ವರ್ತೂರು ಸಂತೋಷ್‌ : ದಿನಕ್ಕೊಂದು ವಿವಾದ : ಈಗ ಕೇಳಿಬಂದ ವಿವಾದವೇನು….?

ತುಮಕೂರು : 

     ಇತ್ತೀಚೆಗೆ ಹುಲಿ ಉಗುರು ಪ್ರಕರಣದಿಂದಲೇ ಸುದ್ದಿಯಲ್ಲಿದ್ದ ವರ್ತೂರು ಸಂತೋಷ್ ಜೈಲಿಗೂ ಹೋಗಿ ಬಂದರು. ಜೈಲಿನಿಂದ ಹೋಗಿ ಬಂದ ನಂತರ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಈ ನಡುವೆ  ಅವರು ಮದುವೆ  ಆಗಿದ್ದಾರೆ ಎನ್ನಲಾದ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಜಯಶ್ರೀ ಎಂಬುವರ ಜೊತೆ ಸಂತೋಷ್ ಈ ಹಿಂದೆ ಮದುವೆ ಆಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಈ ಕುರಿತು ಬಿಗ್ ಬಾಸ್ ಮನೆಯಲ್ಲಿ ಯಾವತ್ತೂ ಸಂತೋಷ್ ಹೇಳಿಕೊಂಡಿಲ್ಲ. ಆದರೆ, ತನಿಷಾ ಜೊತೆ ಲವ್ವಿಡವ್ವಿ ಶುರು ಮಾಡಿದ್ದಾರೆ ಎನ್ನುವುದೂ ಸುಳ್ಳಲ್ಲ.

     ಬಿಗ್ ಬಾಸ್ ಮನೆಯ ಬಹುತೇಕ ಕಂಟೆಸ್ಟೆಂಟ್ ಗಳು ತಮ್ಮ ಸಂಬಂಧಗಳ ಕುರಿತು ಮಾತನಾಡಿದ್ದಾರೆ. ಮದುವೆ, ಲವ್, ಬ್ರೇಕ್ ಅಪ್, ಕ್ರಶ್, ಡಿವೋರ್ಸ್ ಎಲ್ಲದರ ಬಗ್ಗೆಯೂ ಮಾತನಾಡಿದ್ದಾರೆ. ಹಳೆ ಲವರ್, ಹೊಸ ಲವ್ ಸ್ಟೋರಿ ಬಗ್ಗೆಯೂ ಹಂಚಿಕೊಂಡಿದ್ದಾರೆ. ಆದರೆ, ವರ್ತೂರು ಸಂತೋಷ್ ಮಾತ್ರ ಈವರೆಗೂ ತಮ್ಮ ಮದುವೆ ಬಗ್ಗೆ ಮಾತನಾಡಿಲ್ಲ. ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೂ ಅವರು ತಮ್ಮ ತಾಯಿಯನ್ನು ಮಾತ್ರ ಕರೆದುಕೊಂಡು ಬಂದಿದ್ದರು.

    ಜೊತೆಗೆ ವರ್ತೂರು ಸಂತೋಷ್ ಮದುವೆ ಮಾಡಿಕೊಂಡ ಹುಡುಗಿಯ ತಂದೆಯದ್ದು ಎನ್ನಲಾದ ವಿಡಿಯೋ ಕೂಡ ಸಾಕಷ್ಟು ಸದ್ದು ಮಾಡಿದೆ. ವರ್ತೂರು ಒಬ್ಬ ಪತ್ನಿ ಪೀಡಕ, ಡ್ರಗ್ಸ್ ಸೇವನೆ ಮಾಡುತ್ತಿದ್ದ ಎಂದೆಲ್ಲ ವಿಡಿಯೋದಲ್ಲಿ ಇರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಅವರ ಸಂತೋಷ್ ಗೆ ಹೆಣ್ಣು ಕೊಟ್ಟ ತಂದೆ ಎಂದು ಹೇಳಿಕೊಂಡಿದ್ದಾರೆ.

    ಡ್ರಗ್ಸ್ ಹಾಕೊಳ್ಳೋದು, ಡ್ರಿಂಕ್ಸ್ ಮಾಡೋದು ಅಭ್ಯಾಸ ಅವನಿಗೆ ಒಂದು ಬಾರಿ ಸ್ಪಂದನಾ ಆಸ್ಪತ್ರೆಗೆ ಸೇರಿಸಿದ್ದರು, ಉಳಿಯೋದಿಲ್ಲ ಅಂದುಕೊಂಡಿದ್ದರು, ನಾನೇ ಹೋಗಿ ಅವನನ್ನು ನೋಡಿಕೊಂಡಿದ್ದೆ. ಎರಡು ಮೂರು ತಿಂಗಳು ಸುಧಾರಿಸಿ ಮನೆಗೆ ಕಳಿಸಿದ್ದೀನಿ ಎಂದಿದ್ದಾರೆ.

    ವರ್ತೂರು ಸಂತೋಷ್​ ಮದುವೆ ಆಗಿಲ್ಲ ಎಂದೆ ಎಲ್ಲಾ ಭಾವಿಸಿದ್ದರು. ಆದ್ರೆ ಸಂತೋಷ್​ಗೆ 2020 ರ ಮಾರ್ಚ್ 05 ರಂದು ಮದುವೆ ಆಗಿತ್ತು. ಒಬ್ಬಳು ಮಗಳು ಕೂಡ ಇದ್ದಾಳೆ ಎಂದು ವರ್ತೂರು ಸಂತೋಷ್​​ ಮಾವ ಸೋಮನಾಥ್ ಮಾಹಿತಿ ಬಹಿರಂಗಪಡಿಸಿದ್ದಾರೆ. ಕೇವಲ ಆರೋಪ ಮಾಡಿದ್ದಲ್ಲದೇ ಹೊಸಕೋಟೆ ಬಳಿಯ ಕಾಟಂನಲ್ಲೂರು ಗೇಟ್ ಬಳಿಯ ಕೆ.ಎಂ.ಎಂ ರಾಯಲ್​ನಲ್ಲಿ ಮಾಡಿದ ಅದ್ದೂರಿ ಮದುವೆಯ ವಿಡಿಯೋಗಳನ್ನೂ ರಿಲೀಸ್​ ಮಾಡಿದ್ದಾರೆ.ಈ ಎಲ್ಲದಕ್ಕೂ ಸಂತೋಷ್ ಮನೆಯವರು ಏನು ಉತ್ತರ ಕೊಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap