ಬೆಂಗಳೂರು
ಬೆಲೆ ಏರಿಕೆಯಿಂದಾಗಿ ಗ್ರಾಹಕರು ಮೊದಲೇ ರೋಸಿ ಹೋಗ್ತಾ ಇದ್ದಾರೆ. ಈ ಮಧ್ಯೆ ಟೊಮೆಟೊ (Tomato) ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ, ಮತ್ತೊಂದೆಡೆ ವಿಜಯದಶಮಿಗೆ ಕೌಂಟ್ ಡೌನ್ ಆರಂಭವಾಗಿದ್ದು ಹಬ್ಬಕ್ಕೆ ಹಣ್ಣು-ಹೂವಿನ ಬೆಲೆ ದುಬಾರಿಯಾಗಿದೆ. ಹೂವಿನ ಬೆಲೆ ಕೇಳಿ ಗ್ರಾಹಕರು ಶಾಕ್ ಆಗುತ್ತಿದ್ದಾರೆ. ಹಬ್ಬಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗ್ಲೇ ಹೂವಿನ ಬೆಲೆ ಗಗನಕ್ಕೆ ಏರಿದೆ.
ಕನಕಾಂಬರ ಕೆಜಿಗೆ 2000ರೂ ಇದೆ. ಮಲ್ಲಿಗೆ ಕೆಜಿಗೆ 1000 ರೂ. ಗುಲಾಬಿ ಕೆಜಿಗೆ 500 ರೂ. ಸೇವಂತಿಗೆ ಕೆಜಿಗೆ 450 ರೂ. ಸುಗಂಧರಾಜ ಕೆಜಿಗೆ 300 ರೂ. ಅಣಗಲು ಹೂ ಕೆಜಿ 700. ಚೆಂಡೂ ಹೂ 150. ಕಾಕಾಡ 800. ದುಂಡು ಮಲ್ಲಿಗೆ 800ರಿಂದ200. ಕಮಲ ಜೋಡಿಗೆ 70ರೂ ಇದೆ.
ಸೇಬು ಕೆಜಿಗೆ 120 ರಿಂದ 150ರೂ. ದಾಳಿಂಬೆ ಕೆಜಿಗೆ 250 ರೂ. ಏಲಕ್ಕಿ ಬಾಳೆ ಹಣ್ಣು ಕೆಜಿಗೆ 120 ರೂ. ಸೀತಾಫಲ 180 ರಿಂದ 140 ರೂ. ಸಪೋಟ 200 ರೂ. ದ್ರಾಕ್ಷಿ 180ರಿಂದ200 ರೂ. ಅನಾನಸ್ ಎರಡಕ್ಕೆ 50-100 ರೂ. ಕಿತ್ತಳೆ 50 ರಿಂದ 90 ರೂ. ಮೂಸುಂಬೆ 70 ರೂ ಇದೆ.
ತರಕಾರಿ | ಹಿಂದಿನ ಬೆಲೆ | ಇಂದಿನ ಬೆಲೆ |
ನಾಟಿ ಬೀನ್ಸ್ | 120 | 160 |
ಟೊಮೆಟೊ | 15 | 80 |
ಬಿಳಿ ಬದನೆ | 60 | 40 |
ಮೆಣಸಿನಕಾಯಿ | 40 | 60 |
ನುಗ್ಗೆಕಾಯಿ | 80 | 120 |
ಊಟಿ ಕ್ಯಾರೆಟ್ | 120 | 80 |
ನವಿಲುಕೋಸು | 40 | 40 |
ಮೂಲಂಗಿ | 40 | 30 |
ಹೀರೇಕಾಯಿ | 40 | 60 |
ಆಲೂಗಡ್ಡೆ | 40 | 40 |
ಈರುಳ್ಳಿ | 60 | 40 |
ಕ್ಯಾಪ್ಸಿಕಂ | 40 | 85 |
ಹಾಗಲಕಾಯಿ | 40 | 45 |
ಕೊತ್ತಂಬರಿ ಸೊಪ್ಪುಕಟ್ | 20 | 60 |
ಶುಂಠಿ | 150 | 160 |
ಬೆಳ್ಳುಳ್ಳಿ | 400 | 320 |
ಪಾಲಕ್ | 40ರೂ | |
ನಾಟಿ ಬಟಾಣಿ | 200 | 240 |
ಫಾರಂ ಬಟಾಣಿ | 100 | 160 |
ಮಳೆಯ ಕಾರಣದಿಂದಾಗಿ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸಧ್ಯ 80ರ ಗಡಿ ಮುಟ್ಟಿದೆ. ಮಳೆಯ ಕಾರಣದಿಂದಾಗಿ ಮಾರುಕಟ್ಟೆಗೆ ಟೊಮೆಟೊ ಪೂರೈಕೆಯಾಗದ ಪರಿಣಾಮ ಟೊಮೆಟೊ ಬೆಲೆ ಏರಿಕೆಯಾಗುತ್ತಿದೆ. ಹಬ್ಬಕ್ಕೆ ಟೊಮೆಟೊ ಖರೀದಿ ಮಾಡ್ಬೇಕಾ ಬೇಡ್ವಾ ಎನ್ನುವ ಬಗ್ಗೆ ಗ್ರಾಹಕರು ಗೊಂದಲದಲ್ಲಿದ್ದಾರೆ. ಅಂದಹಾಗೇ ಪ್ರತಿವರ್ಷ ಕೋಲಾರದಲ್ಲಿ, ಹೊಸಕೋಟೆ ಸೇರಿದಂತೆ ವಿವಿಧೆಡೆಯಿಂದ ಟೊಮೆಟೊ ಬರುತ್ತಿತ್ತು. ಆದ್ರೆ ಈ ವರ್ಷ ಹೆಚ್ಚು ಮಳೆಯಾಗಿರುವ ಪರಿಣಾಮ ಈ ಭಾಗದಲ್ಲಿ ಟೊಮೆಟೊ ಬೆಳೆ ಕಡಿಮೆಯಾಗಿದೆ.
ಸಧ್ಯ ಹಬ್ಬ ಇರುವ ಕಾರಣ ಟೊಮೆಟೊಗೆ ಭಾರಿ ಬೇಡಿಕೆ ಇದೆ. ಆದ್ರೆ ಬೇಡಿಕೆಗೆ ತಕ್ಕಂತೆ ಟೊಮೆಟೊ ಸಿಗದ ಪರಿಣಾಮ ಟೊಮೆಟೊ ಬೆಲೆ ಏರಿಕೆಯಾಗುತ್ತಿದೆ. ಸಧ್ಯ ಹೋಲ್ ಸೇಲ್ ನಲ್ಲಿ ಒಂದು ಕೆಜಿ ಟೊಮೆಟೊ ಬೆಲೆ 50 ರಿಂದ 60 ರೂಪಾಯಿ ಇದ್ರೆ, ರಿಟೈಲ್ ನಲ್ಲಿ 80 ರಿಂದ 90 ರವರೆಗೂ ದರ ಫಿಕ್ಸ್ ಮಾಡಲಾಗಿದೆ. ಹೀಗಾಗಿ ಸಧ್ಯ ಮಾರುಕಟ್ಟೆಗೆ 20 ಟೊಮೆಟೊ ಬಾಕ್ಸ್ ಗಳು ಮಾತ್ರ ಬರುತ್ತಿದ್ದು, ಒಟ್ಟು 20% ರಷ್ಟು ಟೊಮೆಟೊ ಕೊರತೆಯಾಗಿದೆ. ಇದರ ಮಧ್ಯೆ ಬಾಂಬೆ, ಕೊಲ್ಕತ್ತಾ, ಗುಜರಾತ್ ಗೂ ಕರ್ನಾಟಕದಿಂದಲೇ ಟೊಮೆಟೊ ಹೋಗುತ್ತಿರುವ ಪರಿಣಾಮ ಬೆಲೆ ಏರಿಕೆಗೆ ಕಾರಣವಾಗುತ್ತಿದೆ ಅಂತ ಟೊಮೆಟೊ ಹೋಲ್ ಸೇಲ್ ವ್ಯಾಪಾರಸ್ಥರು ಹೇಳ್ತಿದ್ದಾರೆ.