ವಕೀಲರ ಪ್ರತಿಭಟನೆ : ಸಂರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ

ಹುಬ್ಬಳ್ಳಿ:

    ಕಲಬುರ್ಗಿಯ ವಕೀಲ ವೀರನಗೌಡ ಪಾಟೀಲ ಅವರ ಕೊಲೆ ಖಂಡಿಸಿ ಹುಬ್ಬಳ್ಳಿ ವಕೀಲರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಹೊಸೂರು ಕೋರ್ಟ್‌ನಿಂದ ವಿದ್ಯಾನಗರ ಹೊಸೂರು ಪ್ರಾದೇಶಿಕ ಬಸ್‌ ನಿಲ್ದಾಣದ ಮುಖ್ಯ ರಸ್ತೆವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ ಅವರು, ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಎರಡೂ ಬದಿ ವಾಹನಗಳ ಸಂಚಾರ ತಡೆದು, ಟೈರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಮಾನವ ಸರಪಳಿ ನಿರ್ಮಿಸಿ, ಧರಣಿ ನಡೆಸಿದರು.

    ‘ವಾರದ ಹಿಂದಷ್ಟೇ ಚಿಕ್ಕಮಗಳೂರಿನ ವಕೀಲರ ಸಂಘದ ಸದಸ್ಯ ಪ್ರೀತಮ್‌ ಅವರ ಮೇಲೆ ಹಲ್ಲೆ ನಡೆದಿತ್ತು. ಇದೀಗ ಕಲಬುರ್ಗಿಯ ವಕೀಲ ವೀರನಗೌಡ ಪಾಟೀಲರ ಕೊಲೆಯಾಗಿದೆ. ವಕೀಲರ ಮೇಲೆ ನಡೆಯುತ್ತಿರುವ ಇಂತಹ ಪ್ರಕರಣಗಳು ತೀವ್ರ ಆಘಾತವನ್ನುಂಟು ಮಾಡುತ್ತಿದೆ. ಕಾನೂನು ಕಾಪಾಡುವವರಿಗೆ ರಕ್ಷಣೆಯೇ ಇಲ್ಲವಾಗಿದೆ. ಪದೇಪದೇ ಇಂತಹ ಪ್ರಕರಣಗಳು ಮರುಕಳಿಸುತ್ತಿವೆ. ಈ ಕುರಿತು ಸರ್ಕಾರ ತುರ್ತಾಗಿ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು

    ವಕೀಲರ ಸುರಕ್ಷತೆಗೆ ಸರ್ಕಾರ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು. ಈ ಕುರಿತು ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.ಸಂಘದ ಅಧ್ಯಕ್ಷ ಎಂ.ಎಸ್‌. ಬಾಣದ, ಕಾರ್ಯದರ್ಶಿ ಎಚ್‌.ಎಸ್‌. ಶಿಗ್ಗಾಂವ ಹಾಗೂ ಅಶೋಕ ಅಕ್ಕಿ, ಶ್ರೀಕಾಂತ ಗುಳೇದ, ಜಿ.ಡಿ. ಜಂತ್ಲಿ, ಶಿವಕುಮಾರ, ಕೆ.ಬಿ. ಶಿವಕುಮಾರ, ಎಲ್‌.ಎಸ್‌. ಪಾಟೀಲ, ಎಸ್‌.ವೈ. ಬೆನಕನ್ನವರ, ಕಾಂಚನಾ ಹಣಗಿ, ಶ್ರೇಯಾ ಕಟಗಿಮಠ ಸೇರಿದಂತೆ ನೂರಾರು ಮಂದಿ ವಕೀಲರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap