ಪ್ಯಾರಿಸ್ :
ಆಗಸ್ಟ್ 6 ರಂದು ಒಲಿಂಪಿಕ್ಸ್ನಲ್ಲಿ ನಡೆದ ಮಹಿಳೆಯರ 50 ಕೆಜಿ ತೂಕ ವಿಭಾಗದ ಕುಸ್ತಿ ಸ್ಪರ್ಧೆಯ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದ ಭಾರತದ ವಿನೇಶ್ ಫೋಗಟ್ ಇದೀಗ ಸ್ಪರ್ಧೆಯಿಂದ ಅನರ್ಹಗೊಂಡಿದ್ದಾರೆ.
ವಾಸ್ತವವಾಗಿ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ವಿನೇಶ್ ಅವರ ತೂಕ ಪರೀಕ್ಷೆಯಲ್ಲಿ ವಿನೇಶ್ ಫೋಗಟ್ ಅವರ ತೂಕವು ನಿಗದಿತ ಮಿತಿಗಿಂತ 100 ಗ್ರಾಂ ಹೆಚ್ಚಿರುವುದು ಕಂಡುಬಂದಿದೆ. ನಿಯಮಗಳ ಪ್ರಕಾರ, ಯಾವುದೇ ಕುಸ್ತಿಪಟುವಿಗೆ ಯಾವುದೇ ವಿಭಾಗದಲ್ಲಿ 100 ಗ್ರಾಂ ಹೆಚ್ಚುವರಿ ತೂಕದ ಭತ್ಯೆ ನೀಡಲಾಗುತ್ತದೆ. ಆದರೆ ವಿನೇಶ್ ಅವರ ತೂಕ ಇದಕ್ಕಿಂತ ಹೆಚ್ಚಿದೆ ಹೀಗಾಗಿ ಅವರು ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.