ಈಶ್ವರಪ್ಪ ಮನೆಗೆ ವಿಜೆಯೇಂದ್ರ ಭೇಟಿ

ಶಿವಮೊಗ್ಗ

    ಶಿವಮೊಗ್ಗದ ಗುಂಡಪ್ಪ ಶೆಡ್ ನಲ್ಲಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನಿವಾಸಕ್ಕೆ ಬುಧವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿದರು.

    ಈ ವೇಳೆ ಈಶ್ವರಪ್ಪ ದಂಪತಿಯ ಆಶೀರ್ವಾದ ಪಡೆದರು. ಮನೆಗೆ ಬಂದ ವಿಜಯೇಂದ್ರ ಅವರನ್ನು ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ ಸ್ವಾಗತಿಸಿದರು. ಈ ವೇಳೆ ಈಶ್ವರಪ್ಪ ಅವರನ್ನು ಶಾಲು ಹಾಕಿ ವಿಜಯೇಂದ್ರ ಸನ್ಮಾನ ಮಾಡಿದರು.

   ವಿಜಯೇಂದ್ರ ಅವರನ್ನು ಅಭಿನಂದಿಸಿ ಈಶ್ವರಪ್ಪ ಸಿಹಿ ತಿನ್ನಿಸಿದರು. ಈಶ್ವರಪ್ಪ ಪತ್ನಿ ಜಯಲಕ್ಷ್ಮಮ್ಮ ಕೂಡ ದೇವರ ಕೋಣೆಗೆ ಕರೆದೊಯ್ದು ವಿಜಯೇಂದ್ರ ಅವರಿಗೆ ಬಾಳೆಹಣ್ಣು ನೀಡಿದರು. ಈ ವೇಳೆ ಕಾರ್ಯಕರ್ತರು ಜಯ ಘೋಷ ಮಾಡಿದರು. ನಂತರ ವಿಜಯೇಂದ್ರ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap