ನಾಯಕನಹಟ್ಟಿ
ವಿಕಸಿತ ಭಾರತದ ಕಲ್ಪನೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವಂಥದ್ದು ಎಂದು ನಿವೃತ್ತ ಕೆಎಎಸ್ ಅಧಿಕಾರಿ ರಘುಮೂರ್ತಿ ಹೇಳಿದರು ಅವರು ದಾವಣಗೆರೆ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಜೋಗಿ ಹಟ್ಟಿ ಗ್ರಾಮದಲ್ಲಿ ಆಯೋಜಿಸಿರುವಂತಹ ಎನ್ಎಸ್ಎಸ್ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ವಿಕಸಿತ ಭಾರತ ಮತ್ತು ಯುವ ಸಮೂಹ ಕುರಿತಾದ ವಿಷಯದ ಬಗ್ಗೆ ಮಾತನಾಡಿ ಸ್ವಾತಂತ್ರ್ಯ ನಂತರದಲ್ಲಿ 20 ಅಂಶದ ಕಾರ್ಯಕ್ರಮಗಳು ಮತ್ತು ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿ ನೀರಾವರಿ ಯೋಜನೆಗಳು ವಿಶ್ವವಿದ್ಯಾನಿಯಗಳು ಮತ್ತು ಕಾರ್ಖಾನೆಗಳನ್ನು ಸ್ಥಾಪಿಸಿ ಜನ ಜೀವನವನ್ನು ಸುಧಾರಿಸಿದರೂ ಕೂಡ ಜಾಗತಿಕವಾಗಿ ಭಾರತದ ಅರ್ಥವ್ಯವಸ್ಥೆಯನ್ನು ಮೇಲ್ಪಂತಿಗೆ ತರಲು ಸಾಧ್ಯವಾಗಲಿಲ್ಲ ಸಾಮಾಜಿಕ ಸಿದ್ಧಾಂತಗಳು ಆರ್ಥಿಕತೆಯ ನೆರವಿಗೆ ನಿಲ್ಲಲಿಲ್ಲ
ಏಷ್ಯಾ ಖಂಡದಲ್ಲಿ 1990ರ ಆಸು ಪಾಸಿನಲ್ಲಿ ಭಾರತ ಮತ್ತು ಚೀನಾ ಆರ್ಥಿಕತೆಯಲ್ಲಿ ಸಮಾನ ಸ್ಥಾನದಲ್ಲಿದ್ದ ರಾಷ್ಟ್ರಗಳಾಗಿದ್ದರು ಕೂಡ ಆಧುನಿಕ ಯೋಜನೆ ಮತ್ತು ಅನುಷ್ಠಾನಗಳಿಂದ ಚೀನಾ ಯುರೋಪ್ ರಾಷ್ಟ್ರಗಳನ್ನು ಆರ್ಥಿಕತೆಯಲ್ಲಿ ಮೀರಿಸಿ ಅಮೆರಿಕ ರಾಷ್ಟ್ರದ ಸರಿ ಸಮಾನವಾಗಿದೆ ಇದಕ್ಕೆ ಆದೇಶದ ತಂತ್ರಜ್ಞಾನ ಮೂಲಭೂತ ಸೌಕರ್ಯ ಮತ್ತು ಸಾರಿಗೆ ವ್ಯವಸ್ಥೆ ಮುಖ್ಯ ಕಾರಣವಾಗಿದೆ ನಮ್ಮ ರಾಷ್ಟ್ರದ ಪ್ರಧಾನ ಮಂತ್ರಿಗಳು 2047ಕ್ಕೆ ಭಾರತದ ಆರ್ಥಿಕ ಸ್ಥಿತಿಗತಿ 30 ಟ್ರಿಲಿಯನ್ ಸರಿಸುಮಾರಿಗೆ ಬರಲು ಮತ್ತು ಈ ಅವಧಿಗೆ ಭಾರತ ಸ್ವಾತಂತ್ರ್ಯ ಪಡೆದು ನೂರು ವರ್ಷಗಳಾಗುವ ಸಂಭ್ರಮದಲ್ಲಿ ಜಾಗತಿಕವಾಗಿ ಭಾರತ ನಂಬರ್ ಒನ್ ಆಗುವ ನಿರ್ದಿಷ್ಟ ಯೋಜನೆಗಳನ್ನು ವಿಕಸಿತ ಭಾರತ ಕಲ್ಪನೆಯಲ್ಲಿ ಅಳವಡಿಸಲಾಗಿದೆ
ಇದರಲ್ಲಿ ಭಾರತದ ತಲಾದಾಯ ಈಗಿರುವ ಎರಡು ಲಕ್ಷದಿಂದ 18 ಲಕ್ಷ ಮತ್ತು ಜೀವಿತ ಅವಧಿಯ ಆಯಸ್ಸು ಈಗಿರುವ 73 ವರ್ಷದಿಂದ 84 ವರ್ಷಕ್ಕೆ ಸುಧಾರಿಸುವ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ ಮುಂದಿನ ಎರಡು ಮೂರು ವರ್ಷಗಳಲ್ಲಿ ಭಾರತ ಆರ್ಥಿಕತೆಯಲ್ಲಿ ಜಗತ್ತಿಗೆ ಮೂರನೇ ಸ್ಥಾನದಲ್ಲಿರುವ ಅವಕಾಶವಿದೆ ಜಗತ್ತಿನಲ್ಲಿ ಭಾರತ ಗರಿಷ್ಠ ಪ್ರಮಾಣದ ಯುವ ಸಮೂಹವನ್ನು ಹೊಂದಿದೆ ದೇಶದ ಎಲ್ಲಾ ರಂಗದ ಅಭಿವೃದ್ಧಿಗೆ ಯುವ ಸಮೂಹದ ಪಾತ್ರ ಮಹತ್ವದ್ದಾಗಿದೆ ಈ ಏನ್ ಎಸ್ ಎಸ್ ಶಿಬಿರದ ಮುಖಾಂತರ ಸಾರ್ವಜನಿಕ ಸೇವೆಯ ಅನುಭವ ನಿಮ್ಮದಾಗಲಿ ಈ ಯುವ ಸಮೂಹವು ಸಮಾಜದ ಕಣ್ಗಾವಲಾಗಬೇಕು ಸರ್ಕಾರಿ ಯೋಜನೆಗಳ ಅರಿವು ಯುವ ಸಮೂಹಕ್ಕೆ ಇರಬೇಕು ಭವ್ಯ ಭಾರತದ ಬದಲಾವಣೆಗೆ ಸರ್ಕಾರದೊಂದಿಗೆ ಯುವ ಸಮೂಹ ಕೈಜೋಡಿಸಿ ಎಂದು ಮನವಿ ಮಾಡಿದರು
ಪ್ರಾಧ್ಯಾಪಕರು ಪ್ರಕರ ಬರಹಗಾರರಾದ ಧನಂಜಯ್ ಮಾತನಾಡಿ ಸಾರ್ವಜನಿಕ ಸೇವೆಯಲ್ಲಿ ಯುವ ಸಮೂಹ ಪಾಲ್ಕೊಳ್ಳುವುದು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ ಭಾರತದಲ್ಲಿ ಯುವ ಸಮೂಹ ಶೇಕಡ 30ರಷ್ಟಿದೆ ಕೆಲವೇ ದಿನಗಳಲ್ಲಿ ಯುರೋಪ್ ರಾಷ್ಟ್ರಗಳಲ್ಲಿ ಯುವಕರ ಸಂಖ್ಯೆ ಕಡಿಮೆಯಾಗಿ ಅಲ್ಲಿ ಮಧ್ಯ ವಯಸ್ಸಿನ ಜನರ ಸಂಖ್ಯೆ ಜಾಸ್ತಿಯಾಗಲಿದೆ ಸರ್ಕಾರದ ಯಾವುದೇ ನಿರ್ಣಾಯಕ ಬದಲಾವಣೆಗೆ ಯುವ ಸಮೂಹ ಅಗತ್ಯ ನಿಸ್ವಾರ್ಥ ಬದುಕಿಗೆ ಒಂದು ವಿಶೇಷವಾದ ಸ್ಥಾನಮಾನವಿದೆ ಭವ್ಯ ಭಾರತದ ಕನಸಿಗೆ ಯುವಕರ ಸೇವೆಯು ಸಾಕಾರಗೊಂಡಾಗ ಪ್ರಗತಿ ಕಾಣಲು ಸಾಧ್ಯ ಎಂದು ಹೇಳಿದರು
ತಿಪ್ಪೇರುದ್ರಸ್ವಾಮಿ ವಿದ್ಯಾ ಸಂಸ್ಥೆಯ ಉಪ ಪ್ರಾಂಶುಪಾಲರಾದ ರಮೇಶ್ ಮಾತನಾಡಿ ವಿಶ್ವದಲ್ಲಿ ಭಯೋತ್ಪಾದತೆ ತಾಂಡವಾಡುತ್ತಿದೆ ಇವತ್ತು ಬೇರೆ ದೇಶಗಳಲ್ಲಿರುವಂತಹ ಇಂಥ ಸ್ಥಿತಿ ನಮ್ಮ ದೇಶಗಳಿಗೂ ಸಂಭವಿಸಬಹುದು ಇದರ ನಿರ್ಮೂಲನೆಗೆ ಪ್ರತಿಯೊಬ್ಬರೂ ಯುವಕರು ಕೂಡ ಮಾನವೀಯ ಮತ್ತು ಮೌಲ್ಯಯುತ ಶಿಕ್ಷಣವನ್ನು ಪಡೆಯುವುದು ಅತ್ಯವಶ್ಯಕವಾಗಿದೆ ಭಯೋತ್ಪಾದನೆಯನ್ನು ಬುಡ ಸಮೇತ ನಿರ್ಮೂಲನೆ ಮಾಡಲು ಯುವಕರು ಸಂಕಲ್ಪ ಮಾಡಬೇಕೆಂದು ಹೇಳಿದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಟೇಲ್ ಜಿ ತಿಪ್ಪೇಸ್ವಾಮಿ ಯತ್ನಟ್ಟಿ ಗೌಡ್ರು ಮಾತನಾಡಿ ಇಂತಹ ಶಿಬಿರಗಳ ಮೂಲಕ ಯುವಕರು ಮತ್ತು ವಿದ್ಯಾರ್ಥಿಗಳು ಇಂತಹ ಗ್ರಾಮಗಳಲ್ಲಿನ ಜನತೆಯ ಜೀವನದ ಆರ್ಥಿಕ ಸ್ಥಿತಿಗತಿ ಮತ್ತು ಸಾಮಾಜಿಕ ಸ್ಥಿತಿ ಗತಿಗಳನ್ನು ಅಧ್ಯಯನ ಮಾಡಬೇಕು ಅಧ್ಯಯನದ ವಿಸ್ತೃತ ವರದಿಯನ್ನು ಶಾಲಾ ಸಿಬ್ಬಂದಿಗೆ ನೀಡಬೇಕು ಇಂತಹ ಕಾರ್ಯಕ್ರಮಗಳಲ್ಲಿ ಗ್ರಾಮದ ಎಲ್ಲರೂ ಕೂಡ ಭಾಗವಹಿಸಿ ದಾಗ ಇಂತಹ ಸಮಾರಂಭಗಳಿಗೆ ಮೆರಗು ಬರುತ್ತದೆ ಇದರಿಂದ ಸರ್ಕಾರದಿಂದ ಅನುಷ್ಠಾನಗೊಳಿಸುತ್ತಿರುವಂತಹ ಯೋಜನೆಗಳ ಪರಿಚಯ ಆಗುತ್ತದೆ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗೆ ಸಹಕಾರಿಯಾಗುತ್ತದೆ ಎಂದರು
ಸಮಾರಂಭದಲ್ಲಿ ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಯಾದ ಎಂ.ಟಿ ಸ್ವಾಮಿ ಉದ್ಯಮಿಗಳಾದ ರಾಜೀವ್ ಜೋಗಿಹಟ್ಟಿ ಗ್ರಾಮ ಪಂಚಾಯತಿ ಸದಸ್ಯ ಮಂಜುಳಮ್ಮ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋವಿಂದಪ್ಪ ಶಾಲಾ ಶಿಕ್ಷಕರು ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು
