ತುಮಕೂರು ಸ್ಮಾರ್ಟ್​ ಸಿಟಿ ಪಾರ್ಕ್​ನಲ್ಲಿ ಪ್ರೇಮಿಗಳ ಲವ್ವಿಡವ್ವಿ! ಕಾಲೇಜಿಗೆ ಚಕ್ಕರ್ ಹಾಕಿ ಮೈಮರೆಯುತ್ತಿರುವ ಜೋಡಿಗಳು.

ತುಮಕೂರು: ತುಮಕೂರು ಸ್ಮಾರ್ಟ್​ ಸಿಟಿ ಪಾರ್ಕ್​ನಲ್ಲಿ ಪ್ರೇಮಿಗಳ ಲವ್ವಿಡವ್ವಿ! ಕಾಲೇಜಿಗೆ ಚಕ್ಕರ್ ಹಾಕಿ ಮೈಮರೆಯುತ್ತಿರುವ ಜೋಡಿಗಳು.

ಕಾಲೇಜಿಗೆ ಚಕ್ಕರ್ ಹಾಕಿ ಮಟಮಟ ಮಧ್ಯಾಹ್ನವೇ ಸ್ಮಾರ್ಟ್ ಸಿಟಿ ಪಾರ್ಕ್​ನಲ್ಲಿ ಪ್ರೇಮಿಗಳು ಡ್ಯುಯೆಟ್ ಬಿಜಿಯಾಗಿದ್ದಾರೆ. ಪ್ರಜ್ಞೆ ಮರೆತು ಪಾರ್ಕ್​ನಲ್ಲೇ ಪ್ರೇಮಿಗಳು ಪರಸ್ಪರ ಚುಂಬಿಸಿತ್ತಾ ಸಾರ್ವಜನಿಕರಿಗೆ ಹಿರಿಸುಮುರಿಸು ಉಂಟು ಮಾಡುತ್ತಿದ್ದಾರೆ.

ಪ್ರೇಮಿಗಳ ಲವ್ವಿಡವ್ವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತುಮಕೂರು ನಗರದ ಹೃದಯ ಭಾಗದಲ್ಲಿ ಈ ಪಾರ್ಕ್ ಇದೆ. ಇದರ ಪಕ್ಕವೇ ಪಿಯು ಕಾಲೇಜು ಮೈದಾನವೂ ಇದೆ. ಈ ಪಾರ್ಕ್​ಗೆ ಸಾಲು ಮರದ ತಿಮ್ಮಕ್ಕ ಪಾರ್ಕ್‌ ಎಂದು ಹೆಸರಿದೆ. ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಪಾರ್ಕ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಹಿರಿಯ ನಾಯಕರಿಗೆ ಅನುಕೂಲವಾಗಬೇಕಿದ್ದ ಪಾರ್ಕ್‌ ಈಗ ಪ್ರೇಮಿಗಳ ಪಾಲಾಗಿದೆ.

ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಬಂಕ್‌ ಹಾಕಿ ಪಾರ್ಕ್​ನಲ್ಲಿ ಮೈಮರೆಯುತ್ತಾ ಕೂರುತ್ತಿರುವ ದೃಶ್ಯ ಇತರರಿಗೂ ಮುಜುಗರ ಉಂಟು ಮಾಡಿದೆ.

ಚಿಕ್ಕ ವಯಸ್ಸಿಗೆ ಲವ್​ ಅಂತ ಹೋಗಿ ಅದೆಷ್ಟು ಜನರ ಬದುಕು ಹಾಳಾಗಿದೆ. ಮದ್ವೆ ಆಗ್ತಾರೆ ಅಂತ ಗ್ಯಾರಂಟಿನೂ ಇಲ್ಲ. ಗಟ್ಟಿ ನಿರ್ಧಾರವೂ ತೆಗೆದುಕೊಳ್ಳೋಕೆ ಆಗದೆ, ಬದುಕು ಕಟ್ಟಿಕೊಳ್ಳೋಕು ಆಗದೆ ಸಾವಿನ ಮನೆಯ ಕದ ತಟ್ಟಿದವರೆಷ್ಟೋ? ಲವ್​ ಮಾಡಲಿ ಬೇಡ ಅಂದಿಲ್ಲ, ಹಾಗೇ ಪ್ರಬುದ್ಧತೆಯೂ ಇರಲಿ. ಹೀಗೆ ಸಾರ್ವಜನಿಕರಿಗೆ ಹಿರಿಸುಮುರಿಸು ಉಂಟು ಮಾಡುತ್ತಾ, ಕಾಲೇಜಿಗೂ ಚಕ್ಕರ್​ ಹಾಕಿ ಮೈಮರೆಯುವುದು ಎಷ್ಟು ಸರಿ ಎಂದು ಹಿರಿಯ ನಾಗರಿಕರು ಅಸಮಾಧಾನ ಹೊರಹಾಕಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link