ವೈಭವದ 26 ನೇ ವರ್ಷದ ವೈಕುಂಠ ಏಕಾದಶಿ : 50 ಸಾವಿರ ಲಡ್ಡು ತಯಾರಿಕೆ

ಮಧುಗಿರಿ :

    ವೈಭವದ 26 ನೇ ವರ್ಷದ ವೈಕುಂಠ ಏಕಾದಶಿ ಹಬ್ಬದ ಪ್ರಯುಕ್ತ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಸ್ವಾಮಿಗೆ ಇಷ್ಟವಾದ ಸುಮಾರು 50 ಸಾವಿರ ಲಾಡು ಪ್ರಸಾದಗಳನ್ನು ಮಾಡುವಲ್ಲಿ ಮಹಿಳಾ ಭಕ್ತರು ಸೇವಾ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.

    ಡಿಸೆಂಬರ್ 23 ರ ಶನಿವಾರ ದಂದು ವೈಕುಂಠ ಏಕಾದಶಿಯ ಅಂಗವಾಗಿ ಸ್ವಾಮಿಗೆ ಬೆಳಗಿನ ಜಾವ 4:00 ಘಂಟೆಗೆ ಅಭಿಷೇಕ , ವಿಶೇಷ ಪೂಜೆ ಮತ್ತು ದ್ವಾರದರ್ಶನ ಪೂಜಾ ಕೈಂಕರ್ಯಗಳು ರಾತ್ರಿ 11:00 ಘಂಟೆಯ ವರೆವಿಗೆ ನಡೆಯಲಿದೆ.

    ಬುಧವಾರ ಬೆಳಗ್ಗೆ 10:00 ಘಂಟೆಗೆ ಆರಂಭವಾದ ಲಾಡು ತಯಾರಿಕೆಯಲ್ಲಿ 22 ಜನ ಬಾಣಸಿಗರು ಹಾಗೂ 50 ಕ್ಕೂ ಹೆಚ್ಚು ಮಹಿಳಾ ಭಕ್ತರು ಲಾಡು ತಯಾರಿಕೆಯಲ್ಲಿ ಭಾಗವಹಿಸಿದ್ದರು.

   ಲಾಡು ಪ್ರಸಾದವನ್ನು ತಯಾರು ಮಾಡಲು ಲವಂಗ , ದ್ರಾಕ್ಷಿ , ಗೋಡಂಬಿ , ಕಡಲೆ ಹಿಟ್ಟು , ಕಡಲೆ ಎಣ್ಣೆ , ಸಕ್ಕರೆ , ತುಪ್ಪ ವನ್ನು ಬಳಸಲಾಗಿದ್ದು ಒಂದು ಡಬರಿಯಲ್ಲಿ ಸುಮಾರು 80 ಕೆ.ಜಿ ಸಾಮಾರ್ಥ್ಯದ ಡಬರಿಯಲ್ಲಿ 7000 ಸಣ್ಣ ಗಾತ್ರದ ಲಾಡುಗಳನ್ನು ಹಾಗೂ ದೊಡ್ಡ ಗಾತ್ರದ ಲಾಡುಗಳನ್ನು ಪೂಜೆಗಾಗಿ ಬಳಸಲಾಗುತ್ತಿದೆ.

    ಮಹಿಳಾ ಭಕ್ತರು ಶ್ರೀ ಸ್ವಾಮಿಯ ಸೇವೆಯಲ್ಲಿ ತೊಡಗಿ ಕೊಂಡಿದ್ದು ಎರಡು ದಿನಗಳ ಕಾಲ ಲಾಡು ಪ್ರಸಾದ ತಯಾರಿಕೆಯು ನಡೆಯಲಿದ್ದು ವೈಕುಂಠ ಏಕಾದಶಿಯ ಹಬ್ಬದ ಕಾರ್ಯಕ್ರಮದ ಹಬ್ಬದಂದು ದೇವರ ದರ್ಶನಕ್ಕೆ ಬರುವಂತಹ ಭಕ್ತಾಧಿಗಳಿಗೆ ನೀಡುವಂತಹ ಪದ್ಧತಿಯನ್ನು ಸ್ಥಳೀಯ ದೇವಾಲಯದ ಸಮಿತಿ ಹಮ್ಮಿಕೊಂಡಿದೆ.

    ಈ ಕಾರ್ಯಕ್ರಮದಲ್ಲಿ ಎಂ.ಜಿ.ಶ್ರೀನಿವಾಸ್ ಮೂರ್ತಿ , ಆರ್ ಎಲ್ ಎಸ್ ರಮೇಶ್ , ಯತೀಶ್ ಬಾಬು , ಡೋಲಿಬಾಬು , ಕೃಷ್ಣ ಮೂರ್ತಿ , ಶ್ರಿರಂಗನ್ , ಲಕ್ಷ್ಮೀನರಸಿಂಹ , ನೂರಾರು ಮಹಿಳಾ ಭಕ್ತರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap