ಚಂದ್ರಯಾನ-3 : ನಿದ್ರೆಗೆ ಜಾರಿದ “ವಿಕ್ರಮ”

ಬೆಂಗಳೂರು

    ಚಂದ್ರನ ಮೇಲಿರುವ ವಿಕ್ರಮ್ ಲ್ಯಾಂಡರ್ ನ ‘ಹಾಪಿಂಗ್’ ಪರೀಕ್ಷೆಯ ಮಹತ್ವದ ಯಶಸ್ಸಿನ ಬಳಿಕ ಇದೀಗ ಇಸ್ರೋ ವಿಜ್ಞಾನಿಗಳು ಮತ್ತೆ ಲ್ಯಾಂಡರ್ ಅನ್ನು ನಿದ್ರೆಗೆ ಜಾರಿಸಿದ್ದಾರೆ.

    ಇಸ್ರೋ ತನ್ನ ವಿಕ್ರಮ್ ಲ್ಯಾಂಡರ್ ನ ಹಾಪ್ ಪರೀಕ್ಷೆಯ ಬಳಿಕ ಇದೀಗ ಮತ್ತೆ ವಿಕ್ರಮ್ ಲ್ಯಾಂಡರ್ ಅನ್ನು ಸ್ಲೀಪಿಂಗ್ ಮೋಡ್ ಗೆ ಹೊಂದಿಸಿದೆ. ಇಂದು ಬೆಳಗ್ಗೆ ಸುಮಾರು 8 ಗಂಟೆ ವೇಳೆ ವಿಕ್ರಮ್ ಲ್ಯಾಂಡರ್ ಅನ್ನು ಸ್ಲೀಪಿಂಗ್ ಮೋಡ್ ಗೆ ಹಾಕಲಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.

 
     ಆ ಮೂಲಕ ವಿಕ್ರಮ್ ಲ್ಯಾಂಡರ್ ನ ChaSTE, RAMBHA-LP ಮತ್ತು ILSA ಪೇಲೋಡ್‌ಗಳ ಇನ್-ಸಿಟು ಪ್ರಯೋಗಗಳನ್ನು ಹೊಸ ಸ್ಥಳದಲ್ಲಿ ನಡೆಸಲಾಗುತ್ತದೆ. ಪ್ರಸ್ತುತ ಪೇಲೋಡ್‌ಗಳನ್ನು ಈಗ ಸ್ವಿಚ್ ಆಫ್ ಮಾಡಲಾಗಿದೆ. ಲ್ಯಾಂಡರ್ ರಿಸೀವರ್‌ಗಳನ್ನು ಆನ್ ಮಾಡಲಾಗಿದೆ. 

      ವಿಕ್ರಮ್ ಲ್ಯಾಂಡರ್ ಸ್ಲೀಪಿಂಗ್ ಮೋಡ್ ನಲ್ಲಿದ್ದು ಅದರ ರಿಸೀವರ್ ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಚಂದ್ರನಲ್ಲಿ ರಾತ್ರಿಯಾದ ಕಾರಣ ಅಲ್ಲಿ ರೋವರ್ ಮತ್ತು ಲ್ಯಾಂಡರ್ ಗೆ ಸರಬರಾಜಾಗುತ್ತಿದ್ದ ಸೌರಶಕ್ತಿ ಸ್ಥಗಿತವಾಗಿದೆ. ಹೀಗಾಗಿ ಅವುಗಳ ಬ್ಯಾಟರಿ ಖಾಲಿಯಾಗದಂತೆ ನೋಡಿಕೊಂಡು ಉಭಯ ನೌಕೆಗಳನ್ನು ಸ್ಲೀಪಿಂಗ್ ಮೋಡ್ ನಲ್ಲಿರಿಸಲಾಗಿದೆ. ಸೆಪ್ಟೆಂಬರ್ 22, 2023 ರ ಸುಮಾರಿಗೆ ಚಂದ್ರನಲ್ಲಿ ಸೂರ್ಯ ಬೆಳಕು ಪ್ರವೇಶ ಮಾಡಲಿದ್ದು ಆಗ ಮತ್ತೆ ರೋವರ್ ಮತ್ತು ಲ್ಯಾಂಡರ್ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ ಎಂದು ಇಸ್ರೋ ಹೇಳಿದೆ. 

     ನಿನ್ನೆಯಷ್ಟೇ ಚಂದ್ರನ ಮೇಲಿರುವ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಗಳನ್ನು ಸ್ಲೀಪಿಂಗ್ ಮೋಡ್ ನಲ್ಲಿರಿಸಿದ್ದ ಇಸ್ರೋ ವಿಜ್ಞಾನಿಗಳು ಇಂದು ಮಹತ್ವದ ಕಾರ್ಯಾಚರಣೆಗಾಗಿ ವಿಕ್ರಮ್ ಲ್ಯಾಂಡರ್ ನನ್ನು ಮಾತ್ರ ಎಚ್ಚರಿಸಿ ‘ಹಾಪ್’ ಪರೀಕ್ಷೆ ನಡೆಸಿದ್ದರು. ಈ ಹಾಪ್ ಪರೀಕ್ಷೆಯಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಸ್ಲೀಪಿಂಗ್ ಮೋಡ್ ನಲ್ಲಿರಬೇಕಾದರೇ ಅದಕ್ಕೆ ಕಿಕ್ ಸ್ಟಾರ್ಟ್ ಮಾಡಿ ಅದರ ಎಂಜಿನ್ ಗಳನ್ನು ಕೆಲ ಸೆಕೆಂಡ್ ಗಳ ಕಾಲ ಹೊತ್ತಿಸಿ ಅದರ ಸ್ಥಾನ ಪಲ್ಲಟ ಮಾಡುವುದಾಗಿತ್ತು.

    ಈ ಪರೀಕ್ಷೆಯಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿದ್ದು, ಎಂಜಿನ್ ಉರಿಯುತ್ತಿದ್ದಂತೆಯೇ ಸುಮಾರು 40 ರಿಂದ 50 ಸೆಂಮೀ ಮೇಲಕ್ಕೆ ಹಾರಿದ ಲ್ಯಾಂಡರ್ ಬಳಿಕ ಸುರಕ್ಷಿತವಾಗಿ ಮತ್ತೆ ಚಂದ್ರನ ಮೇಲೆ ಲ್ಯಾಂಡ್ ಆಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap