ಫ್ರೀಡಂ ಪಾರ್ಕ್ ಬಳಿ ನಿರ್ಮಾಣವಾಗಿರುವ ವೆಹಿಕಲ್ ಪಾರ್ಕಿಂಗ್ ಹೇಗಿದೆ ಗೊತ್ತಾ….?

ಬೆಂಗಳೂರು:

     ಬೆಂಗಳೂರಿನ ಫ್ರೀಡಂ ಪಾರ್ಕ್  ಬಳಿ ನಿರ್ಮಾಣ ಮಾಡಲಾಗಿರುವ ವೆಹಿಕಲ್ ಪಾರ್ಕಿಂಗ್  ಕೊನೆಗೂ ಉದ್ಘಾಟನೆಯಾಗಿದೆ.

    ಇಂದು ಡಿಸಿಎಂ ಡಿಕೆ ಶಿವಕುಮಾರ್ ಫ್ರೀಡಂ ಪಾರ್ಕ್  ಬಳಿ ನಿರ್ಮಾಣ ಮಾಡಲಾಗಿರುವ ವೆಹಿಕಲ್ ಪಾರ್ಕಿಂಗ್  ಅನ್ನು ಲೋಕಾರ್ಪಣೆ ಮಾಡಿದರು.ಫ್ರೀಡಂ ಪಾರ್ಕ್ ಬಳಿ ವಿಶಾಲವಾಗಿದ ಜಾಗದಲ್ಲಿ ಹೈಟೆಕ್​​ ಸೌಲಭ್ಯದೊಂದಿಗೆ. ಪಕ್ಕಾ ಪ್ಲಾನ್​​​ ಮಾಡಿ ವಾಹನ ಪಾರ್ಕಿಂಗ್​ ಮಾಡಲು ಬಿಬಿಎಂಪಿ ನಿರ್ಮಾಣ ಮಾಡಿತ್ತು.

   BBMP ನಗರೋತ್ಥಾನ ಯೋಜನೆಯಡಿ ₹78 ಕೋಟಿ ಅನುದಾನದಲ್ಲಿ ಈ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣವನ್ನ ಬಿಬಿಎಂಪಿ ನಿರ್ಮಾಣ ಮಾಡಿದೆ. ಎರಡು ವರ್ಷದ ಹಿಂದೆ ಕಾಮಗಾರಿ ಕಂಪ್ಲಿಟ್​ ಆಗಿದೆ. ಬೆಂಗಳೂರು ಮೂಲದ ಪ್ರಿನ್ಸ್ ರಾಯಲ್ ಪಾರ್ಕಿಂಗ್ ಸೊಲ್ಯೂಷನ್ ಬಿಸಿನೆಸ್ ಪ್ರೈವೇಟ್ ಲಿಮಿಟೆಡ್‌ಗೆ ವರ್ಷಕ್ಕೆ 1.55 ಕೋಟಿ ರೂಪಾಯಿಗೆ ಇದರ ನಿರ್ವಹಣೆಯ ಹೊಣೆಗಾರಿಕೆಯನ್ನು ನೀಡಿದೆ.

   10 ವರ್ಷಗಳ ಅವಧಿಗೆ ಈ ಗುತ್ತಿಗೆ ಚಾಲ್ತಿಯಲ್ಲಿರಲಿದ್ದು, ವಾರ್ಷಿಕವಾಗಿ ಪಾಲಿಕೆಗೆ 1.5 ಕೋಟಿ ವರಮಾನ ಬರಲಿದೆ ಎಂದು ಅಂದಾಜಿಸಲಾಗಿದೆ.

    ತಂತ್ರಜ್ಞಾನ ಬಳಸಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ ದೇಶದಲ್ಲೇ ಮೊದಲ ಸರ್ಕಾರಿ ವಾಹನ ನಿಲುಗಡೆ ಕಟ್ಟಡ ಇದಾಗಿದ್ದು, ಅಡ್ವಾನ್ಸ್ ಪಾರ್ಕಿಂಗ್ ತಂತ್ರಜ್ಞಾನ (ಎಪಿಟಿ) ಹೊಂದಿದ ಹೆಗ್ಗಳಿಕೆ ಇದಕ್ಕಿದೆ. ಒಮ್ಮೆಲೇ 600 ಕಾರು ಹಾಗೂ 750 ಬೈಕ್‌ಗಳು ನಿಲುಗಡೆ ಸ್ಥಳಾವಕಾಶ ಇದ್ದು, ವಾಹನ ನಿಲುಗಡೆ ಕಟ್ಟಡದಲ್ಲಿ ಮಹಿಳೆಯರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

    ವಾಹನ ನಿಲುಗಡೆ ಕಟ್ಟಡ ನಗದು ರಹಿತ ಹಾಗೂ ಮಾನವ ರಹಿತ ಅಡ್ವಾನ್ಸ್ ತಂತ್ರಜ್ಞಾನ ಹೊಂದಿದ್ದು, ವಾಹನ ನಿಲುಗಡೆ ಶುಲ್ಕವನ್ನು ಫಾಸ್ಟಾಗ್, ಯುಪಿಐ ಪೇಮೆಂಟ್ ಆ್ಯಪ್‌ಗಳ ಮೂಲಕ ಪಾವತಿಸಬಹುದಾಗಿದೆ. ವಾಹನ ನಿಲುಗಡೆಗೆ ಕಟ್ಟಡ ಪ್ರವೇಶಿಸುವಾಗಲೇ ಚಾಲಕ ಹಾಗೂ ವಾಹನದ ಛಾಯಾಚಿತ್ರ ತೆಗೆಯಲಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap