ವಿಜ್ಞಾನ ಗ್ಯಾಲರಿ’ ಶೀಘ್ರವೇ ಲೋಕಾರ್ಪಣೆ : ಡಾ. ಸಿಎನ್ ಅಶ್ವತ್ಥನಾರಾಯಣ್

ಬೆಂಗಳೂರು

     ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಸರ್ಕಾರ ಕೈಗೊಂಡಿರುವ ‘ವಿಜ್ಞಾನ ಗ್ಯಾಲರಿ’ ನಿರ್ಮಾಣ ಕಾರ್ಯ ಮುಗಿಯುವ ಹಂತಕ್ಕೆ ಬಂದಿದ್ದು ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ ಸಿಎನ್ ಅಶ್ವತ್ಥನಾರಾಯಣ ಮಂಗಳವಾರ ಹೇಳಿದರು.

    ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯು ಮಲ್ಲೇಶ್ವರ 18ನೇ ಕ್ರಾಸ್ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟಿçÃಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ವಿಜ್ಞಾನದ ಬದುಗಿನ ಕುತೂಹಲ ಉತ್ತೇಜಿಸಲು ವಿದ್ಯಾರ್ಥಿಗಳ ಪ್ರಾಜೆಕ್ಟ್ ಗಳಿಗಾಗಿ 210 ಕೋಟಿ ರೂಪಾಯಿಗಳನ್ನು ಸರ್ಕಾರ ನೀಡಿದೆ. ಜೊತೆಗೆ, ರಾಜ್ಯದ 11 ಕಡೆ ವಿಜ್ಞಾನ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪದವಿ ಪೂರ್ವ ವಿಜ್ಞಾನ ಪ್ರತಿಭೆಗಳಿಗೆ ವಿದ್ಯಾರ್ಥಿ ವೇತನ ಕೊಡಲಾಗುತ್ತಿದೆ ಎಂದು ವಿವರಿಸಿದರು.

    ಇದೇ ಸಂದರ್ಭದಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಲು ‘ಪ್ರಯೋಗ’ ಸಂಸ್ಥೆ ಮೂಲಕ ನಾಗರಾಜ ಮತ್ತು ಅವರ ತಂಡದವರು ಮಾಡುತ್ತಿರುವ ಕೆಲಸವನ್ನು ಪ್ರಶಂಸಿಸಿದರು. ಯಾವುದೇ ಸರ್ಕಾರಿ ಶಿಕ್ಷಣ ಸಂಸ್ಥೆ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಯವರು ವಿದ್ಯಾರ್ಥಿಗಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ತೋರಿಸಲು ಬಯಸಿದರೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಡಲಾಗುವುದು ಎಂದು ನಾರಾಯಣ ನುಡಿದರು.

    ವಿಜ್ಞಾನಿ ಸರ್ ಸಿ ವಿ ರಾಮನ್ ಅವರು ರಾಮನ್ ಎಫೆಕ್ಟ್ ಆವಿಷ್ಕರಿಸಿದ್ದನ್ನು ಗೌರವಿಸಿ ವಿಜ್ಞಾನ ದಿನಾಚರಣೆ ಆಚರಿಸಲಾಗುತ್ತಿದೆ. ಶ್ರೇಷ್ಠ ವಿಜ್ಞಾನಿಯಾದ ನೊಬೆಲ್ ಪುರಸ್ಕöÈತ ಸಿ.ವಿ ರಾಮನ್ ರವರು ಮಲ್ಲೇಶ್ವರದಲ್ಲೇ ಇದ್ದವರು. ವಿಜ್ಞಾನಕ್ಕೆ ಬದುಕನ್ನು ಅರ್ಪಿಸಿಕೊಂಡು ಸಮಾಜಕ್ಕೆ ಅವರು ನೀಡಿದ ಕೊಡುಗೆ ನಮಗೆಲ್ಲಾ ಯಾವತ್ತಿಗೂ ಪ್ರೇರಣೆಯಾಗಬೇಕು ಎಂದು ಆಶಿಸಿದರು.

    ಇದೇ ವೇಳೆ, ಮಲ್ಲೇಶ್ವರದ 18ನೇ ಕ್ರಾಸ್ ಸರ್ಕಾರಿ ಶಾಲೆಯ ಮಕ್ಕಳು ‘ಪುನೀತ್ ಉಪಗ್ರಹ ವಿನ್ಯಾಸ ಹಾಗೂ ಉಡಾವಣೆ’ ಕಾರ್ಯಕ್ರಮದಲ್ಲಿ ತೊಡಗಿರುವುದರ ಬಗ್ಗೆ ಪ್ರಸ್ತಾಪಿಸಿದರು.ಸ್ವಾಮಿ ವಿವೇಕಾನಂದರು, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜೆ ಆರ್ ಡಿ ಟಾಟ ಅವರ ಒಳನೋಟದ ಫಲವಾಗಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಸ್ಥಾಪನೆಯಾದ ಭಾರತೀಯ ವಿಜ್ಞಾನ ಸಂಸ್ಥೆ ಈಗ ದೇಶದ ಅಗ್ರಮಾನ್ಯ ಸಂಸ್ಥೆಯಾಗಿದೆ. ಈ ಸಂಸ್ಥೆಯು ಬೆಂಗಳೂರು ವಿಜ್ಞಾನ, ತಂತ್ರಜ್ಞಾನ ಹಾಗೂ ಸ್ಟಾರ್ಟ್ ಅಪ್ ನಗರಿಯಾಗಿ ಬೆಳೆಯಲು ಹೆಚ್ಚಿನ ಕೊಡುಗೆ ನೀಡಿದೆ ಎಂದರು. 

     ಕಾರ್ಯಕ್ರಮದ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕ ಬಸವರಾಜ್, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಅಯ್ಯಪ್ಪನ್, ವಿಜ್ಞಾನ ಕೌನ್ಸಿಲ್ ಕಾರ್ಯದರ್ಶಿ ಅಶೋಕ್, ಪ್ರಯೋಗ ಸಂಸ್ಥೆ ನಿರ್ದೇಶಕ ನಾಗಭೂಷಣ್, ಪ್ರಾಂಶುಪಾಲ ರತ್ನಾಕರ ಶೆಟ್ಟಿ, ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರತಿಮಾ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap