ್ವಾರದ ಮೂಲಕ ಸ್ವಾಮಿಯ ದರ್ಶನ ಪಡೆದರು ಏರ್ಪಡಿಸಲಾಗಿದೆ.

    ವಿಶೇಷವಾಗಿ ಭಕ್ತಾಧಿಗಳಿಗೆ ಲಡ್ಡು ಹಾಗೂ ಬಾದಾಮಿ ಹಾಲು ಅವಲಕ್ಕಿಯನ್ನು ವಿತರಿಸಲಾಯಿತ್ತು.ಇದೇ ಸಂಧರ್ಭದಲ್ಲಿ ದೇವಾಲಯ ಸಮಿತಿಯವರು ವೈಕುಂಠ ಏಕಾದಶಿಗೆ ಸಕಲ ಸಿದ್ದತೆ ಮಾಡಿದ್ದರು.ಪ್ರದಾನ ಅರ್ಚಕ ರಾಘವೇಂದ್ರಚಾರ್ ,ಚಿನ್ನು , ದೇವಾಲಯ ಸಮಿತಿಯವರು ಭಾಗವಹಿಸಿದ್ದರು

Recent Articles

spot_img

Related Stories

Share via
Copy link
Powered by Social Snap