ಕೈ ತಪ್ಪಿದ “ಕೈ “ಟಿಕೆಟ್‌ : ಹೈಕಮಾಂಡ್‌ ಗೆ ವೀಣಾ ಕಾಶಪ್ಪನವರ್‌ ಪ್ರಶ್ನೆ …!

ಬೆಂಗಳೂರು

     ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಕರ್ನಾಟಕದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಹುತೇಕ ಅಂತಿಮಗೊಂಡಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ. ಈ ಪಟ್ಟಿಯಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ವೀಣಾ ಕಾಶಪ್ಪನವರ್‌ ಅವರ ಹೆಸರು ಕೈ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

    ಕಳೆದ ಐದು ವರ್ಷದಿಂದ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರೂ ಕೂಡ ಟಿಕೆಟ್‌ ಕೈ ತಪ್ಪಿರುವುದು ಬಹುತೇಕ ಖಚಿತವಾಗುತ್ತಿದ್ದಂತೆ ವೀಣಾ ಕಾಶಪ್ಪನವರ್ ಭಾವುಕರಾಗಿದ್ದಾರೆ. ಹೈಕಮಾಂಡ್‌ ನಾಯಕರ ಭೇಟಿ ಬಳಿಕ ಕಣ್ಣೀರಿಟ್ಟ ಅವರು, ಭಾವುಕರಾಗಿ ಪಕ್ಷದ ನಾಯಕರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.

    ನಿನ್ನೆ (ಮಾರ್ಚ್ 21) ಹೈಕಮಾಂಡ್‌ ಭೇಟಿ ಬಳಿಕ ಮಾತನಾಡಿದ ಅವರು, ನನಗೆ ಗೊತ್ತಾಗಬೇಕು ಯಾವ ಮಾನದಂಡದ ಮೇಲೆ ನನ್ನನ್ನು ಕೈ ಬಿಟ್ಟಿದ್ದಾರೆ ಎಂದು, ಕ್ಷೇತ್ರದಲ್ಲಿ ಸಕ್ರಿಯವಾಗಿಲ್ಲದೇ ಇದ್ದರೆ, ಕಳೆದ ಬಾರಿ ಠೇವಣಿ ಕಳೆದುಕೊಂಡಿದ್ದರೆ, ಇಲ್ಲಾ, ಕ್ಷೇತ್ರದ ಜನ ನನ್ನ್ನ್ನು ಗುರುತಿಸದೇ ಇದ್ದರೆ ಹೀಗೆ ಏನಾದರೂ ಕಾರಣ ಬೇಕಲ್ಲ.. ನನಗೆ ಟಿಕೆಟ್‌ ನೀಡದರೆ ಇರಲು ಏನು ಕಾರಣ ಎಂದು ಗೊತ್ತಾಗಬೇಕು ಎಂದಿದ್ದಾರೆ.

   ಕಳೆದ ಐದು ವರ್ಷಗಳಿಂದ ಕ್ಷೇತ್ರದ ಜನರ ಜೊತೆಗೆ ನಾನಿದ್ದೇನೆ. ಅವರ ಕಷ್ಟ ಸುಖಗಳಿಗೆ ಆಗಿದ್ದೇನೆ. ಎಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಲೋಕಸಭಾ ವ್ಯಾಪ್ತಿಯಲ್ಲಿ ಬರು ಎಂಟು ವಿಧಾನಸಭಾ ಕ್ಷೇತ್ರದಲ್ಲಿಯೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ವಿಧಾನಸಭಾ ಚುನಾವಣೆಯಲ್ಲಿ ಅವರ ಪರ ಕೆಲಸ ಮಾಡಿ ಇಂದು ಶಾಸಕರೇ ಬೇಡ ಎನ್ನುತ್ತಿದ್ದಾರೆ ಎಂದರೆ, ಅವರನ್ನೇ ಕೇಳಬೇಕು ಯಾವ ಮಾನದಂಡದ ಮೇಲೆ ನಾನು ಬೇಡ ಎಂದು ಕೇಳಬೇಕು ಎಂದರು.

    ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶಾಸಕರು ನನಗೆ ಮಾತನ್ನು ನೀಡಿದ್ದರು, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಿಮ್ಮ ಪರವಾಗಿ ನಿಲ್ಲುತ್ತೇವೆ. ನಾವು ನಿಮ್ಮ ಹೆಸರನ್ನು ಹೇಳುತ್ತೇವೆ. ನಾವು ನಿಮಗೆ ಸಂಪೂರ್ಣವಾದ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದರು. ತಮ್ಮ ಚುನಾವಣೆ ಸಂದರ್ಭದಲ್ಲಿ ಕೆಲಸ ಮಾಡಿಕೊಂಡು ಈಗ ಒಬ್ಬ ಹೆಣ್ಣುಮಗಳಿಗೆ ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿದರು.

    ನಮ್ಮ ಪಕ್ಷದ ನಾಯಕರು ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ಇದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಏಕೈಕ ಮಹಿಳೆ ನಾನು. ನಮ್ಮ ಜಿಲ್ಲೆಯಲ್ಲಿ ಯಾರೂ ಸ್ಪರ್ಧೆ ಮಾಡಲ್ಲ ಎಂದಾಗ, ನಾನು ಸ್ಪರ್ಧೆ ಮಾಡುತ್ತೇನೆ ಎಂದು ಒಪ್ಪಿ ಮುಂದೆ ಬಂದವಳು. ಸೋಲುತ್ತೀನಿ ಎಂದು ಗೊತ್ತಿದ್ದರೂ ಕೂಡ ಅಂತಹ ಸಂದರ್ಭದಲ್ಲಿಯೂ ಕೂಡ ಸ್ಪರ್ಧೆಗಿಳಿದ್ದಿದ್ದೆ. ಪಕ್ಷ ಕಷ್ಟದಲ್ಲಿರುವ ಸಂದರ್ಭದಲ್ಲಿ ನಾನು ಸ್ಪರ್ಧೆ ಮಾಡಿದ್ದೆ. ಇಂದು ಪಕ್ಷ ಅಧಿಕಾರದಲ್ಲಿದೆ. ಕ್ಷೇತ್ರದಲ್ಲಿ ಐದು ಜನ ಶಾಸಕರಿದ್ದಾರೆ. ಈಗ ಅವಕಾಶ ಇಲ್ಲ ಅಂದರೆ, ಸೋಲುವ ಸಂದರ್ಭದಲ್ಲಿ ವೀಣಾ ಕಾಶಪ್ಪನವರ್‌ ಬೇಕಾಗಿತ್ತು. ಗೆಲ್ಲುವಾಗ ಬೇಡವಾ..? ಎಲ್ಲೋ ತುಳಿಯುವ ಹುನ್ನಾರ ಮಾಡುತ್ತಿದ್ದಾರೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap