ಅಕ್ರಮ ವಲಸಿಗರ ಗಡೀಪಾರು : ಅಮೆರಿಕಾದ ಮೂರನೇ ವಿಮಾನ ಅಗಮನ

ಚಂಡೀಗಢ:

    112 ಮಂದಿ ಭಾರತೀಯರನ್ನು ಹೊತ್ತ ಅಮೆರಿಕ ವಾಯುಪಡೆಯ ವಿಶೇಷ ವಿಮಾನ ಸಿ17 ಗ್ಲೋಬ್‌ಮಾಸ್ಟರ್ III ನಿನ್ನೆ ಭಾನುವಾರ ತಡರಾತ್ರಿ ಅಮೃತಸರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.ಅಕ್ರಮ ವಲಸಿಗರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮದ ಭಾಗವಾಗಿ ಗಡೀಪಾರು ಮಾಡಲಾದವರನ್ನು ಕರೆತರುತ್ತಿರುವ ಮೂರನೇ ವಿಮಾನ ಇದಾಗಿದೆ. ವಿಮಾನವು ರಾತ್ರಿ 10:03 ಕ್ಕೆ ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿದಿದೆ ಎಂದು ಮೂಲಗಳು ತಿಳಿಸಿವೆ.

   ಅಮೆರಿಕದಿಂದ ಬಂದ ವಿಮಾನವು ಇಂದು ಅಮೃತಸರದ ಶ್ರೀ ಗುರು ರಾಮ್ ದಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಅದರಲ್ಲಿ 112 ಮಂದಿ ಗಡೀಪಾರು ಆದವರಿದ್ದರು ಎಂದು ಮೂಲಗಳು ತಿಳಿಸಿವೆ.

   ಅವರಲ್ಲಿ 31 ಮಂದಿ ಪಂಜಾಬ್‌ನವರು, 44 ಮಂದಿ ಹರಿಯಾಣದವರು, 33 ಮಂದಿ ಗುಜರಾತ್‌ನವರು, ಇಬ್ಬರು ಉತ್ತರ ಪ್ರದೇಶದವರು ಮತ್ತು ತಲಾ ಒಬ್ಬರು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದವರಾಗಿದ್ದಾರೆ. ಈ ವಿಮಾನದಲ್ಲಿ ಅಪ್ರಾಪ್ತ ವಯಸ್ಕರು ಸೇರಿದಂತೆ 89 ಪುರುಷರು ಮತ್ತು 23 ಮಹಿಳೆಯರು ಇದ್ದರು.

   ಪಂಜಾಬ್‌ನ 31 ವ್ಯಕ್ತಿಗಳಲ್ಲಿ 10 ಮಂದಿ ಅಕ್ರಮ ವಲಸಿಗರು ಈ ವರ್ಷದ ಜನವರಿಯಲ್ಲಿ ಅಮೆರಿಕಕ್ಕೆ ಹೋಗಿದ್ದರು ಮತ್ತು ಅವರಲ್ಲಿ 21 ಮಂದಿ ಕಳೆದ ವರ್ಷ ಹೋಗಿದ್ದರು, ಅವರಲ್ಲಿ ಹೆಚ್ಚಿನವರು 18 ರಿಂದ 43 ವರ್ಷ ವಯಸ್ಸಿನವರಾಗಿದ್ದಾರೆ. ಗಡೀಪಾರು ಮಾಡಲಾದವರಲ್ಲಿ ಇಬ್ಬರು ಮಹಿಳೆಯರು ಕೂಡ ಇದ್ದಾರೆ ಎಂದು ಮೂಲಗಳು ತಿಳಿಸಿವೆ. 

   ಗಡಿಪಾರುಗೊಂಡ 119 ಮಂದಿ ಭಾರತೀಯರ ಎರಡನೇ ತಂಡವನ್ನು ಹೊತ್ತ ಅಮೆರಿಕ ವಿಮಾನ ಅಮೃತಸರಕ್ಕೆ ಆಗಮನ

ಭದ್ರತಾ ಅನುಮತಿ, ವಲಸೆ ಮತ್ತು ಹಿನ್ನೆಲೆ ಪರಿಶೀಲನೆಯ ನಂತರ ಗಡೀಪಾರು ಮಾಡಿದವರನ್ನು ಅವರ ಮನೆಗಳಿಗೆ ವಾಪಸ್ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಪಂಜಾಬ್‌ನಿಂದ ಬಂದವರನ್ನು ಪಂಜಾಬ್ ಪೊಲೀಸ್ ವಾಹನಗಳಲ್ಲಿ ಅವರ ಮನೆಗಳಿಗೆ ಕರೆದೊಯ್ಯಲಾಗುತ್ತದೆ. ಇಂದು ಸೋಮವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ಈ ಅಕ್ರಮ ವಲಸಿಗರು ವಿಮಾನ ನಿಲ್ದಾಣದಿಂದ ಹೊರಬರುವ ನಿರೀಕ್ಷೆಯಿದೆ.

   ಹರಿಯಾಣ ಸರ್ಕಾರವು ರಾಜ್ಯಕ್ಕೆ ಸೇರಿದ ಪುರುಷರು ಮತ್ತು ಮಹಿಳೆಯರನ್ನು ಮರಳಿ ಸಾಗಿಸಲು ಅಮೃತಸರ ವಿಮಾನ ನಿಲ್ದಾಣಕ್ಕೆ ವೋಲ್ವೋ ಬಸ್ ಕಳುಹಿಸಿದೆ. ಅಮೆರಿಕದಿಂದ ಗಡೀಪಾರು ಮಾಡಿದ ತನ್ನ ಮೊದಲ ಮತ್ತು ಎರಡನೇ ಬ್ಯಾಚ್ ನಿವಾಸಿಗಳನ್ನು ಮರಳಿ ಕರೆತರಲು ಅಮೃತಸರ ವಿಮಾನ ನಿಲ್ದಾಣಕ್ಕೆ ಪೊಲೀಸ್ ಬಸ್‌ಗಳನ್ನು ಕಳುಹಿಸಿದ್ದಕ್ಕಾಗಿ ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರವನ್ನು ಎಎಪಿ ನೇತೃತ್ವದ ಪಂಜಾಬ್ ಸರ್ಕಾರ ಟೀಕಿಸಿದೆ.

  ಅಮೆರಿಕದಲ್ಲಿ ಈಗಾಗಲೇ ಬಂಧಿಸಲ್ಪಟ್ಟಿರುವ ಅಧಿಕಾರಿಗಳಿಂದ ಅವಮಾನಿತರಾಗಿರುವ ಭಾರತೀಯ ಯುವಕರನ್ನು ಪೊಲೀಸ್ ಬಸ್‌ಗಳಲ್ಲಿ ಹರಿಯಾಣದಲ್ಲಿರುವ ತಮ್ಮ ಊರುಗಳಿಗೆ ಪ್ರಯಾಣಿಸುವಂತೆ ಮಾಡುವ ಮೂಲಕ ಅವರನ್ನು ಮತ್ತಷ್ಟು ಹಿಂಸಿಸಲಾಗುತ್ತಿದೆ ಎಂದು ಪಂಜಾಬ್ ಎನ್‌ಆರ್‌ಐ ವ್ಯವಹಾರಗಳ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಹೇಳಿದ್ದಾರೆ.

   ಅಕ್ರಮವಾಗಿ ದೇಶವನ್ನು ಪ್ರವೇಶಿಸಿದ ಅಥವಾ ವೀಸಾ ಅವಧಿ ಮೀರಿದ ವ್ಯಕ್ತಿಗಳ ಮೇಲೆ ಯುಎಸ್ ವಲಸೆ ಅಧಿಕಾರಿಗಳು ನಡೆಸುತ್ತಿರುವ ಗಡೀಪಾರು ಕ್ರಮ ಇದಾಗಿದೆ.

Recent Articles

spot_img

Related Stories

Share via
Copy link