ಕಲಬುರಗಿ:
ವಿಜಯೇಂದ್ರನ ಹಾಗೆ ತಾನು ಭಾರೀ ವಿದ್ಯಾವಂತನೇನೂ ಅಲ್ಲ, ಅವರ ಹಾಗೆ ಇಂಗ್ಲಿಷ್ ಮಾತಾಡಲು ಬರಲ್ಲ, ತಾನೊಬ್ಬ ಹಳ್ಳಿ ಗುಗ್ಗು, ಹಾಗಾಗಿ ರಾಷ್ಟ್ರ ರಾಜಕಾರಣಕ್ಕೆ ತನಗಿಂತ ಅವರೇ ಹೆಚ್ಚು ಸೂಟ್ ಆಗುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಒಂದು ಪಕ್ಷ ವರಿಷ್ಠರು ಯತ್ನಾಳ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಮಾಡಿದರೆ, ವಿಜಯೇಂದ್ರ ಪಾಡೇನು ಅಂತ ಕೇಳಿದ ಪ್ರಶ್ನೆಗೆ ಯತ್ನಾಳ್, ಅವರಿಗೆ ಇಂಗ್ಲಿಷ್ ಚೆನ್ನಾಗಿ ಬರುತ್ತದೆ, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಲು ಅವರೇ ಯೋಗ್ಯರು ಎಂದು ಹೇಳಿದರು.