ಕಾನ್ಪುರ:
ನದಿ ಬಳಿಯ ವಿದ್ಯುತ್ ಕಂಬ ಏರಿ ಗಂಗಾನದಿಗೆ ಧುಮುಕುತ್ತಿರುವ ಯುವಕರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಉತ್ತರ ಭಾರತದಲ್ಲಿ ಮಳೆ ಅಬ್ಬರ ಜೋರಾಗಿದ್ದು ದೇಶದ ಪ್ರಮುಖ ನದಿಗಳಲ್ಲಿ ಒಂದಾದ ಗಂಗಾ ನದಿ ತುಂಬಿ ಹರಿಯುತ್ತಿದೆ. ಪರಿಣಾಮ ಗಂಗಾ ನದಿ ಪ್ರವಹಿಸುವ ಘಾಟ್ ಗಳಲ್ಲಿ ಸಾಮಾನ್ಯವಾಗಿ ನದಿ ತುಂಬಿ ಹರಿಯುತ್ತಿದ್ದು ಇದೇ ನದಿಯಲ್ಲಿ ಸ್ಥಳೀಯ ಯುವಕರು ಅಪಾಯಕಾರಿಯಾಗಿ ಸ್ವಿಮ್ಮಿಂಗ್ ಮಾಡುತ್ತಿದ್ದಾರೆ. ಇಂತಹ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಆದರೆ ಇದೇ ಉತ್ತರ ಪ್ರದೇಶದ ಗಂಗಾನದಿ ತಪ್ಪಲಿನ ಭೈರವ್ ಘಾಟ್ ನಲ್ಲಿ ಯುವಕರು ವಿದ್ಯುತ್ ಕಂಬ ಏರಿ ಗಂಗಾನದಿಗೆ ಹಾರುತ್ತಿರುವ ಅಪಾಯಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಾಲಿಗೆ ಚಪ್ಪಲಿಯೂ ಇಲ್ಲದೆ ಒಂದೇ ಒಂದು ಚಡ್ಡಿಯಲ್ಲಿ ಯುವಕನೋರ್ವ ವಿದ್ಯುತ್ ಕಂಬ ಏರಿ ನದಿಗೆ ಹಾರುತ್ತಿದ್ದಾನೆ. ಅದೃಷ್ಟವಶಾತ್ ಕಂಬದಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ಹೀಗಾಗಿ ಯುವಕ ಪಾರಾಗಿದ್ದಾನೆ.
ಇನ್ನು ಉತ್ತರ ಪ್ರದೇಶದಲ್ಲೂ ಭಾರಿ ಮಳೆ ಅಬ್ಬರಿಸುತ್ತಿದ್ದು, ಗಂಗಾ ನದಿ ಸೇರಿದಂತೆ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ಒಂದೆಡೆ ಪ್ರವಾಹದ ಭೀತಿ ನಡುವೆಯೇ ಯುವಕ ಹುಚ್ಚಾಟವೂ ಮುಂದುವರೆದಿದೆ.